4. ಕನ್ನಡ ವ್ಯಾಕರಣಕಾರರು (ವೈಯಾಕರಣಿಗಳು)

ಒಂದು ಭಾಷೆಯು ಮೊದಲು ಮಾತಿನಿಂದ (ಧ್ವನಿ/ಸ್ವನಿ) ಪ್ರಾರಂಭವಾಗುತ್ತದೆ. ಆದ್ದರಿಂದ ಯಾವುದೇ ಒಂದು ಭಾಷೆಯ ಆರಂಭ ಧ್ವನಿಯಿಂದ ಪ್ರಾರಂಭವಾಗುವುದೇ ಹೊರತು ವ್ಯಾಕರಣ, ಛಂದಸ್ಸು, ಅಲಂಕಾರಗಳಿಂದಲ್ಲ. ಆದ್ದರಿಂದ ನಮ್ಮ ವೈಯಾಕರಣಿಗಳು ಹೀಗೆ ಹೇಳಿದ್ದಾರೆ.

“ಮಾತು ಮೊದಲು ಆಮೇಲೆ ವ್ಯಾಕರಣ, ಛಂದಸ್ಸು, ಅಲಂಕಾರ”. ಭಾಷೆಯ ಅತ್ಯಂತ ಚಿಕ್ಕ ಘಟಕವೇ ಸ್ವನ/ಧ್ವನಿ. ಒಂದು ಭಾಷೆಯ ಸ್ವರೂಪ, ಧ್ವನಿ, ಉಚ್ಚಾರ, ಅರ್ಥಜ್ಞಾನದೊಂದಿಗೆ ಶ್ರುತಿಗಳನ್ನು ವ್ಯವಸ್ಥಿತ ನಿಯಮಗಳ ಮೂಲಕ ಸೂತ್ರಬದ್ಧವಾಗಿ ತಿಳಿಸುವುದೇ ‘ವ್ಯಾಕರಣ ಶಾಸ್ತ್ರ’.

ಈ ಶಾಸ್ತ್ರವನ್ನು ಪರಿಚಯಿಸಿ ಕೊಡುವವರನ್ನು ವೈಯಾಕರಣಿಗಳೆಂದು ಕರೆಯುತ್ತಾರೆ. ಹೀಗೆ ವ್ಯಾಕರಣ ಬದ್ದವಾಗಿ, ಕಾವ್ಯಸೌಂದರ್ಯವನ್ನು ಸೂತ್ರರೂಪ ಪದ್ಯದಲ್ಲಿ ಪರಿಚಯಿಸುವುದು ‘ಛಂದಸ್ಸುಶಾಸ್ತ್ರ’. ಹಾಗೂ ಕಾವ್ಯವನ್ನು ಶಬ್ದಸಂಪತ್ತಿನಿಂದ ಅಲಂಕರಿಸಿ ಅಂದಗೊಳಿಸುವುದೇ ‘ಅಲಂಕಾರಶಾಸ್ತ್ರ.

ಹೀಗೆ ವ್ಯಾಕರಣಶಾಸ್ತ್ರ, ಛಂದಸ್‍ಶಾಸ್ತ್ರ, ಅಲಂಕಾರ ಶಾಸ್ತ್ರಗಳನ್ನು ತಿಳಿಸುವ ಗ್ರಂಥಗಳಿಗೆ ‘ಲಕ್ಷಣಗ್ರಂಥ’ಗಳೆಂದು ಹೆಸರು.

ಈ ರೀತಿ ಕನ್ನಡ ಭಾಷೆಯನ್ನು ಪರಿಚಯಿಸಿದ ಕನ್ನಡದ ಅತ್ಯಂತ ಪ್ರಮುಖ ವೈಯಾಕರಣಿಗಳ ಸಣ್ಣ ಪರಿಚಯ ನೊಡೋಣ ಬನ್ನಿ.

  1. 2ನೇ ನಾಗವರ್ಮ (ಕಾಲ: ಕ್ರಿ.ಶ 1042)
  2. ಕೇಶಿರಾಜ (ಕಾಲ: ಕ್ರಿ.ಶ 1260)
  3. ಭಟ್ಟಾಕಳಂಕದೇವ (ಕಾಲ: ಕ್ರಿ.ಶ 1604)

2ನೇ ನಾಗವರ್ಮ

ಕಾಲ: ಕ್ರಿ.ಶ 1042 (ಆರ್ ನರಸಿಂಹಾಚಾರ ಮತ್ತು ಕೆ. ಎ ನಿಲಕಂಠಶಾಸ್ತ್ರೀ ಯವರ ಪ್ರಕಾರ 1145 ರಿಂದ 1150)

  • ಎಂ ಗೋವಿಂದ ಪೈ ರವರ ಪ್ರಕಾರ 2ನೇ ನಾಗವರ್ಮನ ಕಾಲ ಕ್ರಿ.ಶ 1042
  • ಚಾಲುಕ್ಯ ರಾಜನಲ್ಲಿ 2ನೇ ನಾಗವರ್ಮ ಕಟಕೋಪಾಧ್ಯಾಯನಾಗಿದ್ದನು.
  • ಜನ್ನ ಕವಿಗೆ ಉಪಾಧ್ಯಾಯನಾಗಿದ್ದನು. ಇವರ ಗುರು : ವೀರಭಟ್ಟಾರಕ
  • ಕಾಳಿದಾಸ, ಅಸಗ, ಗುಣನಂದಿ, ಪೊನ್ನ, ಮಯೂರ, ಬಾಣ ಸಮಾನನಾಗಿದ್ದಾನೆ.
  • ಕನ್ನಡ ವ್ಯಾಕರಣಕ್ಕೆ 2ನೇ ನಾಗವರ್ಮನು ಮೊದಲಿಗನಾಗಿದ್ದಾನೆ.

ಪ್ರಮುಖ ಗ್ರಂಥಗಳು :

  1. ಕರ್ಣಾಟಕ ಭಾಷಾಭೂಷಣ (ಸಂಸ್ಕೃತದಲ್ಲಿ ದೊರೆತ ಮೊದಲ ಕನ್ನಡ ವ್ಯಾಕರಣ ಗ್ರಂಥ)
  2. ಕಾವ್ಯಾವಲೋಕನ (ಲಕ್ಷಣ ಗ್ರಂಥ)
  3. ಅಭಿದಾನ ವಸ್ತುಕೋಶ (ಕಂದವೃತ್ತಗಳಲ್ಲಿ – ನಿಘಂಟು)
  4. ಛಂದೋವಿಚಿತಿ (ಛಂದೋಗ್ರಂಥ)

ಕೆಲವು ಪ್ರಮುಖ ವಿಷಯಗಳು

  • ‘ಕರ್ನಾಟಕ ಭಾಷಾಭೂಷಣ’ ಕನ್ನಡ ವ್ಯಾಕರಣ ಗ್ರಂಥ ಇದನ್ನು ಸಂಸ್ಕೃತದಲ್ಲಿ ಬರೆಯಲಾಗಿದೆ.
  • ‘ಕಾವ್ಯಾವಲೋಕನ’ವು ವ್ಯಾಕರಣವನ್ನಷ್ಟೆ ಅಲ್ಲದೆ ಛಂದಸ್ಸು, ಅಲಂಕಾರಗಳನ್ನು ಒಳಗೊಂಡಿದೆ ಮತ್ತು ಇದರಲ್ಲಿ ಒಂದನೇ ಭಾಗ ಶಬ್ದಸ್ಮೃತಿ ಇದು ವ್ಯಾಕರಣ ಶಾಸ್ತ್ರವಾಗಿದೆ. ಆದ್ದರಿಂದ ಈ ಗ್ರಂಥವನ್ನು ʼಲಕ್ಷಣಗ್ರಂಥʼ ಎಂದು ಕರೆಯುತ್ತಾರೆ.
  • 2ನೇ ನಾಗವರ್ಮನಿಗೆ ರಾಷ್ಟ್ರಕೂಟ ದೊರೆ ಜಗದೇಕಮಲ್ಲನು ಕಟಕಾಚಾರ್ಯ ಮತ್ತು ಕಟಕೋಪಾಧ್ಯಾಯ (ಸೈನ್ಯ ಶಿಕ್ಷಕ) ಎಂಬ ಬಿರುದುಗಳನ್ನು ನೀಡಿ ಗೌರವಿಸಿದ್ದನು.
  • 2ನೇ ನಾಗವರ್ಮನನ್ನು ‘ನಾಕಿಗ’ ಎಂದು ಕೂಡ ಕರೆಯುತ್ತಾರೆ. ಇವರು ‘ಕವಿಕರ್ಣಪೂರ’, ‘ಕವಿತಾಗುಣೋದಯ’ ಎಂಬ ಬಿರುದುಗಳನ್ನು ಹೊಂದಿದ್ದಾನೆ.
  • “ಕರ್ನಾಟಕ ಭಾಷಾಭೂಷಣ” ಮತ್ತು “ಕಾವ್ಯಾವಲೋಕನ” ಈ ಎರಡು ಗ್ರಂಥಗಳು ಪ್ರಮುಖವಾದವು. 2ನೇ ನಾಗವರ್ಮನ ಕಾಲ ಸು. ಕ್ರಿ.ಶ 1042. ಕಾವ್ಯಾವಲೋಕನದಲ್ಲಿರುವ  ಭಾಗ 1 ರಲ್ಲಿ “ಶಬ್ದಸ್ಮೃತಿ” ಎಂಬ ಹೆಸರಿನಿಂದ ಬರೆದ ವಿಚಾರವೇ ವ್ಯಾಕರಣ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರಮುಖ ಭಾಗವಾಗಿದೆ. “ಕಾವ್ಯಾವಲೋಕನ” ಕನ್ನಡದ ಮೊದಲ ಅಲಂಕಾರಶಾಸ್ತ್ರವೂ ಕೂಡಾ ಹೌದು.

    ಶಬ್ದಸ್ಮೃತಿಯಲ್ಲಿ ಒಟ್ಟು 5 ಭಾಗಗಳಿದ್ದು ಬಹು ಸಂಕ್ಷೀಪ್ತವಾಗಿ ಹಳಗನ್ನಡ ವ್ಯಾಕರಣದ ವಿಷಯವನ್ನು ವಿವರಿಸಲಾಗಿದೆ.

    ಶಬ್ದಸ್ಮೃತಿಯಲ್ಲಿರುವ ಆ 5 ಭಾಗಗಳೆಂದರೆ,

    (1)          ಸಂಧಿ
    (2)          ನಾಮ
    (3)          ಸಮಾಸ
    (4)          ತದ್ಧಿತ
    (5)          ಅಖ್ಯಾತ

ಸೂಚನೆ: 1ನೇ ನಾಗವರ್ಮ ಮತ್ತು ಇತರೆ ವಿಷಯದೊಂದಿಗೆ ಗೊಂದಲ ಮಾಡಿಕೊಳ್ಳಬೇಡಿ.

1ನೇ ನಾಗವರ್ಮ

  • 1ನೇ ನಾಗವರ್ಮನ ಕಾಲ: 990
ಇವರ 2 ಕೃತಿಗಳು/ ಗ್ರಂಥಗಳು :
  1. ಛಂದೋಂಬುದ್ಧಿ (ಕನ್ನಡದ ಮೊಟ್ಟ ಮೊದಲ ಛಂದೋಗ್ರಂಥ)
  2. ಕರ್ನಾಟಕ ಕಾದಂಬರಿ/ ಕಾದಂಬರಿ ( ಬಾಣನ ಸಂಸ್ಕೃತ ʼಕಾದಂಬರಿʼಯನ್ನು ‘ಕರ್ನಾಟಕ ಕಾದಂಬರಿ’ ಎಂದು ಅನುವಾದ ಗೊಂಡಿದ್ದು, ಇದು ಕನ್ನಡದ ಮೊಟ್ಟ ಮೊದಲ ಅನುವಾದಿತ ಕೃತಿಯಾಗಿದೆ. ಮೂಲದಲ್ಲಿ ಬಾಣನ ಕೃತಿಯು ಗದ್ಯಕಾವ್ಯವಾಗಿದ್ದು ಇದನ್ನು 1ನೇ ನಾಗವರ್ಮ ಛಂಪೂಗ್ರಂಥವನ್ನಾಗಿ ರಚಿಸಿದ್ದಾನೆ.

ಕಾದಂಬರಿ’ ನಾಯಕಿಯ ಹೆಸರು ಕಾದಂಬರಿ. ಇದರಲ್ಲಿ ಗಂಧರ್ವ ಕನ್ಯೆ ಕಾದಂಬರಿಗೂ- ಚಂದ್ರಪೀಡನೆಂಬ ರಾಜಕುಮಾರನಿಗೂ ನಡೆದ ಪ್ರಣಯವೇ ಕಾದಂಬರಿ ಕೃತಿಯ ಕಥಾವಸ್ತುವಾಗಿದೆ. ಇದರೊಂದಿಗೆ ಪುಂಡರಿಕ – ಮಹಾಶ್ವೇತೆಯರ ಪ್ರಣಯ ಕಥೆಯು ಇದರ ಕಥಾ ವಸ್ತುವಾಗಿದೆ.

ಕಾದಂಬರಿ- ಚಂದ್ರಪೀಡ
ಪುಂಡರಿಕ-ಮಹಾಶ್ವೇತೆ
ವೈಶಂಪಾಯನ- ಮಹಾಶ್ವೇತೆ)

  • ಪಂಪ, ಪೊನ್ನರ ವೆಂಗಿಮಂಡಲದ ವೆಂಗಿಪುಳವು ಇವರ ಜನ್ಮಸ್ಥಳ.
  • ದೇವಕಬ್ಬೆ-ಪೆಣ್ಣಮಯ್ಯ ಪೋಷಕರು
  • 1ನೇ ನಾಗವರ್ಮನ ಛಂದೋಂಬುದ್ಧಿಯನ್ನು ಮೊದಲು ಸಂಪಾದಿಸಿದವರು – ಕುಕ್ಕಿಲ್ ಕೃಷ್ಣಭಟ್ಟ 
  • ಅದೊಂದು ಮೇಘಚುಂಬಿಯಾದ ಶೃಂಗಾರ ಗೋಪುರ’ ಎಂದವರು – ಕುವೆಂಪು
ಈ ಕೆಳಗಿನ ಗ್ರಂಥಗಳೊಂದಿಗೆ ಗೊಂದಲಗೊಳ್ಳಬಾರದು.
  • ‘ಛಂದೋನುಶಾಸನ’ ಗ್ರಂಥವನ್ನು 11 ನೇ ಶತಮಾನದಲ್ಲಿ ಜಯಕೀರ್ತಿ ಬರೆದಿದ್ದಾರೆ.
  • ‘ಛಂದೋವಿಕಾಸ’ ಕೃತಿಯನ್ನು ಡಿ.ಎಸ್ ಕರ್ಕಿ ಯವರು ಬರೆದಿದ್ದಾರೆ.
  • ‘ಛಂದೋವಿಚಿತಿ’ ಗ್ರಂಥವನ್ನು 2ನೇ ನಾಗವರ್ಮ ಬರೆದಿದ್ದಾರೆ.

ಕೇಶಿರಾಜ

ಕಾಲ : ಕ್ರಿ.ಶ 1260
ತಂದೆ : ಮಲ್ಲಿಕಾರ್ಜನದೇವ ಸೋದರ ಮಾವ : ಜನ್ನ ಕವಿ
ತಾತ (ತಾಯಿಯ ತಂದೆ) ಕವಿ ಸುಮನೋಬಾಣ (ಮಹಾಕವಿಗಳು)

ಪ್ರಮುಖ ಗ್ರಂಥಗಳು:

‘ಶಬ್ದಮಣಿದರ್ಪಣ’ ಇದು ಹಳೆಗನ್ನಡ ವ್ಯಾಕರಣದ ಸಮಗ್ರ ಸ್ವರೂಪವನ್ನು ತಿಳಿಸುವ ಲಕ್ಷಣ ಗ್ರಂಥವಾಗಿದೆ. ಆದ್ದರಿಂದ ಶಬ್ದಮಣಿದರ್ಪಣವನ್ನು ಕನ್ನಡದ ಮೊದಲ ವ್ಯಾಕರಣ ಗ್ರಂಥವೆಂದು ಕರೆಯುತ್ತಾರೆ.

ಇದರಲ್ಲಿ ಒಟ್ಟು 9 ಭಾಗಗಳಿದ್ದು ಅವು…

(1)          ಅಕ್ಷರ-ಶಬ್ದ- ಸಂಧಿ
(2)          ನಾಮ
(3)          ಸಮಾಸ
(4)          ತದ್ಥಿತ
(5)          ಆಖ್ಯಾತ
(6)          ಧಾತು
(7)          ಅಪಭ್ರಂಶ
(8)          ಅವ್ಯಯ
(9)          ಪ್ರಯೋಗಸಾರ (ಇದು ಶಬ್ದಾರ್ಥ ನಿರ್ಣಯವನ್ನು ತಿಳಿಸುತ್ತದೆ.)

ಕೆಲವು ಪ್ರಮುಖ ವಿಷಯಗಳು

  • ಕೇಶಿರಾಜನ ಶಬ್ದಮಣಿದರ್ಪಣವು ಸೂತ್ರ ರೂಪದ ಕಂದ್ಯಪದ್ಯವಾಗಿದೆ.
  • ಶಬ್ದಮಣಿದರ್ಪಣದಲ್ಲಿ ಒಟ್ಟು 322 ಸೂತ್ರಗಳಿವೆ.
  • ಇದು ಕನ್ನಡದ ಪ್ರಥಮ ವ್ಯಾಕರಣ ಗ್ರಂಥವಾಗಿದೆ.
  • ಶಬ್ದಮಣಿದರ್ಪಣ ವನ್ನು ಹಳೆಗನ್ನಡದಲ್ಲಿ ಬರೆಯಲಾಗಿದೆ.
  • ಕನ್ನಡದ ವರ್ಣಮಾಲೆಯಲ್ಲಿ 47ಅಕ್ಷರಗಳಿವೆ ಎಂದು ಕೇಶಿರಾಜನು ತನ್ನ ಶಬ್ದಮಣಿದರ್ಪಣದಲ್ಲಿ ತಿಳಿಸಿದ್ದಾನೆ.
  • ಕೇಶಿರಾಜನ ಪ್ರಕಾರ ಕನ್ನಡದಲ್ಲಿ ಶುದ್ಧಗೆಗಳ ಸಂಖ್ಯೆ 47
  • ಶಬ್ದಮಣಿದರ್ಪಣವನ್ನು ಮೊಟ್ಟ ಮೊದಲಿಗೆ ಪ್ರಕಟಿಸಿದ/ ಸಂಪಾದಿಸಿದ ಆಂಗ್ಲ ಪಂಡಿತ ಎಫ್ ಕಿಟೆಲ್.
  • ಕೇಶಿರಾಜನ ಪ್ರಕಾರ ಕನ್ನಡದಲ್ಲಿ ಒಟ್ಟು 9 ಪ್ರಕಾರದ ಲಿಂಗಗಳಿವೆ.
  • ಕೇಶಿರಾಜನು ಹೇಳುವ ಪ್ರಕಾರ ಕನ್ನಡದ ಅಸಾಧಾರಣ ಲಕ್ಷಣಗಳಲ್ಲಿ ಗಮಕಸಮಾಸವು ಕೂಡ ಒಂದು.
  • ಕೇಶಿರಾಜನ ಪ್ರಕಾರ ಪಂಚಮಿ ವಿಭಕ್ತಿ ಇಲ್ಲ.
  • ಕೇಶಿರಾಜ ಅಕ್ಷರಕ್ಕೆ ‘ವರ್ಣ’ ಎಂದು ಕರೆಯುತ್ತಾನೆ.

ಭಟ್ಟಾಕಳಂಕದೇವ

ಕಾಲ : ಕ್ರಿ.ಶ 1604
ಗುರು : ಅಕಳಂಕದೇವ

ಪ್ರಮುಖ ಗ್ರಂಥಗಳು: ಶಬ್ದಾನುಶಾಸನ (ಇದೊಂದು ಲಕ್ಷಣ ಗ್ರಂಥ, ಸಂಸ್ಕೃತದಲ್ಲಿ ರಚನೆಯಾದ ಕನ್ನಡ ವ್ಯಾಕರಣ ಗ್ರಂಥವಾಗಿದೆ. ಈ ಕೃತಿಯು 2ನೇ ನಾಗವರ್ಮನ ಶಬ್ದಸ್ಮೃತಿಯನ್ನು ಅನುಸರಿಸಿದ ಕೃತಿಯಾಗಿದೆ.)

ಕನ್ನಡದ ಪ್ರಮುಖ ಗ್ರಂಥಗಳು ಹಾಗೂ ಗ್ರಂಥಕಾರರು