ಹೆಚ್ಚಿನ ಅ‍ಭ್ಯಾಸಕ್ಕಾಗಿ ಬಟನ್‌ ಮೇಲೆ ಕ್ಲಿಕ್‌ ಮಾಡಿ.
For More Practice

3. ಪದಗಳು/ ಶಬ್ದಗಳು

ಸ್ನೇಹಿತರೇ, ನಾವು ಈ ಭಾಗದಲ್ಲಿ ಶಬ್ದಗಳ ರಚನೆ, ಶಬ್ದದ ಭಾಗಗಳು, ಶಬ್ದಗಳ ಪ್ರಭೇದದ ಬಗ್ಗೆ ತುಂಬ ಸರಳವಾಗಿ ತಿಳಿದುಕೊಳ್ಳೋಣ.

ಶಬ್ದ: ಅರ್ಥವುಳ್ಳ ಅಕ್ಷರಗಳ ಗುಂಪನ್ನು “ಪದ / ಶಬ್ದ” ಎನ್ನುತ್ತಾರೆ.

ಪದ: ಎಂದರೆ ಪ್ರಕೃತಿ ಮತ್ತು ಪ್ರತ್ಯಯ ಸೇರುವ ಸಮುದಾಯವನ್ನು “ಪದ” ಎನ್ನುವರು.

ಪ್ರಕೃತಿ : ಎಂದರೆ ಮೂಲರೂಪ ಅಥವಾ ಪ್ರತ್ಯಯ ರಹಿತವಾದದ್ದೆ ಪ್ರಕೃತಿ

ರಾಮನು ಈ ಪದ ವನ್ನು ಬಿಡಿಸಿ ಬರೆದಾಗ = ರಾಮ+ನು

ಈ ಪದದಲ್ಲಿ ರಾಮ ಪ್ರಕೃತಿ. ಅದೇ ರೀತಿ  ನು ಪ್ರತ್ಯಯ

ಮೂಲ ಪದ (ಪ್ರಕೃತಿ) + ಪ್ರತ್ಯಯ ಪದ
ಮನೆ + ಅನ್ನು ಮನೆಯನ್ನು
ಕಾಗದ + ಅಲ್ಲಿ ಕಾಗದದಲ್ಲಿ
ಪ್ರಕೃತಿಯಲ್ಲಿ ಎರಡು ವಿಧ

1) ಪ್ರಾತಿಪದಿ/ ನಾಮಪ್ರಕೃತಿ
2) ಧಾತು

ಅವುಗಳಿಗೆ ಪ್ರತಿಯೊಂದಕ್ಕೂ ಎರಡು ಬಗೆಯ ಪ್ರತ್ಯಯಗಳು ಸೇರುತ್ತವೆ.
1] ಪ್ರಾತಿಪದಿಕಕ್ಕೆ (ನಾಮಪ್ರಕೃತಿಗೆ) ನಾಮವಿಭಕ್ತಿ ಪ್ರತ್ಯಯ ಮತ್ತು ತದ್ಧಿತ ಪ್ರತ್ಯಯ ಸೇರುತ್ತದೆ.
2] ಧಾತು (ಕ್ರಿಯಾಪದ) ಕ್ರಿಯಾವಿಭಕ್ತಿ ಪ್ರತ್ಯಯ ಅಥವಾ ಆಖ್ಯಾತ ಪ್ರತ್ಯಯ ಮತ್ತು ಕೃತ ಪ್ರತ್ಯಯ ಸೇರುತ್ತದೆ.

1]            ಪ್ರಾತಿಪದಿ: ನಾಮವಿಭಕ್ತಿ ಪ್ರತ್ಯಯಗಳು ಸೇರುವ ಪ್ರಕೃತಿ (ಮೂಲಶಬ್ದ) ಗಳಿಗೆ ಪ್ರಾತಿಪದಿ ಅಥವಾ ನಾಮಪ್ರಕೃತಿ ಎಂದು ಹೆಸರು.

ಉದಾಹರಣೆ :  ಪುಸ್ತಕ, ಶಾಲೆ, ಮನೆ, ಅದು, ರಾಜು

ಪುಸ್ತಕ+ವನ್ನು=ಪುಸ್ತಕವನ್ನು
ಶಾಲೆ+ಗೆ=ಶಾಲೆಗೆ
ಮನ+ಇಂದ=ಮನೆಯಿಂದ
ಅದು+ಕ್ಕೆ=ಅದಕ್ಕೆ

ಪಾತಿಪದಿಗಳಿಗೆ ಅಂದರೆ ನಾಮ ಪ್ರಕೃತಿಗೆ ನಾಮ ವಿಭಕ್ತಿಪ್ರತ್ಯಯಗಳು ಸೇರಿದರೆ ಅವುಗಳನ್ನು ನಾಮ ಪದ ಗಳೆನ್ನುವರು.

2]            ಕ್ರಿಯಾ ವಿಭಕ್ತಿ ಪ್ರತ್ಯಯ: (ಆಖ್ಯಾತ ಪ್ರತ್ಯಯ) ಕ್ರಿಯಾ ವಿಭಕ್ತಿ ಪ್ರತ್ಯಯ ಸೇರುವ ಧಾತುಗಳಿಗೆ “ಕ್ರಿಯಾ ಪ್ರಕೃತಿ” ಎಂದು ಹೆಸರು.

ಉದಾಹರಣೆ : ಮಾತು, ಆಡು, ಕೇಳು, ನೋಡು, ಬರೆ, ಸೇರು, ಮಲಗು

ಮಾತು+ಅನ್ನು=ಮಾತನ್ನು
ಆಡು+ವುದು=ಆಡುವುದು
ಕೇಳು+ವುದು=ಕೇಳುವುದು

ಧಾತುಗಳಿಗೆ ಅಥವಾ ಕ್ರಿಯಾಪ್ರಕೃತಿಗೆ ಕ್ರಿಯಾವಿಭಕ್ತಿ ಪ್ರತ್ಯಯ  ಅಥವಾ ಆಖ್ಯಾತ ಸೇರಿದರೆ ಅವುಗಳನ್ನು ಕ್ರಿಯಾಪದ ಎನ್ನುವರು.

ಶಬ್ದಗಳ ಪ್ರಭೇದಗಳು

ಜಾತಿಭೇದದಿಂದ ಬಂದ ಶಬ್ದಗಳುರೂಪಭೇದದಿಂದ ಬಂದ ಶಬ್ದಗಳುಅರ್ಥಭೇದದಿಂದ ಬಂದ ಶಬ್ದಗಳು
1. ದೇಶ್ಯ ಶಬ್ದಗಳು1. ಸಿದ್ಧ ಶಬ್ದಗಳು1. ನಾಮಪದ
2. ಅನ್ಯ ದೇಶ್ಯ ಶಬ್ದಗಳು2. ಸಾಧಿತ ಶಬ್ದಗಳು2. ಸರ್ವನಾಮ
3. ತತ್ಸಮ ಶಬ್ದಗಳು 3. ವಿಶೇಷಣ
4. ತದ್ಭವ ಶಬ್ದಗಳು 4. ಧಾತು
  5. ಅವ್ಯಯ
ಜಾತಿ ಭೇದದಿಂದ ಶಬ್ದಗಳು

1] ದೇಶ್ಯ ಶಬ್ದಗಳು: ಕನ್ನಡ ಭಾಷೆಯಲ್ಲಿಯ ಅಚ್ಚಕನ್ನಡ ಪದಗಳನ್ನು ಅಥವಾ ಶಬ್ದಗಳನ್ನು ದೇಶ್ಯ ಶಬ್ದಗಳೆನ್ನುವರು.

2] ಅನ್ಯ ದೇಶ್ಯ ಶಬ್ದಗಳು:  ಸಂಸ್ಕೃತ ಮತ್ತು ಪಾಕೃತ ಭಾಷೆಯ ಪದಗಳನ್ನು ಬಿಟ್ಟು ಉಳಿದ ಶಬ್ದಗಳನ್ನು ಅನ್ಯದೇಶ್ಯ ಶಬ್ದಗಳೆನ್ನುವರು.

3] ತತ್ಸಮ ಶಬ್ದಗಳು : ಸಂಸ್ಕೃತ ಪದಗಳು ಮೂಲರೂಪದಲ್ಲಿ ಯಾವ ವ್ಯತ್ಯಾಸವನ್ನು ಹೊಂದದೆ ಹಾಗೆ ಕನ್ನಡದಲ್ಲಿ ಸೇರಿಕೊಂಡ ಸಂಸ್ಕೃತ ಪದಗಳಿಗೆ ತತ್ಸಮ ಶಬ್ದಗಳೆನ್ನುವರು. (‘ತತ್ಸಮ’ ಎಂದರೆ ಸಂಸ್ಕೃತಕ್ಕೆ ಸಮ ಎಂದರ್ಥ)

4] ತದ್ಭವ ಶಬ್ದಗಳು : ಸಂಸ್ಕೃತ ಶಬ್ದಗಳಲ್ಲಿ ಅಲ್ಪ-ಸ್ವಲ್ಪ ಬದಲಾವಣೆಗೊಂಡು ಮತ್ತು ಕೆಲವು ಪೂರ್ಣ ಬದಲಾವಣೆಗೊಂಡು ಸೇರಿಕೊಂಡಿರುವ ಶಬ್ದಗಳಿಗೆ ತದ್ಭವ ಶಬ್ದಗಳೆನ್ನುತ್ತಾರೆ. (‘ ತದ್ಭವ’ ಎಂದರೆ ಸಂಸ್ಕೃತದಿಂದ ‘ಭವ’ ಹೊಂದಿದ್ದು/ ಹುಟ್ಟಿದ್ದು ಎಂದರ್ಥ)     

ಜಾತಿ ಭೇದದಿಂದ ಬಂದ ಶಬ್ದಗಳು

1 ]        ದೇಶ್ಯ ಶಬ್ದಗಳು/ ಅಚ್ಚ ಕನ್ನಡ ಪದಗಳು :

ಅರೆಕೈಕಣ್ಣುಅವುಸಣ್ಣ
ಉಡುಕಾಲುಕಿವಿಇವುದೊಡ್ಡ
ತೊಡುಮೂಗುತಣ್ಣಗೆದನಬಿಳಿದು
ತರುಬಾಯಿಬೆಚ್ಚಗೆಕರುಕರಿದು

2 ]        ಅನ್ಯ ದೇಶ್ಯ ಶಬ್ದಗಳು:

(i)         ಹಿಂದುಸ್ತಾನಿ (ಪಾರ್ಸಿ – ಅರಬ್ಬೀ) ಶಬ್ದಗಳು

(ii)        ಇಂಗ್ಲೀಷ್ ನಿಂದ ಬಂದ ಶಬ್ದಗಳು

(iii)       ಪರ್ಷಿಯನ್ ಭಾಷಾ ಶಬ್ದಗಳು

(iv)       ಪೋರ್ಚುಗೀಸ್ ನಿಂದ ಬಂದ ಶಬ್ದಗಳು

(v)        ಹಿಂದಿ ಪದಗಳು

(i)         ಹಿಂದುಸ್ತಾನಿ (ಪಾರ್ಸಿ – ಅರಬ್ಬೀ) ಶಬ್ದಗಳು

ಕಚೇರಿರೈತಜಮೀನುನಕಲಿಸವಾರ್
ತಯಾರ್ಸಲಾಮುಮಂಜೂರುಜಮೀನ್ದಾರಿದವಾಖಾನೆ
ಕಾರ್ಖಾನೆಕಾನೂನುಹುಕುಂಗುಲಾಮಬಂದೂಕು
ಸರ್ಕಾರರಸ್ತೆದರ್ಬಾರ್ದಾಖಲ್ಹುಜೂರ್

(ii)           ಇಂಗ್ಲೀಷ್ ನಿಂದ ಬಂದ ಶಬ್ದಗಳು

ರೈಲುಚೆಕ್ಟಿಕೆಟ್ಕಾಲೇಜುಜೈಲು
ಕೋರ್ಟ್ಪೋಸ್ಟ್ಹೊಟೆಲ್ಮೋಟಾರುಡ್ರೆಸ್
ಬ್ಯಾಂಕ್ಟೇಬಲ್ರೂಂಸ್ಕೂಟರ್ಬೈಸಿಕಲ್
ರೋಡ್ಕಾರ್ಡ್ಸ್ಕೂಲ್ಆಪೀಸ್ಶರ್ಟ್

(iii)          ಪರ್ಷಿಯನ್ ಭಾಷಾ ಶಬ್ದಗಳು

ದಳ್ಳಾಳಿಕರಾಮತ್ತುಕಿಮ್ಮತ್ತುಹುಜೂರುಕುರ್ಚಿ
ಮೊಕದ್ದಮೆರವಾನೆಅಮಲ್ದಾರ್ಜವಾಬ್ರಾಜಿ
ಸಖತ್ಕಾಯಿಲೆಹವಾಲ್ದಾರ್ತ್ರಾಸ್ಕಾಗದ
ಮರ್ಜಿಕರಾಬುಸುಬೇದಾರ್ರುಮಾಲ್ತಾರೀಖು

(iv)         ಪೋರ್ಚುಗೀಸ್ ನಿಂದ ಬಂದ ಶಬ್ದಗಳು

ಅಲ್ಮೈರ್ಚಾವಿಪಗಾರ್ಬಾತುಸಾಬೂನು
ಆಸ್ಪತ್ರೆಜಂಗಾಲ್ಪಗೋಡಮೇಸ್ತ್ರಿಪಾದ್ರಿ
ಇಸ್ತ್ರಿತಂಬಾಕುಪಪ್ಪಾಯಿಲಾಂದ್ರಮೇಜು
ಕುಲಾಮ್ಇಸ್ಪೀಟುಪೀಪಾಯಿಅಲಮಾರಖರ್ಚು

3 ]           ತತ್ಸಮ ಶಬ್ದಗಳು ಮತ್ತು 4] ತದ್ಭವಗಳು

ತತ್ಸಮತದ್ಭವತತ್ಸಮತದ್ಭವತತ್ಸಮತದ್ಭವ
ಕನ್ಯಾಕನ್ಯೆಕಳ್ತೆಕತ್ತೆಕರ್ಣಾಟಕನ್ನಡ
ಕನ್ಯಕಾಕನ್ನಿಕೆಕರ್ಪರಕಪ್ಪರಕಾರ್ಯಕಜ್ಜ
ಕರ್ತರಿಕತ್ತರಿಕಸ್ತೂರಿಕತ್ತುರಿಕಾವ್ಯಕಬ್ಬ
ಕಾಷ್ಠಕಡ್ಡಿಕುಕ್ಷಿಕುಕ್ಕೆಕುಬ್ಜಗುಜ್ಜ