2. ಕನ್ನಡ ಭಾಷೆಯ ಶಾಸನ ಸಾಹಿತ್ಯ

ಭಾಷೆಯ ಇತಿಹಾಸವನ್ನು ತಿಳಿಯಲು ಶಾಸನಗಳು ಬಹಳ ಪ್ರಮುಖವಾದ ಆಧಾರವಾಗಿದೆ. ಕನ್ನಡದ ಇತಿಹಾಸ ತಿಳಿಯಲು ನಮಗೆ ದೊರೆತ ಕನ್ನಡದ ಪ್ರಥಮ ಶಾಸನವೆಂದರೆ ಅದು ಕಾಕುತ್ಸವರ್ಮನ ಹಲ್ಮಿಡಿ ಶಾಸನ ಇದರ ಕಾಲ ಕ್ರಿ.ಶ 450. ಕನ್ನಡ ಭಾಷೆಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಇನ್ನೂ ಹಲವು ವಿಷಯಗಳನ್ನು ತಿಳಿಯೋಣ ಬನ್ನಿ.

ಶಾಸನಗಳು ಹಿಂದೆ ನಡೆದ ಇತಿಹಾಸವನ್ನು / ಚರಿತ್ರೆಯನ್ನು ತಿಳಿಯಲು ಸಹಾಯವಾಗುವ ಪ್ರಮುಖ ದಾಖಲೆಯಾಗಿದೆ. ಶಾಸನಎಂಬ ಪದವು ಸಂಸ್ಕೃತದ ‘ಶಾಸ್’ ಧಾತುವಿನಿಂದ ಹುಟ್ಟಿದ್ದು ಇದರ ಮೂಲಾರ್ಥ ಅಪ್ಪಣೆ ಮಾಡು/ ಘೋಷಣೆ ಹೊರಡಿಸು ಎಂದರ್ಥ.

 • ಭಾರತದಲ್ಲಿ ಸಿಕ್ಕ ಶಾಸನಗಳಲ್ಲಿ ಅತಿ ಪ್ರಾಚೀನ ಶಾಸನಗೆಳೆಂದರೆ, ಅಶೋಕನ ಶಾಸನಗಳು ಅವು ಬ್ರಾಹ್ಮೀಲಿಪಿಯಲ್ಲಿ ಬರೆಯಲ್ಪಟ್ಟ ಶಾಸನಗಳಾಗಿವೆ. ಅದಕ್ಕಿಂತ ಹಿಂದಿನ ಲಿಪಿಗಳು ಸಿಂಧೂ ನಾಗರಿಕತೆಯ ಕಾಲಕ್ಕೆ ಸಂಬಂಧಿಸಿದ ಶಾಸನಗಳು ಸಿಕ್ಕಿದ್ದರು ಅವು ಚಿತ್ರಲಿಪಿಯಲ್ಲಿ ಇರುವುದರಿಂದ ಅವುಗಳನ್ನು ಓದಲಾಗಿಲ್ಲ, ಆದ್ದರಿಂದ ಅಶೋಕನ ಶಾಸನಗಳೆ ಭಾರತದಲ್ಲಿ ಸಿಕ್ಕ ಅತಿ ಪ್ರಾಚೀನ ಶಾಸನಗಳಾಗಿವೆ.
 • ಬ್ರಾಹ್ಮೀ ಲಿಪಿಯನ್ನು ಮೊಟ್ಟ ಮೊದಲು ಓದಿದವರು ‘ಜೇಮ್ಸ್ ಪ್ರಿನ್ಸೆಸ್’ (ಬಂಗಾಳದಲ್ಲಿ ಸ್ಥಾಪನೆಗೊಂಡ ಏಸಿಯಾಟಿಕ ಸಂಸ್ಥೆಯ ವಿದ್ವಾಂಸರು ಮೊದಲು ಬ್ರಾಹ್ಮೀ ಲಿಪಿಯನ್ನು ಓದಿದರು).

ಶಾಸನದಲ್ಲಿರುವ ವಿವಿಧ ಪ್ರಕಾರಗಳು:

1. ದಾನ ಶಾಸನ : ದೇವಾಲಯ, ವ್ಯಕ್ತಿಗೆ, ಗ್ರಾಮಕ್ಕೆ, ಮಠಗಳಿಗೆ, ವಿದ್ವಾಂಸರಿಗೆ, ಛತ್ರಕ್ಕೆ, ಅಗ್ರಹಾರಗಳಿಗೆ, ವಿದ್ಯಾಭ್ಯಾಸಕ್ಕೆ ಇನ್ನೂ ಹಲವು ವಿಚಾರಗಳಿಗೆ ದಾನ ನೀಡಿದಾಗ ಬರೆಯಿಸುವ ಶಾಸನಗಳಾಗೆವೆ.

2. ವೀರಗಲ್ಲು : ಯುದ್ಧ ಭೂಮಿಯಲ್ಲಿ ವೀರಮರಣ ಒಪ್ಪಿದ ವೀರರಿಗಾಗಿ ಬರೆಸಲಾಗುತ್ತಿದ್ದ ಶಾಸನಗಳು.

3. ಧರ್ಮ ಸಂಬಂಧಿ ಶಾಸನ: ಧರ್ಮ ಕಾರ್ಯಕ್ಕಾಗಿ ನೀಡಿದ ಶಾಸನಗಳು.

4. ಮಾಸ್ತಿ ಕಲ್ಲುಗಳು : ಗಂಡ ಸತ್ತಾಗ ಗಂಡನೊಡನೆ/ ಗಂಡ ಸತ್ತ ಸುದ್ದಿ ಕೇಳಿ ಜೀವಂತವಾಗಿ ಜಿತೆಯೇರಿ ಪ್ರಾಣ ಬಿಡುತ್ತಿದ್ದ ‘ಸತಿ’ ಯನ್ನು ಮಹಾಸತಿ ಎಂದು ಕರೆಯುತ್ತಿದ್ದರು (ಸತಿ ಸಹಗಮನ). ಇವರಿಗಾಗಿ ಹೊರಡಿಸುತ್ತಿದ್ದ ಶಾಸನವನ್ನು ಮಾಸ್ತಿ ಕಲ್ಲುಗಳು ಎಂದು ಕರೆಯುತ್ತಾರೆ.

ಕನ್ನಡ ಇತಿಹಾಸ ತಿಳಿಯಲು ಇರುವ ಪ್ರಮುಖ ಶಾಸನ:

 • ಕನ್ನಡದ ಮೊದಲ ಪದ ದೊರೆತಿರುವ ಶಾಸನ. ಕನ್ನಡದ ಮೊದಲ ಪದ ‘ಇಸಿಲ’ ಇದು ಅಶೋಕನ ಬ್ರಹ್ಮಗಿರಿ ಶಾಸನದಲ್ಲಿ ಕಾಣಬಹುದು. ಇಸಿಲ ಎಂದರೆ ಕೋಟೆ/ಊರು ಎಂದರ್ಥ. (ತಮಿಳಿನಲ್ಲಿ =ಎಯಿಲ್ ಎಂದರ್ಥ) ಈ ಪದ ಕನ್ನಡದ್ದೆಂದು ತಿಳಿಸಿದವರು “ಡಿ.ಎಲ್ ನರಸಿಂಹಾಚಾರ್ಯ”
 • (ಕನ್ನಡದ ಸಾಲುಗಳನ್ನು ಹೊಂದಿರುವ ಕನ್ನಡ ಮೊದಲ ಶಾಸನ) ಹಲ್ಲಿಡಿ ಶಾಸನ ಇದರ ಕಾಲ ಕ್ರಿ.ಶ 450 ಈ ಶಾಸನವನ್ನು ಬರೆಸಿದವರು ಕದಂಬ ವಂಶದ ಅರಸ ಕಾಕುತ್ಸವರ್ಮ ಎಂದು ಹೆಚ್.ಎಂ ಕೃಷ್ಣ ಸೇರಿದಂತೆ ಹಲವು ವಿದ್ವಾಂಸರು ನಿರ್ಣಯಿಸಿದ್ದಾರೆ.
 • 7ನೇ ಶತಮಾನದ ಬಾದಮಿ/ಕಪ್ಪೆಅರಭಟ್ಟನ ಶಾಸನ ತ್ರಿಪದಿಯಲ್ಲಿ ರಚನೆಗೊಂಡ ಕನ್ನಡದ ಮೊಟ್ಟ ಮೊದಲ ಶಾಸನವಾಗಿದೆ.

ಕಾಕುತ್ಸವರ್ಮನ ಹಲ್ಮಿಡಿ ಶಾಸನ ಕ್ರಿಸ್ತಶಕ 450

ಹಲ್ಮಿಡಿ ಶಾಸನ ಪ್ರಸ್ತುತ ಹಾಸನ ಜಿಲ್ಲೆಯ ಹಲ್ಮಿಡಿ ಗ್ರಾಮದಲ್ಲಿ ದೊರೆತಿದೆ. ಈಗ ಮೈಸೂರಿನ ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿದ್ದು ಇದನ್ನು ಕನ್ನಡದ ಪ್ರಥಮ ಶಿಲಾ ಶಾಸನ ಒಂದು ಪರಿಗಣಿಸಲಾಗಿದೆ.

ಈ ಶಾಸನವನ್ನು ಕದಂಬರ ಆಳ್ವಿಕೆಯಲ್ಲಿ ನರಿದಾವಿಳೆ ಪ್ರಾಂತ್ಯದ ಅಧಿಕಾರಿಗಳಾದ ಮೃಗೇಶ ಮತ್ತು ನಾಗ ಎಂಬುವರು ಕೇಕಯ ಮತ್ತು ಪಲ್ಲವರೊಡನೆ ಹೋರಾಡಿ ಜಯಗಳಿಸಿದ ವಿಜಯ ಅರಸ ಎಂಬುವನಿಗೆ ಶೌರ್ಯದ ಕೊಡುಗೆಯಾಗಿ ಹಲ್ಮಿಡಿ ಮತ್ತು ಮೂಳವಳ್ಳಿಗಳೆಂಬ ಎರಡು ಗ್ರಾಮಗಳನ್ನು ಉಂಬಳಿಯಾಗಿ (ದತ್ತಿ/  ದಾನ) ಕೊಡುವ ಬಗ್ಗೆ ಈ ಶಾಸನದಲ್ಲಿ ವಿವರಿಸಲಾಗಿದೆ.

ಇದು ಒಂದು ದತ್ತಿ ಅಥವಾ ದಾನ ಶಾಸನವಾಗಿದೆ . ಉಂಬಳಿ ಎಂದರೆ ದಾನ ಎಂದರ್ಥ. ಈ ಶಾಸನದಲ್ಲಿ ಹೆಚ್ಚಾಗಿ ಸಂಸ್ಕೃತ ಪದಗಳು ಕಂಡುಬಂದರು ವಾಕ್ಯ ರಚನೆ ಮಾತ್ರ ಕನ್ನಡದಲ್ಲಿದೆ ಆದ್ದರಿಂದ ಇದನ್ನು ಕನ್ನಡದ ಪ್ರಥಮ ಶಾಸನ / ಮೊಟ್ಟ ಮೊದಲ ಶಾಸನ ವೆಂದು ಕರೆಯಲಾಗುತ್ತದೆ.

 1. ಕನ್ನಡದ ಮೊಟ್ಟ ಮೊದಲ ಉಪಲಬ್ದ ಶಾಸನ – ಹಲ್ಮಿಡಿ ಶಾಸನ
 2. ಹಲ್ಮಿಡಿ ಶಾಸನದ ಕಾಲಕ್ರಿಸ್ತಶಕ 450
 3. ಹಲ್ಮಿಡಿ ಶಾಸನ ದೊರೆತ ಸ್ಥಳ – ಹಾಸನ ಜಿಲ್ಲೆಯ ಬೇಲೂರು ತಾಲೂಕು ಹಲ್ಮಿಡಿ ಗ್ರಾಮ
 4. ಹಲ್ಮಿಡಿ ಶಾಸನ ದಲ್ಲಿ – ಪೂರ್ವ ಹಳೆಗನ್ನಡ
 5. ಈ ಶಾಸನ ರಚನಾ ಕಾಲದಲ್ಲಿದ್ದ ದೊರೆ – ಕಾಕುತ್ಸವರ್ಮ
 6. ಹಲ್ಮಿಡಿ ಶಾಸನ ಒಂದು- ದತ್ತಿ/  ದಾನ ಶಾಸನ
 7. ಹಲ್ಮಿಡಿ ಶಾಸನದಲ್ಲಿ ಉಲ್ಲೇಖಿತ ಮೃಗೇಶ ಮತ್ತು ನಾಗರ ಎಂಬ ಭಟ್ಟರ ನಾಡು-  ನರಿದಾವಿಳೆ
 8. ಹಲ್ಮಿಡಿ ಶಾಸನದ ಭಾಷೆ ಪೂರ್ವ ಹಳಗನ್ನಡ ಎಂದು ಹೇಳಿದವರು- ನರಸಿಂಹಾಚಾರ್,  ರೈಸ್
 9. ಹಲ್ಮಿಡಿ ಶಾಸನದ ಮೇಲೆ ಪ್ರಭಾವ ಬೀರಿರುವ ಅನ್ಯ ಭಾಷೆ- ಸಂಸ್ಕೃತ
 10. ಶಾಸನದಲ್ಲಿ ಕಂಡುಬರುವ ಸಮಾಸದ ಉದಾಹರಣೆ- ಪೆತ್ತಜಯನ್
 11. ಪೊಗಳೆ ಪೊಟ್ಟಣ ಎಂಬುದು –  ಕರ್ಮಣಿ ರೂಪ
 12. ಶಾಸನದ ಮೊದಲ ಎರಡು ಸಾಲುಗಳಲ್ಲಿ ಕಂಡುಬರುವ ಸ್ತುತಿ- ವಿಷ್ಣು ಸ್ತುತಿ
 13. ಕುರುಂಬಿಡಿ ಎಂದರೆ ಸಣ್ಣ ದಾನ
 14. ಶಾಸನದ ವಸ್ತು- 3 ದಾನಗಳ ಉಲ್ಲೇಖ
 15. ಹಲ್ಮಿಡಿ, ಮೂಳಿವಳ್ಳಿ ಗ್ರಾಮಗಳನ್ನು ಉಂಬಳಿಯಾಗಿ ಕೊಟ್ಟಿದ್ದು – ವಿಜ ಅರಸನಿಗೆ
 16. ಶಾಸನದಲ್ಲಿ ಕಂಡು ಬರುವ ಒಟ್ಟು ಸಾಲುಗಳು- 16
 17. ಈಗ ಈ ಶಾಸನ ಇರುವುದು – ಮೈಸೂರು ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿದೆ

ಬಾದಾಮಿ ಶಾಸನ / ಬಾದಾಮಿಯ ಕಪ್ಪೆ ಅರೆಭಟ್ಟನ ಶಾಸನ

 1. ಬಾದಾಮಿ ಶಾಸನವೊಂದು- ಪ್ರಶಸ್ತಿ ಶಾಸನ
 2. ಬಾದಾಮಿ ಶಾಸನ ರಚನೆಯ ಕಾಲ- ಕ್ರಿಸ್ತಶಕ 700
 3. ಕನ್ನಡದಲ್ಲಿ ಪ್ರಥಮವಾಗಿ ತ್ರಿಪದಿಗಳ ರಚನೆ ಕಂಡು ಬರುವ ಶಾಸನ – ಬಾದಾಮಿ ಶಾಸನ
 4. ಸಾಹಿತ್ಯಕವಾಗಿ ಬಾದಾಮಿ ಶಾಸನ ಒಂದು- ವರ್ಣನಾತ್ಮಕ ಶಾಸನ
 5. ಬಾದಾಮಿ ಶಾಸನದ ಲಿಪಿ –ಹಳಗನ್ನಡ
 6. ಬಾದಾಮಿ ಶಾಸನದ ವಸ್ತು- ವೀರಭಟನ ವರ್ಣನೆ
 7. ಬಾದಾಮಿ ಶಾಸನದಲ್ಲಿ ವರ್ಣಿತವಾದ ವೀರಭಟ- ಕಪ್ಪೆ ಅರಭಟ್ಟ
 8. ಶಾಸನದಲ್ಲಿ ಕಂಡುಬರುವ ಕಪ್ಪೆ ಅರಭಟ್ಟನ ಬಿರುದು –  ಕಲಿಯುಗ ವಿಪರೀತನ್
 9. ಶಾಸನ ಮೊದಲೆರಡು ಸಾಲುಗಳು ಸಾಹಿತ್ಯ ರೂಪ- ಗದ್ಯ
 10. ಶಾಸನದಲ್ಲಿ ವರ್ಣಿತ ಕಪ್ಪೆ ಅರಭಟ್ಟನ ವ್ಯಕ್ತಿತ್ವ- ರುದ್ರ, ಶಿವನ ವ್ಯಕ್ತಿತ್ವ
 11. ಬಾದಾಮಿ ಶಾಸನದಲ್ಲಿ ಕಂಡುಬರುವ ಮೌಲ್ಯ- ಸಾಹಿತ್ಯಕ ಮೌಲ್ಯ
 12. ತ್ರಿಪದಿಯನ್ನು ಕನ್ನಡ ಛಂದಸ್ಸಿನ ತಾಯಿಬೇರು ಎಂದು ಕರೆದವರು- ರಂ ಶ್ರೀ ಮುಗುಳಿ
 13. ತ್ರಿಪದಿಯನ್ನು ಕನ್ನಡ ವೃತ್ತಗಳ ಗಾಯತ್ರಿ ಎಂದವರು- ದ ರಾ ಬೇಂದ್ರೆ
 14. ತ್ರಿಪದಿಯನ್ನು ಕನ್ನಡಛಂದೋಗಂಗೆಯ ಗಂಗೋತ್ರಿ ಎಂದವರು – ಡಿ ಎಸ್ ಕರ್ಕಿ

ತಮಟಕಲ್ಲು ಶಾಸನ

 1. ತಮಟಕಲ್ಲು ಶಾಸನದ ಕಾಲ ಕ್ರಿಸ್ತ ಶಕ 500
 2. ತಮಟಕಲ್ಲು ಶಾಸನ ದೊರೆತದ್ದು – ಚಿತ್ರದುರ್ಗ ತಾಲ್ಲೂಕಿನ ತಮಟಕಲ್ಲು ಗ್ರಾಮದಲ್ಲಿ
 3. ತಮಟಕಲ್ಲು ಶಾಸನದ ಲಿಪಿ – ಪೂರ್ವ ಹಳೆಗನ್ನಡ
 4. ತಮಟಕಲ್ಲು ಶಾಸನ ಒಂದು – ವೀರಗಲ್ಲು
 5. ತಮಟಕಲ್ಲು ಶಾಸನದಲ್ಲಿ ವರ್ಣಿತ ವೀರ- ಗುಣಮಧುರಾಂಕ
 6. ತಮಟಕಲ್ಲು ಶಾಸನದ ವೈಶಿಷ್ಟ್ಯ – ಪ್ರಾಸಯುಕ್ತ ರಚನೆ
 7. ಶಾಸನದ ಆರಂಭದಲ್ಲಿ ಬಳಸಲಾದ ವೃತ್ತ- ಬಿಣಮಣಿ ಅನ್ತುಭೋಗಿ  
 8. ತಮಟಕಲ್ಲು ಶಾಸನದ ಮೇಲೆ ಪ್ರಭಾವ ಬೀರುವ ಭಾಷೆ- ಸಂಸ್ಕೃತ

ಶ್ರವಣಬೆಳಗೊಳದ ಶಾಸನ

 1. ಶ್ರವಣಬೆಳಗೊಳ ಶಾಸನದ ರಚನೆಯ ಕಾಲ – ಕ್ರಿಸ್ತಶಕ 1368
 2. ಶ್ರವಣಬೆಳಗೊಳ ಶಾಸನ ದಲ್ಲಿ ಕಂಡುಬರುವ ಪದ್ಯ ಸಾಲುಗಳು-35
 3. ಶಾಸನ ಹೊರಡಿಸಿದ ಅರಸ – ವಿಜಯನಗರದ ಬುಕ್ಕ  ರಾಯ
 4. ಶಾಸನದ ವಸ್ತು- ಜೈನ ಹಾಗೂ ವೈಷ್ಣವರ ನಡುವಿನ ಕಲಹ ನಿವಾರಣೆ
 5. ಧರ್ಮ ಸಮನ್ವಯತೆಯನ್ನು ಮೆರೆದ ಧರ್ಮ ಶಾಸನ-  ಬುಕ್ಕರಾಯನ ಶಾಸನ
 6. ವೈಷ್ಣವರು ಜೈನರ ನಡುವಿನ ಕಲಹದ ವಿಷಯ – ಧಾರ್ಮಿಕ ಹಕ್ಕುಗಳು
 7. ಉಭಯ ಧರ್ಮದವರ ಸಂಘದ ನಾಯಕ – ಬುಸುವಿ ಶೆಟ್ಟಿ ಗಂಗಾಧರಂ ಶಾಸನ
 8. ಶಾಸನ ರಚಿಸಿದ ಕವಿ ಪಂಪನ ತಮ್ಮ ಜಿನವಲ್ಲಭ
 9. ಶಾಸನದ ವಸ್ತುಜಿನವಲ್ಲಭನ ಪ್ರಶಸ್ತಿ ಶಾಸನ
 10. ಶಾಸನದ ಕೊನೆಯಲ್ಲಿ ಕೆತ್ತಿರುವ ವಿಗ್ರಹ ಗಳು- ವೃಷಭನಾಥ ಮಹಾವೀರನ ವಿಗ್ರಹಗಳು
 11. ಜಿನವಲ್ಲಭ ನಿಗೆ ಇದ್ದ ಬಿರುದು- ವಾಗ್ವಧೂವರ ವಲ್ಲಭ

ಗಂಗಾಧರಂ ಶಾಸನ

 1. ತೆಲುಗು ಸಾಹಿತ್ಯದ ಪ್ರಪ್ರಥಮ ಕಂದ ಪದ್ಯ ಕಂಡು ಬರುವ ಶಾಸನ- ಗಂಗಾಧರಂ ಶಾಸನ
 2. ಪಂಪನ ಜೀವನದ ಮೇಲೆ ಬೆಳಕು ಚೆಲ್ಲುವ ಶಾಸನ- ಗಂಗಾಧರಂ ಶಾಸನ
 3. ಗಂಗಾಧರಂ ಶಾಸನ ಇರುವ ಇನ್ನೊಂದು ಹೆಸರು- ಕುರ್ಕ್ಯಾಲ ಶಾಸನ
 4. ಗಂಗಾಧರಂ ಶಾಸನವನ್ನು ಮೊದಲು ಓದಿದವರು- N ವೆಂಕಟರಮಣಯ್ಯ
 5. ಗದ್ಯ-ಪದ್ಯಾತ್ಮಕವಾದ ಏಕೈಕ ಶಾಸನ- ಗಂಗಾಧರಂ ಶಾಸನ
 6. ಗಂಗಾಧರಂ ಗ್ರಾಮದ ಶಾಸನ ವಿರುವ ಸ್ಥಳ- ವೃಷಭ ಗಿರಿ
 7. ಶಾಸನವನ್ನು ಸಿದ್ದಶಿಲೆಯಲ್ಲಿ ನಿರ್ಮಿಸಿದ ರೂವಾರಿ-    ಎರೆಯಮ್ಮ
 8. ಗಂಗಾಧರಂ ಶಾಸನದಲ್ಲಿ ಕಂಡುಬರುವ ಭಾಷೆಗಳು- ಕನ್ನಡ, ಸಂಸ್ಕೃತ, ತೆಲುಗು
 9. ಗಂಗಾಧರಂ ಶಾಸನ ಒಂದು- ಪಟ್ಟಿ ಶಾಸನ
 10. ಗಂಗಾಧರಂ ಶಾಸನ ದೊರೆತ ಸ್ಥಳ- ಆಂಧ್ರಪ್ರದೇಶದ ಕರೀಂನಗರ ಜಿಲ್ಲೆಯ ಗಂಗಾಧರಂ ಗ್ರಾಮ
 11. ಶಾಸನ ರಚನೆಯ ಕಾಲ- 10ನೇ ಶತಮಾನ
 12. ಶಾಸನದಲ್ಲಿ ಕಂಡುಬರುವ ಪ್ರತಿಮೆ- ಚಕ್ರೇಶ್ವರಿ ಪ್ರತಿಮೆ

ಇತರ ಶಾಸನಗಳು

 1. ನವಿಲೆ ನಾಡಿನ ದೇಕಬ್ಬೆಯ ವ್ಯಕ್ತಿತ್ವದ ಚಿತ್ರಣವಿರುವ ಶಾಸನ- ಬೆಳತೂರು ಶಾಸನ
 2. ಬೆಳತೂರು ಶಾಸನ ಕಾಲ – ಕ್ರಿಸ್ತಶಕ 1057
 3. ಬೆಳತೂರು ಶಾಸನ ದೊರೆತ ಸ್ಥಳ ಹೆಗ್ಗಡದೇವನಕೋಟೆ ತಾಲೂಕಿನ ಬೆಳತೂರು
 4. ಕನ್ನಡ ಶಾಸನಗಳ ಶಿರೋಮಣಿ/ ಕಾವ್ಯ ಕೂಡ –  ನಂದಿಸೇನ ಮುನಿಯ ನಿಷಧಿ ಶಾಸನ
 5. ನಂದಿಸೇನ ಮುನಿಯ ನಿಷಧಿ ಶಾಸನ ಕಾಲ – 7 ನೇ ಶತಮಾನ
 6. ನಂದಿಸೇನ ಮುನಿಯ ನಿಷಧಿ ಶಾಸನ ದೊರೆತ ಸ್ಥಳ – ಶ್ರವಣಬೆಳಗೊಳ
 7. ಬಸವಣ್ಣನ ವಂಶಾವಳಿ ತಿಳಿಸುವ ಶಾಸನ –  ಅರ್ಜುನವಾಡ ಶಾಸನ
 8. ಅರ್ಜುನವಾಡ ಶಾಸನದ ಕಾಲ –  ಕ್ರಿಸ್ತಶಕ 1260
 9. ಅರ್ಜುನವಾಡ ಶಾಸನವು ಒಂದು             – ದತ್ತಿ /  ದಾನ ಶಾಸನ
 10. ಬನವಾಸಿಯ ರಾಜ್ ಆದಿತ್ಯನ ಸ್ವಾಮಿ ನಿಷ್ಠ ಬಂಟ – ಕುಲಮುದ್ದ
 11. ಕುಲಮುದ್ದನ ಹೋರಾಟ, ಪರಾಕ್ರಮ ತಿಳಿಸುವ ಶಾಸನ-  ಮಾವಳಿ ಶಾಸನ
 12. ಮಾವಳಿ ಶಾಸನ ಒಂದು – ವೀರಗಲ್ಲು
 13. ಮಾವಳಿ ಶಾಸನದ ಲಿಪಿ – ಹಳಗನ್ನಡದ ಗದ್ಯ
 14. ದಾನಚಿಂತಾಮಣಿ ಅತ್ತಿಮಬ್ಬೆಯ ಕುರಿತಾದ ಶಾಸನ – ಲಕ್ಕುಂಡಿ ಶಾಸನ
 15. ಇಮ್ಮಡಿ ಪುಲಕೇಶಿ ಶ್ರೀ ಹರ್ಷ ನನ್ನು ಸೋಲಿಸಿದ ಸಂಗತಿ ತಿಳಿಸುವ ಶಾಸನ- ಐಹೊಳೆ ಶಾಸನ
 16. ಐಹೊಳೆ ಶಾಸನ ರಚನೆಯ ಕಾಲ – ಕ್ರಿಸ್ತಶಕ 634-35
 17. ಐಹೊಳೆ ಶಾಸನದ ಲಿಪಿ/ ಭಾಷೆ – ಹಳೆಗನ್ನಡ,  ಸಂಸ್ಕೃತ
 18. ಐಹೊಳೆ ಶಾಸನ ವಿರುವುದು – ಮೇಗುತಿ ದೇವಾಲಯ
 19. ನಾಯಿಗಾಗಿ ವೀರ ಸ್ಮಾರಕವನ್ನು ಹಾಕಿರುವ ಏಕೈಕ ಶಾಸನ- ಆತಕೂರು ಶಾಸನ
 20. ಆತಕೂರು ಶಾಸನದ ಕಾಲ –  ಕ್ರಿಸ್ತಶಕ 873
 21. ರಾಜಾದಿತ್ಯನನ್ನುಕೊಂzÀವನು – ಭೂತುಕ ಎಂದು ತಿಳಿಸುವ ಶಾಸನ- ಆತಕೂರು ಶಾಸನ
 22. ಈಗ ಆತಕೂರು ಶಾಸನ ವಿರುವ ಸ್ಥಳ –  ಬೆಂಗಳೂರು ಮ್ಯೂಸಿಯಂ
 • ಹೊಯ್ಸಳ ವಂಶದ ವರ್ಣನೆಯನ್ನು ಒಳಗೊಂಡಿರುವ ಶಾಸನ- ಬೇಲೂರು ಶಾಸನ
 1. ಬೇಲೂರು ಶಾಸನ ರಚನೆಯ ಕಾಲ  ಕ್ರಿಸ್ತಶಕ 1117
 2. ಬೇಲೂರು ಶಾಸನದ ಭಾಷೆ –  ಸಂಸ್ಕೃತ ಹಾಗೂ ಕನ್ನಡ
 3. ಹಳೆಬೀಡಿನ ಹೊಯ್ಸಳೇಶ್ವರ ದೇವಸ್ಥಾನದ ಪ್ರಾಕಾರದಲ್ಲಿ ಪಶ್ಚಿಮದ ಕಡೆ ಕಂಬದಲ್ಲಿರುವ ಶಾಸನ ಕುವರ ಲಕ್ಷ್ಮಣ ಶಾಸನ.
 4. ಕುವರ ಲಕ್ಷಣ ನಾ ಶಾಸನದ ಕಾಲ  ಕ್ರಿಸ್ತಶಕ 1220
 • ಕರ್ನಾಟಕದ ಪ್ರಪ್ರಥಮ ಸಂಸ್ಕೃತ ಶಾಸನ ಚಂದ್ರವಳ್ಳಿ ಶಾಸನ
 1. ಚಂದ್ರವಳ್ಳಿ ಶಾಸನವನ್ನು ಹೊರಡಿಸಿದವರು –  ಕದಂಬರು ಮಯೂರವರ್ಮ
 • ಚಂದ್ರವಳ್ಳಿ ಶಾಸನದ ಕಾಲ – ಕ್ರಿಸ್ತಶಕ 345
 1. ಚಂದ್ರವಳ್ಳಿ ಶಾಸನದ ಲಿಪಿ- ಬ್ರಾಹ್ಮಿ ಲಿಪಿ ( ಸಂಸ್ಕೃತ)
 2. ಚಂದ್ರವಳ್ಳಿ ಶಾಸನದ ವಸ್ತು- ಕೆರೆಯ ದುರಸ್ತಿ, ವನದ ನಿರ್ಮಾಣ
 1. ಕದಂಬರ ಮೂಲವನ್ನು ತಿಳಿಸುವಲ್ಲಿ ಸಹಾಯವಾಗುವ ಶಾಸನ – ತಾಳಗುಂದ ಶಾಸನ
 • ತಾಳಗುಂದ ಶಾಸನ ಇದೊಂದುಸ್ತಂಭ ಶಾಸನ
 1. ತಾಳಗುಂದ ಶಾಸನದ ಕಾಲ- ಕ್ರಿಸ್ತಶಕ 450
 • ಸಂಸ್ಕೃತದಲ್ಲಿರುವ ತಾಳಗುಂದ ಶಾಸನ ರಚಿಸಿದ ಕವಿ- ಕುಬ್ಜ
 1. ತಾಳಗುಂದ ಶಾಸನದ ವಿಷಯ ವಸ್ತು- ಕದಂಬರ ವಂಶದ ಸ್ಥಾಪನೆಯ ವರ್ಣನೆ
 2. ಐಹೊಳೆ ಶಾಸನ ರಚಿಸಿದ ಇಮ್ಮಡಿ ಪುಲಕೇಶಿ ಆಸ್ಥಾನದ ಕವಿ – ರವಿಕೀರ್ತಿ
 3. ಉಡುಪಿ ತಾಲೂಕಿನ ವಡ್ಡರ್ಸೆ ಗ್ರಾಮದ ಮಹಾಲಿಂಗೇಶ್ವರ ದೇವಾಲಯದ ಪ್ರಾಕಾರದಲ್ಲಿ ದೊರೆತ ಶಾಸನ- 1ನೇ Alvarasana ನ ಶಿಲಾಶಾಸನ
 4. ವಡ್ಡರ್ಸೆ ಶಾಸನವೊಂದುದಾನ ಶಾಸನ
 5. ಆಂಧ್ರದ ಆಲಂಪುರದಲ್ಲಿ1886 ರಲ್ಲಿ ದೊರೆತ ಶಾಸನ- ಮುಮ್ಮಡಿ ಗೋವಿಂದನ ತಾಮ್ರ ಶಾಸನ
 6. ಮುಮ್ಮಡಿ ಗೋವಿಂದನ ತಾಮ್ರ ಶಾಸನದ ಕಾಲ ಕ್ರಿಸ್ತಶಕ ಸುಮಾರು 804
 • ರಾಷ್ಟ್ರಕೂಟರ ಮೂರನೆ ಗೋವಿಂದನ ಪಲ್ಲವರ ದಂತಿವರ್ಮನ ಕಂಚಿ ಗೆದ್ದ ಮಾಹಿತಿ ತಿಳಿಸುವ ಶಾಸನ – ಆಲಂಪುರ ತಾಮ್ರ ಶಾಸನ
 1. ಮೂರನೇ ಗೋವಿಂದನ ಆಲಂಪುರ ತಾಮ್ರ ಶಾಸನವನ್ನು ಪತ್ತೆ ಹಚ್ಚಿದವರು- ಜಾನ್ ಫ್ಲಿಟ್
 • ಆಲಂಪುರ ತಾಮ್ರ ಶಾಸನ ಲಿಪಿ ಮತ್ತು ಭಾಷೆ- ಕನ್ನಡ ಲಿಪಿ
 1. ಸದ್ಯ ಆಲಂಪುರ ಶಾಸನ ಇರುವ ಸಂಗ್ರಹಾಲಯ – ಲಂಡನ್ ಮ್ಯೂಸಿಯಂ
 • 4 ತಾಮ್ರಪಟಗಳನ್ನೊಳಗೊಂಡ ಶಾಸನವನ್ನು ಭದ್ರ ಪಡಿಸಿದ್ದ ಮುದ್ರೆ- ವರಾಹ ಮುದ್ರೆಯ ಉಂಗುರ
 1. ಲಭ್ಯವಿರುವ ಕನ್ನಡದ ತಾಮ್ರ ಶಾಸನಗಳಲ್ಲಿ ಪ್ರಪ್ರಥಮ ಶಾಸನ- ಬೆಳ್ಮಣ್ಣು ತಾಮ್ರ ಶಾಸನ
 2. ಬೆಳ್ಮಣ್ಣು ತಾಮ್ರ ಶಾಸನವನ್ನು ಬೆಳಕಿಗೆ ತಂದವರು- ಡಾ|| ಪಿ ಗುರುರಾಜ್ ಭಟ್ಟರು.
 • ಬೆಳ್ಮಣ್ಣು ಶಾಸನ ಹೊರಡಿಸಿದ ದೊರೆ- ಇಮ್ಮಡಿ ಅಲ್ವರಾಸನನ ಶಾಸನ
 1. ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ಣು ಗ್ರಾಮದಲ್ಲಿ ಶಾಸನ ದೊರೆತ ಸ್ಥಳ – ಮಹಿಷಾಸುರ ಮರ್ದಿನಿ ದೇವಾಲಯ
 2. ದತ್ತಿಯ ಅರ್ಥದಲ್ಲಿ ಬೆಳ್ಮಣ್ಣು ಶಾಸನದಲ್ಲಿ ಬಳಸಲಾದ ಪದಪ್ರಾಣಿ ಗ್ರಹಣ (ನಾಯಿ)
 3. ಬೆಳ್ಮಣ್ಣು ತಾಮ್ರಶಾಸನ ಇದೊಂದು- ದಾನ ಶಾಸನ
 4. ಮಧ್ಯಪ್ರದೇಶದ ಜುರಾ ಗ್ರಾಮದ ಹಳೆಯ ಕೋಟೆಯಲ್ಲಿ ದೊರೆತ ಶಾಸನ – ಮೂರನೇ ಕೃಷ್ಣನ ಶಾಸನ
 5. ರಾಷ್ಟ್ರಕೂಟ ದೊರೆ 3ನೆಯ ಕೃಷ್ಣನ ಜುರಾ ಶಾಸನ ಇದೊಂದು- ಪ್ರಶಸ್ತಿ ಶಾಸನ
 • ಜುರಾ ಪ್ರಶಸ್ತಿ ಶಾಸನದ ಕಾಲ – ಸುಮಾರು ಕ್ರಿಸ್ತಶಕ 10ನೇ ಶತಮಾನ
 1. ಜುರಾ ಶಾಸನದ ಲಿಪಿ, ಶೈಲಿ ಕನ್ನಡ ಲಿಪಿ, ಪದ್ಯ (ಕಂದ)
 2. 3ನೇ ಕೃಷ್ಣನ ಶಾಸನವನ್ನು ರಚಿಸಿದವರು – ತುಯ್ಯಳ ಚಂದಯ್ಯ
 • 3ನೇ ಕೃಷ್ಣನ ಶಾಸನವನ್ನು ಕೋಟೆಯ ಗೋಡೆಯಲ್ಲಿ ಕೆತ್ತಿದವರು ಚಿಮ್ಮಯ್ಯ
 1. 3ನೇ ಕೃಷ್ಣನು ಶಾಸನ ಹೊರಡಿಸಿದ ಕಾರಣ – ಜುರಾ ಪ್ರಶಸ್ತಿ ಶಾಸನ
 2. ಪರಮ ಭಟ್ಟಾರಕ, ಪೃಥ್ವಿ ವಲ್ಲಭ, ಪರಾನ್ ಪರಾoಗಣ ಪುತ್ರ ಎಂದು 3ನೇ ಕೃಷ್ಣನನ್ನು ಹೊಗಳಿದ ಶಾಸನ- ಜುರಾ ಪ್ರಶಸ್ತಿ ಶಾಸನ
 3. ಉಡುಪಿ ತಾಲೂಕಿನ ಬಾರಕೂರಿನ ಪಂಚಲಿಂಗೇಶ್ವರ ದೇವಾಲಯದ ಕಂಬದ ಮೇಲೆ ಕಂಡುಬಂದ ಶಾಸನ 2ನೇ ದೇವರಾಯನ ಶಾಸನ.
 • ಇಮ್ಮಡಿ ದೇವರಾಯನ ಶಾಸನದ ಲಿಪಿ / ಭಾಷೆ- ಕನ್ನಡ ಲಿಪಿ
 1. ಬಾರಕೂರು ಶಾಸನ ಕೆತ್ತಿಸಿದ ಶಿಲ್ಪಿ- ಕಣ್ಣಪ್ಪ
 • ಬಾರಕೂರು ಶಾಸನ ಕ್ರಿಸ್ತ ಶಕ 15ನೇ ಶತಮಾನ
 1. ಸಿಂಗೆನಾಯಕನಹಳ್ಳಿ ಶಾಸನದ ಕಾಲ ಕ್ರಿಸ್ತಶಕ 1510
 2. ಹಂಪಿ ಸಮೀಪದ ಸಿಂಗೆನಾಯಕನಹಳ್ಳಿ ಯ ಸಮೀಪ ಬಂಡೆಯಲ್ಲಿ ದೊರೆತಿರುವ ಶಾಸನದ ಲಿಪಿ- ಕನ್ನಡ 14 ಸಾಲುಗಳು