ಹೆಚ್ಚಿನ ಅ‍ಭ್ಯಾಸಕ್ಕಾಗಿ ಬಟನ್‌ ಮೇಲೆ ಕ್ಲಿಕ್‌ ಮಾಡಿ.
For More Practice

8. ಸಮನಾರ್ಥಕ ಪದಗಳು

ಸಮನಾರ್ಥಕ ಪದ ಎಂದರೆ ಒಂದು ಪದಕ್ಕಿರುವ ಅರ್ಥವನ್ನು ಸೂಚಿಸುವ ಇನ್ನೊಂದು ಪದ. ಇದನ್ನು ಪರ್ಯಾಯ ಪದವೆಂತಲೂ ಕರೆಯುತ್ತವೆ. ಪರೀಕ್ಷೆಯಲ್ಲಿ ಸಮನಾರ್ಥಕ ಪದ / ಸಮೀಪವರ್ತಿ ಪದವನ್ನು ಗುರುತಿಸಿ ಎಂದಾಗ ಕನ್ನಡ ಪದವನ್ನು ನೀಡಿದ್ದರೆ ನೀವು ಕನ್ನಡ ಪದವನ್ನು ಗುರುತಿಸಬೇಕು. ಒಂದು ವೇಳೆ ಸಂಸ್ಕೃತಪದವನ್ನು ನೀಡಿದ್ದರೆ ಸಮನಾರ್ಥಕ ಸಂಸ್ಕೃತ ಪದವನ್ನು ಗುರುತಿಸಬೇಕು.

ಉದಾಹರಣೆಗೆ:-
ನೇಸರ:
1) ಆರ್ಯ 2) ರವಿ 3) ಸೂರ್ಯ 4) ಹೊತ್ತು
ಉತ್ತರ: 4) ಹೊತ್ತು (ನೇಸರ ಇದು ಕನ್ನಡದ ಪದವಾಗಿರುವುದರಿಂದ ಕನ್ನಡ ಪದವನ್ನು ನಾವು ಸಮನಾರ್ಥಕ ಪದವಾಗಿ ಗುರುತಿಸಬೇಕು)

PDF ನೊಟ್ಸ್‌ ನಲ್ಲಿ ಒಟ್ಟು 1934 ಪದಗಳಿಗೆ ಸಮನಾರ್ಥಕ ಪದಗಳನ್ನು ನೀಡಲಾಗಿದೆ.

ನೀವು ಉಪಯೋಗಿಸಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೂ ಶೇರ ಮಾಡಿ.

ಪದ ಸಮನಾರ್ಥಕ ಪದಗಳು
1.       ಅಂಕುರ ಚಿಗುರು, ಮೊಳಕೆ
2.      ಅಂಗಣ ಅಂಗಳ, ಮನೆಯ ಆವರಣ
3.      ಅಂಗನೆ ಹೆಂಗಸು, ಸ್ತ್ರೀ
4.      ಅಂಗರಾಜ ಕರ್ಣ, ರಾಧೇಯ
5.      ಅಂಗಾರ ಇದ್ದಲು, ಕೆಂಡ
6.      ಅಂಗೀಕಾರ ಸಮ್ಮತಿ, ಒಪ್ಪಿಗೆ
7.      ಅಂಗುಲಿ ಬೆರಳು
8.      ಅಂಗುಷ್ಠ ಹೆಬ್ಬೆರಳು
9.      ಅಂಘ್ರಿ ಪಾದ, ಚರಣ
10.     ಅಂಜಲಿ ಬೊಗಸೆ
11.     ಅಂಡ ಮೊಟ್ಟೆ, ತತ್ತಿ
12.     ಅಂತ ಕೊನೆ, ಮುಗಿತಾಯ
13.     ಅಂತಃಕರಣ ಮನಸ್ಸು, ಒಳಮನಸ್ಸು
14.     ಅಂತಕ ಯಮ, ಮೃತ್ಯು
15.     ಅಂತರ ವ್ಯತ್ಯಾಸ, ಭೇದ
16.     ಅಂತರಂಗ ಮನಸ್ಸು, ಅಂತರಾಳ
17.     ಅಂತರಿಕ್ಷ ಆಕಾಶ, ಗಗನ
18.     ಅಂತರ್ಧಾನ ಮಾಯ, ಅದೃಶ್ಯ
19.     ಅಂತಿಮ ಕೊನೆಯ, ಮುಕ್ತಾಯದ
20.     ಅಂತ್ಯ ಕೊನೆ, ಮುಕ್ತಾಯ
 ಪದಸಮನಾರ್ಥಕ ಪದಗಳು
21.      ಅಂದಚೆಲುವು, ಸೊಬಗು
22.     ಅಂದಣಮೇನೆ, ಪಲ್ಲಕ್ಕಿ
23.     ಅಂದುಗೆಕಾಲ್‌ಕಡಗ, ನೂಪುರ
24.     ಅಂಧಕುರುಡ, ನೇತ್ರಹೀನ
25.     ಅಂಧಕಾರತಮ, ಕತ್ತಲು
26.     ಅಂಬುಜಕಮಲ, ತಾವರೆ
27.     ಅಂಬುದಮುಗಿಲು, ಮೋಡ
28.     ಅಂಬುಧಿಸಮುದ್ರ, ಕಡಲು
29.     ಅಂಬುರುಹತಾವರೆ, ನೀರಜ
30.    ಅಂಶಭಾಗ, ಘಟಕ
31.    ಅಂಶುಕಿರಣ, ರಶ್ಮಿ
32.    ಅಕ್ಕಹಿರಿಯ ಸೋದರಿ, ಅಗ್ರಜೆ
33.    ಅಕ್ಕರೆಪ್ರೀತಿ, ಮಮತೆ
34.    ಅಕ್ಷಿಕಣ್ಣು, ನೇತ್ರ
35.    ಅಗಸರಜಕ, ಧೋಬಿ
36.    ಅಗಾಧಆಳ, ಅಧಿಕ
37.    ಅಗುರ್ವಸಾಹಸ, ಪರಾಕ್ರಮ
38.    ಅಗ್ನಿಬೆಂಕಿ, ಅನಲ
39.    ಅಗ್ರಪ್ರಥಮ, ಮುಖ್ಯ
40.    ಅಗ್ರಗಣ್ಯಪ್ರಧಾನ, ಮುಖ್ಯ
 ಪದಸಮನಾರ್ಥಕ ಪದಗಳು
41.      ಅಗ್ರಜಅಣ್ಣ, ಹಿರಿಯ ಸೋದರ
42.     ಅಗ್ರಣಿಪ್ರಭು, ಮುಂದಾಳು
43.     ಅಗ್ರಾಹ್ಯಅಸ್ವೀಕೃತ, ಅನರ್ಹ
44.     ಅಗ್ರೇಸರಪ್ರಥಮ, ಶ್ರೇಷ್ಠ
45.     ಅಘಪಾಪ, ಪಾತಕ
46.     ಅಚ್ಯುತವಿಷ್ಣು, ಪರಮಾತ್ಮ
47.     ಅಜಆಡು, ಹೋತ
48.     ಅಜಗರಹೆಬ್ಬಾವು
49.     ಅಜಿನಚರ್ಮ, ತೊಗಲು
50.    ಅಜ್ಞಾತತಿಳಿಯದ, ಗೊತ್ತಾಗದ
51.    ಅಜ್ಞಾನಅವಿದ್ಯೆ, ಮೂರ್ಖತನ
52.    ಅಟವಿಕಾಡು, ವನ
53.    ಅಡಾವುಡಿಆತುರ, ಅವ್ಯವಸ್ಥೆ
54.    ಅಡಿಪಾದ, ಹೆಜ್ಜೆ
55.    ಅಣಕವಿನೋದ, ಅಪಹಾಸ್ಯ
56.    ಅಣಿಸಜ್ಜು, ಅಚ್ಚುಕಟ್ಟು
57.    ಅಣುಅತಿ ಚಿಕ್ಕ ಕಣ, ಸೂಕ್ಷ್ಮ ಅಂಶ
58.    ಅಣ್ಮುಪರಾಕ್ರಮ, ಸಾಮರ್ಥ್ಯ
59.    ಅತಿಶಯಅಧಿಕ, ಅಸಾಧಾರಣ
60.    ಅದಟುಶೌರ್ಯ, ಪರಾಕ್ರಮ
 ಪದಸಮನಾರ್ಥಕ ಪದಗಳು
61.      ಅದಾಲತುಕೋರ್ಟು, ನ್ಯಾಯಾಲಯ
62.     ಅದೃಷ್ಟಭಾಗ್ಯ, ಸುದೈವ
63.     ಅದ್ಭುತಆಶ್ಚರ್ಯಕರ, ವಿಸ್ಮಯಕಾರಿ
64.     ಅದ್ರಿಬೆಟ್ಟ, ಪರ್ವತ
65.     ಅದ್ವಿತೀಯಅಸಮಾನ, ಅನನ್ಯ
66.     ಅಧಮನೀಚ, ಕೀಳು
67.     ಅಧರತುಟಿ
68.     ಅಧರ್ಮಧರ್ಮವಿರುದ್ಧ, ಪಾಪ
69.     ಅಧಿಕಬಹಳ, ಹೆಚ್ಚು
70.    ಅಧಿಕಾರಪದವಿ, ಆಡಳಿತಸ್ಥಾನ
71.    ಅಧಿಪರಾಜ, ನೃಪ
72.    ಅಧಿಪತಿನೃಪತಿ, ಭೂಪಾಲ
73.    ಅಧೀನಆಶ್ರಿತ, ಅವಲಂಬಿತ
74.    ಅಧೀರಧೈರ್ಯಗೆಟ್ಟ, ಹೇಡಿ
75.    ಅಧೈರ್ಯಹೆದರಿಕೆ, ಪುಕ್ಕಲುತನ
76.    ಅಧೋಗತಿದುರ್ಗತಿ, ಅವನತಿ
77.    ಅಧೋಲೋಕಪಾತಾಳ
78.    ಅಧ್ಯಕ್ಷಪ್ರಮುಖ, ಮುಖ್ಯಸ್ಥ
79.    ಅಧ್ಯಯನವ್ಯಾಸಂಗ, ಓದು
80.    ಅಧ್ಯಾಪಕಶಿಕ್ಷಕ, ಗುರು