2. ಕನ್ನಡ ಅಕ್ಷರಮಾಲೆ ಅಥವಾ ವರ್ಣಮಾಲೆ
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?
ಯಾವುದೇ ಒಂದು ಭಾಷೆಯು ಮಾತುಗಳಿಂದ ಅಥವಾ ನುಡಿಯಿಂದ ಮತ್ತು ಬರಹ (ಲಿಪಿ)ಯಿಂದ ವ್ಯಕ್ತವಾಗುತ್ತದೆ. ಮಾತಿನಲ್ಲಿ ಯ ಅಕ್ಷರ, ಶಬ್ದಗಳು ಧ್ವನಿಯ ರೂಪವಾಗಿರುತ್ತವೆ. ಕೇಶಿರಾಜನು ಈ ಅಕ್ಷರಗಳನ್ನು ‘ವರ್ಣ’ ಎಂದು ಶಬ್ದಮಣಿದರ್ಪಣದಲ್ಲಿ ತಿಳಿಸಿದ್ದಾರೆ.
- ಹಳೆಗನ್ನಡ ವರ್ಣಮಾಲೆಯಲ್ಲಿ ಒಟ್ಟು 50ಅಕ್ಷರಗಳಿದ್ದು, ಆದರೆ ಪ್ರಸ್ತುತ ಹೊಸಗನ್ನಡ ವರ್ಣಮಾಲೆಯಲ್ಲಿ ‘ಋೂ’ ಅಕ್ಷರವನ್ನು ಹೊರತುಪಡಿಸಿ ಒಟ್ಟು 49 ಅಕ್ಷರಗಳಿವೆ.
- ಅದೇ ರೀತಿ ಕೇಶಿರಾಜನ ವ್ಯಾಕರಣ ಗ್ರಂಥವಾದ ಶಬ್ದಮಣಿದರ್ಪಣದಲ್ಲಿ 47 ಅಕ್ಷರಗಳಿವೆ. (ಕೇಶಿರಾಜನು ತನ್ನ ವ್ಯಾಕರಣ ಗ್ರಂಥವಾದ ಶಬ್ದಮಣಿದರ್ಪಣದಲ್ಲಿ 47 ಶುದ್ಧಗೆಗಳ ಸಂಖ್ಯೆ ಎಂದು ತಿಳಿಸಿದ್ದಾನೆ.)
- ಕೆಪಿಎಸ್ಸಿ ಪ್ರಕಾರ ಕನ್ನಡ ವರ್ಣಮಾಲೆಯಲ್ಲಿ ಇರುವ ವರ್ಣ ಗಳ ಸಂಖ್ಯೆ 49
- ಕನ್ನಡ ಕೈಪಿಡಿ ಕಾರರ ಪ್ರಕಾರ ಕನ್ನಡ ವರ್ಣಮಾಲೆಯಲ್ಲಿರುವ ವರ್ಣಗಳ ಸಂಖ್ಯೆ 32
- ಆಧುನಿಕ ಭಾಷಾ ವಿಜ್ಞಾನಿಗಳು ಪ್ರಕಾರ ಕನ್ನಡ ವರ್ಣಮಾಲೆಯಲ್ಲಿ ಇರಬೇಕಾದ ವರ್ಣಗಳ ಸಂಖ್ಯೆ 26
ಅಕ್ಷರಗಳ ವಿಂಗಡನೆ
ಕನ್ನಡದಲ್ಲಿ ಇರುವ 49 ಅಕ್ಷರಗಳನ್ನು ವರ್ಣಗಳೆಂದು ಹಾಗೂ ಈ ವರ್ಣಗಳ ಕ್ರಮಬದ್ಧವಾದ ಜೋಡಣೆಯನ್ನು ವರ್ಣಮಾಲೆಯೆಂದು ಕರೆಯುತ್ತಾರೆ. ಕನ್ನಡ ವರ್ಣಮಾಲೆಯಲ್ಲಿ ಮುಖ್ಯವಾಗಿ ಮೂರು ವಿಧಗಳು.
I] ಮೂಲಾಕ್ಷರಗಳು (ಅ ಇಂದ ಳ ವರೆಗೆ)
II] ಗುಣಿತಾಕ್ಷರಗಳು (ಕ ಕಾ ಕಿ ಕೀ….)
III] ಸಂಯುಕ್ತಕ್ಷರಗಳು ಅಥವಾ ಒತ್ತಕ್ಷರಗಳು (ಕ್ಕ, ಮ್ಮ, ವ್ಯ,ಸ್ರ…)
1] ಮೂಲಾಕ್ಷರಗಳು: ಕನ್ನಡ ವರ್ಣಮಾಲೆಯ ಮೂಲಾಕ್ಷರಗಳನ್ನು ನಾವು ಮತ್ತೆ ಮೂರು ಭಾಗಗಳಾಗಿ ವಿಂಗಡಿಸಬಹುದು.
1) ಸ್ವರಗಳು: ಅ- ಔ (13)
2) ಯೋಗವಾಹಗಳು: ಅಂ, ಅಃ (2)
3) ವ್ಯಂಜನಗಳು: ಕ – ಳ (34)
ಕನ್ನಡ ವರ್ಣಮಾಲೆಯ ಅಕ್ಷರಗಳು
ಸ್ವರಗಳು (13): ಆ ಇ ಈ ಉ ಊ ಋ ಎ ಏ ಐ ಒ ಓ ಔ
ಯೋಗವಾಹಗಳು (2): ಅಂ (ಅನುಸ್ವಾರ), ಅಃ (ವಿಸರ್ಗ)
ವ್ಯಂಜನಗಳು (34):
ಕ್ ಖ್ ಗ್ ಘ್ ಙ್ ‘ಕ’ ವರ್ಗ 5 ಅಕ್ಷರಗಳು
ಚ್ ಛ್ ಜ್ ಝ್ ಞ್ ‘ಚ’ ವರ್ಗ 5 ಅಕ್ಷರಗಳು
ಟ್ ಠ್ ಡ್ ಢ್ ಣ್ ‘ಟ’ ವರ್ಗ 5 ಅಕ್ಷರಗಳು
ತ್ ಥ್ ದ್ ಧ್ ನ್ ‘ತ’ ವರ್ಗ 5 ಅಕ್ಷರಗಳು
ಪ್ ಫ್ ಬ್ ಭ್ ಮ್ ‘ಪ’ ವರ್ಗ 5 ಅಕ್ಷರಗಳು
ಯ್ ರ್ ಲ್ ವ್ ಶ್ ಷ್ ಸ್ ಹ್ ಳ್
- ಕನ್ನಡದಲ್ಲಿರುವ 5 ಅನುನಾಸಿಕಾಕ್ಷರಗಳು ಅವು :
ಙ್ ಞ್ ಣ್ ನ್ ಮ್
- ಹಾಗೂ ಕನ್ನಡದಲ್ಲಿ ಒಟ್ಟು 34 ವ್ಯಂಜನಾಕ್ಷರಗಳಿವೆ.
ಅವುಗಳನ್ನು 2 ಭಾಗಗಳಾಗಿ ವಿಂಗಡಿಸಬಹುದು
ವರ್ಗಿಯ ವ್ಯಂಜನ (25) 2. ಅವರ್ಗಿಯ(9)
ಪರೀಕ್ಷೆಯಲ್ಲಿ ಕೇಳಬಹುದಾದ ಅತಿಮುಖ್ಯ ಅಂಶಗಳು
- ಈ ಊ : ನಿಪಾತ ಸ್ವರಗಳು
- ಐ, ಜೌ : ಸಂಧ್ಯಕ್ಷರಗಳು (ಅಯ್, ಅವ್)
- ಏ : ಅವದಾರಣಾಕ್ಷರ
- ಓ : ವಿಶಂಕೆ
- ಕನ್ನಡದಲ್ಲಿ ಸವರ್ಣಾಕ್ಷರಗಳು
ಅಆ, ಇಈ, ಉಊ, ಎಏ, ಒಓ
- ಕನ್ನಡದ ವಿಲೋಮ ಸ್ವರಗಳು
ಆಅ, ಈಇ, ಊಉ, ಏಎ, ಓಒ

