3. ಕನ್ನಡ ಭಾಷಾ ಸಾಹಿತ್ಯ ಚರಿತ್ರೆ

ಸಾಹಿತ್ಯ ಚರಿತ್ರೆಗೂ ಮುನ್ನ ನಾವು ಸಾಹಿತ್ಯ ಎಂದರೆ ಏನು ಎಂದು ತಿಳಿದುಕೊಳ್ಳೋಣ. ಸಾಹಿತ್ಯ ಎಂದರೆ ಒಂದು ಭಾಷೆಯಲ್ಲಿನ ಗ್ರಂಥಗಳ ಭಂಡಾರ / ಸತ್ಯ ಸಂಗತಿಗಳ ನಿರಂತರ ಶೋಧನೆ (ಹುಡುಕಾಟ) ಎಂತಲೂ ತಿಳಿಯಬಹುದು.

ಕನ್ನಡ ಭಾಷೆಯು ದ್ರಾವಿಡ ಭಾಷಾ ಕುಟುಂಬದ ದಕ್ಷಿಣ ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಸ್ವತಂತ್ರ ಭಾಷೆಯಾಗಿದ್ದು, ಇದು ಸುಮಾರು 2500 ವರ್ಷಗಳಷ್ಟು ಪ್ರಾಚೀನ ಭಾಷೆಯಾಗಿದೆ.  ಇದರ ಬರವಣಿಗೆ ಸುಮಾರು 1900 ವರ್ಷಗಳ ಹಿಂದೆ ಪ್ರಾರಂಭವಾಗಿರಬಹುದು ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ.

ಒಂದು ಭಾಷೆಯ ಇತಿಹಾಸವನ್ನು ನಾವು ಶಾಸನಗಳಿಂದ, ಹಸ್ತಪ್ರತಿಗಳಿಂದ, ತಾಳೆಗರಿಗಳಿಂದ, ಸಾಹಿತ್ಯ ಕೃತಿಗಳಿಂದ, ನಾಣ್ಯಗಳಿಂದ ತಿಳಿಯಬಹುದು.

ಅದೇ ರೀತಿ ಕನ್ನಡ ಭಾಷೆಯ ಇತಿಹಾಸವನ್ನು ತಳಿಯಲು ಇರುವ ಪ್ರಮುಖ ಪುರಾವೆಗಳು ಹೀಗಿವೆ.

1. ಕನ್ನಡಕ್ಕೆ ಲಭ್ಯವಿರುವ ಮೊದಲ ಸಾಹಿತ್ಯಕ ಆಧಾರವೆಂದರೆ ‘ಹಲ್ಮಿಡಿ ಶಾಸನ’ ಇದು ಕದಂಬ ಅರಸ ಕಾಕುತ್ಸವರ್ಮ ಹೊರಡಿಸಿದ ಕನ್ನಡದ ಮೊದಲ ಶಾಸನವಾಗಿದೆ. ಇದರ ಕಾಲ ಕ್ರಿ.ಶ 450

2. ಕ್ರಿ.ಪೂ 3ನೇ ಶತಮಾನದಲ್ಲಿ ರಚಿತವಾದ ಮಹಾಭಾರತದ ಭೀಷ್ಮ ಪರ್ವದಲ್ಲಿ (6ನೇ ಪರ್ವ) ಹಾಗೂ ಸಭಾಪರ್ವದಲ್ಲಿ ‘ಕರ್ಣಾಟಾ’ ಎಂಬ ಉಲ್ಲೇಖವಿದೆ.

3. ಕ್ರಿ.ಪೂ 3ನೇ ಶತಮಾನದಲ್ಲಿ ಬೌದ್ಧಭಿಕ್ಷುಗಳು ಬನವಾಸಿಯ ಮಹಿಷ ನಾಡಿಗೆ (ಮೈಸೂರು) ಬಂದರೆಂದು ಬೌಂದ್ಧಗ್ರಂಥ ಮಹಾವಂಶದಲ್ಲಿ ಉಲ್ಲೇಖವಿದೆ.

4. ಕ್ರಿ.ಪೂ 3ನೇ ಶತಮಾನದ ಮೌರ್ಯ ಸಾಮ್ರಾಜ್ಯದ ಅಶೋಕನ ಕಾಲದಲ್ಲಿ ಹೊರಡಿಸಲಾದ ಶಾಸನಗಳಲ್ಲಿ ಮುಖ್ಯವಾಗಿ ಬ್ರಹ್ಮಗಿರಿ ಶಾಸನದಲ್ಲಿ ಉಲ್ಲೇಖಗೋಂಡ ‘ಇಸಿಲ್’ ಎಂಬ ಪದವು ‘ಎಸಿಲ್(ತಮಿಳಿನ ಎಯಿಲ್) ಎಂಬ ಪದದ ರೂಪವೇ ಕನ್ನಡದ ‘ಇಸಿಲ್’ ಎಂಬ ಪದವಾಗಿದೆ. ಇಸಿಲ ಎಂದರೆ ಕೋಟೆ/ಊರು ಎಂದರ್ಥ. ಈ ಪದ ಕನ್ನಡದೆಂದು ಡಿ.ಎಲ್ ನರಸಿಂಹಾಚಾರ್ಯರು ಹೇಳಿದ್ದಾರೆ.

5. ಕ್ರಿ.ಪೂ 3ನೇ ಶತಮಾನದ ತಿರುವಳ್ಳುವರ್ ರಚಿಸಿದ ತಮಿಳು ಕಾವ್ಯ ‘ಶಿಲಪ್ಪದಿಗಾರಂ’ ನಲ್ಲಿ ಕನ್ನಡಿಗರ ಸಂಗೀತ ನೃತ್ಯದ ಉಲ್ಲೇಖವಿದ್ದು, ಇದರಲ್ಲಿ ‘ಕರುನಾಡಿಗರ್/ಕರುನಾಡರ್’ ಎಂಬ ಪದವು ಇದೆ.

6. ಅನ್ಯ ಭಾಷೆಯಲ್ಲಿ ದೊರೆತ ಅತಿ ಪ್ರಾಚೀನ ಅವಶೇಷ ಕ್ರಿ.ಶ 1-2ನೇ ಶತಮಾನದಲ್ಲಿ ಇದ್ದನೆನ್ನಲಾದ ಕುಂತಲ ಜನಪದೇಶ್ವರ ಎಂದು ತನ್ನನ್ನು ಕರೆದುಕೊಂಡಿರುವ ಶಾತವಾಹನ ದೊರೆ ಹಾಲರಾಜನ ಪ್ರಾಕೃತ ಭಾಷೆಯಲ್ಲಿರುವ ಪದ್ಯಕಾವ್ಯಗಥಾಸಪ್ತಮಿ / ಗಾಥಾಸಪ್ತಶತಿ’ಯಲ್ಲಿ ಕಂಡು ಬರುವ ಪೊಟ್ಟ (ಹೊಟ್ಟೆ) ತುಪ್ಪ, ಅತ್ತಾ-ಅತ್ತೆ ಎಂಬ ನಾಮ ಪದಗಳು, ಪೆಟ್ಟು(ಹೊಡೆ) ತೀರ್ (ಶಕ್ಯವಾಗು/ಸಮರ್ಥವಾಗು) ಎಂಬ ಧಾತು ಕನ್ನಡವೆಂದು ಗೊವಿಂದ ಪೈ ವಿಮರ್ಶಿಸಿದ್ದಾರೆ.

7. ಕ್ರಿ.ಪೂ 2ನೇ ಶತಮಾನದ ಬೌದ್ಧಗ್ರಂಥ ‘ಲಲಿತವಿಸ್ತಾರ’ ದಲ್ಲಿ ಆರು ಲಿಪಿಗಳ ಹೆಸರುಗಳಿವೆ. ಅದರಲ್ಲಿ ಕನಾರಿ ಲಿಪಿ/ ಕನ್ನಡ ಲಿಪಿ (ಕನಾರಿ= ಕನ್ನಡ) ಎಂಬ ಶಬ್ದವಿದೆ. ಇದರಲ್ಲಿರುವ ಕನಾರಿ ಲಿಪಿಯ ಉಲ್ಲೇಖ ಕನ್ನಡ ಲಿಪಿಯನ್ನು ಸೂಚಿಸುತ್ತದೆ ಎಂದು ಪಾಂಡುರಂಗರಾವ್ ದೇಸಾಯಿ ಹೇಳಿದ್ದಾರೆ.

8. ಕ್ರಿ.ಪೂ 1ನೇ ಶತಮಾನದ ಮಾರ್ಕಾಂಡೇಯ ಪುರಾಣದಲ್ಲಿ ‘ಕರ್ನಾಟಕ’ ಎಂಬ ಪದವಿದೆ.

9. ಕ್ರಿ.ಶ 150 ರಲ್ಲಿ ಈಜಿಪ್ಟ ದೇಶದಲ್ಲಿ ದೊರೆತಿರುವ ಗ್ರೀಕ್‍ಪ್ರಹಸನ ಆಕ್ಸಿರಿಂಕಸ್ ಪ್ಯಾಪಿರೈನಲ್ಲಿ ಕನ್ನಡ ಶಬ್ದಗಳಿವೆ ಎಂದು ಗೊವಿಂದ ಪೈ ರವರು ಹೇಳುತ್ತಾರೆ. ಆಕ್ಸಿರಿಂಕಸ್ ಪ್ಯಾಪಿರೈ ಯನ್ನು ಮೊದಲು ಪತ್ತೆಹಚ್ಚಿದವರು ಇ ಹುಲ್ಷ್.

10. ಬಾದಾಮಿ ಶಾಸನ/ ಕಪ್ಪೆಅರಭಟ್ಟನ ಶಾಸನ ಕ್ರಿ.ಶ 7ನೇ ಶತಮಾನದ ಈ ಶಾಸನದಲ್ಲಿ ಕನ್ನಡ ಛಂದಸ್ಸಿನ ಗಂಗೋತ್ರಿಯಾದ ತ್ರಿಪದಿಯ ಮೊದಲ ಉಲ್ಲೇಖ ಇದರಲ್ಲಿದೆ.
11. ‘ಛಂದೋಗ್ಯ ಉಪನಿಷತ್ತಿ’ನಲ್ಲಿ ಚೆನ್(ಚಂದ್ರ) ಮಟಚಿ (ಮಿಡತೆ) ಶಬ್ದಗಳು ಕಂಡುಬರುತ್ತವೆ.
12. ಶಾತವಾಹನರ ಶಾಸನಗಳಲ್ಲಿ ಮತ್ತು ನಾಣ್ಯಗಳಲ್ಲಿ ಕಂಡುಬರುವ ‘ಪುಲುಮಾಯಿ’ ಮತ್ತು ‘ವಿಲವಾಯಕರ’ ಈ ಪದಗಳು ಕನ್ನಡ ಅಥವಾ ತೆಲಗು ಆಗಿರಬಹುದೆಂದು ಡಿ.ಎಲ್ ನರಸಿಂಹಾಚಾರ್ಯರ ಅಭಿಪ್ರಾಯವಾಗಿದೆ.
13. ಗ್ರೀಕ್ ಮತ್ತು ರೋಮನಗಳಲ್ಲಿ ಕಂಡುಬರುವ ದೀನಾರ ಮತ್ತು ದ್ರಮ್ಮ ಕನ್ನಡ ಪದಗಳೂ ಗ್ರೀಕ ಮತ್ತು ರೋಮನ್ನರೊಡನೆ ಕನ್ನಡಿಗರ ವ್ಯಾಪಾರ ಸಂಬಂಧವನ್ನು ತಿಳಿಸುತ್ತದೆ.
14. ಶೂದ್ರಕನ ಕವಿಯ ಸಂಸ್ಕೃತ ನಾಟಕ ಮೃಚ್ಫಕಟಿಕ ನಾಟಕದ ಒಂದು ಪಾತ್ರವಾದ ಚಂದನಕ ‘ಕರ್ಣಾಟ’ ಶಬ್ದವನ್ನು ಹೇಳುತ್ತಾನೆ.
15. ಕರ್ನಾಟಕ ಎಂಬುದರ ತದ್ಭವ ಪದ = ಕನ್ನಡ

16. ಕಿ.ಶ 7ಶತಮಾನ ರಲ್ಲಿ ಗ್ರೀಕ್ ಪ್ರವಾಸಿ ಅಲೆಕ್ಸಾಂಡ್ರಿಯಾದ ಪ್ರಾಚೀನ ಭೂಗೋಳಶಾಸ್ತ್ರಜ್ಞ ಟಾಲಮಿ ತನ್ನ ‘ಜಿಯಾಗ್ರಫಿ’ ಗ್ರಂಥದಲ್ಲಿ ಕರ್ನಾಟಕದ ಅನೇಕ ಊರುಗಳನ್ನು ಹೆಸರಿಸಿದ್ದಾನೆ.
ಅವು..

ಪೆಟ್ರಿಗಲ್ – ಪಟ್ಟದಕಲ್ಲು
ಮೊದೌಗೌಲ್          – ಮುದಗಲ್
ಬನೌಸಿ/ಬನವೊಸಯ್- ಬನವಾಸಿ
ಕಲ್ಲಿಗೇರಿಸ್             – ಕಲ್ಕೇರಿ/ಕಲ್ಲಿಗೆರೆ
ಹಿಪ್ಪೋಕೋರ         -ಹಿಪ್ಪರಗಿ (ಹೂವಿನ ಹಿಪ್ಪರಗಿ)
ನಾಗೂರು
ಸವದಿ
ಹತ್ತಿರ್ಕಿಹಾಳ
ತವಸಿ
ಇಂಗಲಚಿ
ಇಂಡೋ – ಇಂಡಿ
ಸಿರಿಮೆಲಗ- ಚಿಮ್ಮಲಗಿ
ಬದಿಯಮೈ- ಬಾದಾಮಿ

ಕನ್ನಡ ಭಾಷೆಯನ್ನು ನಾವು ಅಧ್ಯಯನ ಮಾಡುವಾಗ ಕಾಲಕ್ಕೆ ಅನುಸಾರವಾಗಿ 4 ಭಾಗಗಳಾಗಿ ವಿಂಗಡಿಸಲಾಗಿದೆ.