ಸಮನಾರ್ಥಕ ಪದಗಳು ಭಾಗ-6 ರತ್ನಕೋಶ+ Govt Text book ಪದಗಳ PDF

ಸಮನಾರ್ಥಕ ಪದಗಳು ಭಾಗ-6

  • ಅಂಗಳ – ಅಂಗಣ, ಮನೆಯ ಮುಂದಿನ ಅಥವಾ ಹಿಂದಿನ ಬಯಲು ಭಾಗ
  • ಅಂಘ್ರಿ – ಪಾದ
  • ಅಂಚು – ಕೊನೆ, ತುದಿ
  • ಅಂಜು – ಹೆದರು
  • ಅಂತಃಪುರ – ರಾಣಿವಾಸ
  • ಅಂದದಿ – ರೀತಿಯಲ್ಲಿ
  • ಅಂಧಕಾರ – ಕತ್ತಲೆ, ತಿಮಿರ
  • ಅಖಂಡ – ಅವಿಚ್ಛಿನ್ನ, ಪೂರ್ಣ
  • ಅಖಿಲ – ಸಕಲ, ಎಲ್ಲಾ
  • ಅಗ್ರಗಣ್ಯ – ಮೊಟ್ಟಮೊದಲಿನ, ಸರ್ವಶ್ರೇಷ್ಠ
  • ಅಚ್ಚಳಿ – ಅಂದಕೆಡು
  • ಅಡಗು – ಕಾಣದಂತಾಗು
  • ಅಣಿಯಾಗು – ಸಿದ್ಧವಾಗು
  • ಅದಟು – ಪರಾಕ್ರಮ,ಶೌರ್ಯ
  • ಅದ್ದಿ – ಮುಳುಗಿಸು, ತೋಯಿಸು
  • ಅನಿತರೊಳಗೆ – ಅಷ್ಟರಲ್ಲಿ
  • ಅನಿವಾರ್ಯ – ಅತ್ಯಗತ್ಯ
  • ಅನಿಸಿಕೆ – ಅಭಿಪ್ರಾಯ, ಅಭಿಮತ
  • ಅನುಗುಣ – ಅನುಸಾರ, ಹೊಂದಿಕೊಂಡು
  • ಅನುದಿನ – ದಿನನಿತ್ಯ
  • ಅಪರಂಜಿ – ಬಂಗಾರ
  • ಅಪರಾಧಿ – ತಪ್ಪುಮಾಡಿದವನು
  • ಅಮ್ಮೆ – ಸಾಧ್ಯವಿಲ್ಲ.
  • ಅರಳೆ – ಹತ್ತಿ
  • ಅರಿ – ತಿಳಿ, ಕತ್ತರಿಸು
  • ಅರಿಬಲ – ವೈರಿ ಸೈನ್ಯ
  • ಅರೆದು – ತೇದು, ಉಜ್ಜಿ
  • ಅಲಂಕಾರ – ಸಿಂಗಾರ, ಸೊಗಸು
  • ಅವಿತು – ಬಚ್ಚಿಟ್ಟುಕೊಳ್ಳುವುದು
  • ಅಷ್ಟಮೀ – ಎಂಟನೆಯ
  • ಅಸದ – ಅಸಾಧ್ಯ, ಅತಿಶಯ
  • ಅಸಮಬಲ – ಸಮಾನವಲ್ಲದ ಶಕ್ತಿ ಉಳ್ಳವರು
  • ಅಸಹನೀಯ – ಸಹಿಸಲು ಸಾಧ್ಯವಿಲ್ಲದ, ತಡೆಯಲಾಗದ
  • ಅಸ್ತಿತ್ವ – ಇರುವಿಕೆ
  • ಅಹಿತರು – ಹಿತವಲ್ಲದವರು, ವೈರಿಗಳು
  • ಅಳಿ – ಸಾಯು, ನಾಶಹೊಂದು
  • ಅಳಿಮನ – ದೃಢವಲ್ಲದ ಮನಸ್ಸು, ಅಸ್ಥಿರವಾದ ಮನಸ್ಸು
  • ಆಂದೋಲನ – ಚಳುವಳಿ, ಕ್ರಾಂತಿ
  • ಆಕರ – ಮೂಲ ಆಧಾರ
  • ಆಕಾಶವಾಣಿ – ಆಕಾಶದಲ್ಲಿ ಕೇಳುವ ಧ್ವನಿ
  • ಆಗಸ – ಆಕಾಶ, ಗಗನ
  • ಆಚ್ಛಾದನ – ಬಟ್ಟೆ, ವಸ್ತ್ರ
  • ಆಜುಬಾಜು – ಅಕ್ಕಪಕ್ಕ, ನೆರೆಹೊರೆ
  • ಆಣ್ಮ – ಒಡೆಯ, ರಾಜ.
  • ಆದೇಶ – ಆಜ್ಞೆ, ಅಪ್ಪಣೆ
  • ಆದ್ರ್ರತೆ – ನೀರಿನ ಅಂಶ, ತೇವಾಂಶ
  • ಆಪೆ – ಸಮರ್ಥನಾಗುವೆ
  • ಆಭರಣ – ಒಡವೆ
  • ಆಯೋಜಿಸು – ಏರ್ಪಾಡುಮಾಡು, ವ್ಯವಸ್ಥೆಗೊಳಿಸು
  • ಆಲಿಸು – ಕೇಳು
  • ಆಲೆ – ಕಬ್ಬಿನ ರಸ ತೆಗೆಯುವ ಯಂತ್ರ, ಗಾಣ
  • ಆಶ್ಚರ್ಯ – ವಿಸ್ಮಯ, ಬೆರಗು
  • ಆಶ್ರಯ – ಆಸರೆ, ಸಹಾಯ, ರಕ್ಷಣೆ
  • ಆಹವ – ಯುದ್ಧ, ಅನುವರ, ಕಾಳಗ, ಸಮರ
  • ಇಂಗಿತ – ಆಶಯ
  • ಇಂದುಧರ – ಚಂದ್ರನನ್ನು ಧರಿಸಿರುವವ, ಶಿವ
  • ಇಕ್ಕು – ಇಡು, ಬಡಿಸು
  • ಇಷ್ಟ – ಇಚ್ಛೆ, ಮೆಚ್ಚುಗೆ
  • ಇಳೆ – ಭೂಮಿ, ಧರೆ
  • ಉಚ್ಛಿಷ್ಠ – ಎಂಜಲು
  • ಉದಯ – ಹುಟ್ಟುಮೂಡು
  • ಉದ್ಗರಿಸು – ಹೇಳು, ಹೊರಗೆಡಹು
  • ಉಪಕರಿಸು – ಉಪಕಾರ ಮಾಡು, ನೆರವು ನೀಡು
  • ಉಭಯ – ಎರಡು, ಜೋಡಿ
  • ಉರಗ – ಹಾವು
  • ಉಳಿಸು – ರಕ್ಷಿಸು, ಕಾಪಾಡು
  • ಊಡು – ಉಣಿಸು, ತಿನ್ನಿಸು
  • ಎಕ್ಕಡ – ಪಾದುಕೆ, ಪಾದರಕ್ಷೆ
  • ಎಡವಟ್ಟು – ರೂಢಿಗೆ
  • ಎನಿತು – ಎಷ್ಟು
  • ಎಸುಗೆ – ಬಾಣ ಪ್ರಯೋಗ
  • ಏಡಿಸಲು – ಛೇಡಿಸು, ಚೇಷ್ಟೆಮಾಡು
  • ಒಕ್ಕೊರಲು – ಒಗ್ಗಟ್ಟು, ಒಂದೇ ಧ್ವನಿಯಾಗು
  • ಒಡನೆ – ತಕ್ಷಣ
  • ಒಡಲು – ಶರೀರ, ಹೊಟ್ಟೆ
  • ಒಡೆಯ-ರಾಜ, ದೊರೆ
  • ಒಡ್ಡೋಲಗ – ರಾಜಸಭೆ, ದರ್ಬಾರು
  • ಒರಸಿ – ನಾಶಮಾಡಿ
  • ಒಸರು – ಜಿನುಗು
  • ಓಟಕೀಳು – ಓಡಿಹೋಗು
  • ಓಲಗ – ರಾಜಸಭೆ
  • ಓಲೈಸು – ಮೆಚ್ಚಿಸು
  • ಔತಣ – ವಿಶೇಷ ಭೋಜನ
  • ಕಂಗಾಲಾಗು – ಕಂಗೆಡು, ತಬ್ಬಿಬ್ಬಾಗು
  • ಕಂಚು – ಒಂದು ಲೋಹ
  • ಕಂಪು – ಸುಗಂಧ, ಪರಿಮಳ
  • ಕಂಬಳಿಗೊಪ್ಪೆ – ಮಳೆಯಿಂದ ರಕ್ಷಿಸಿಕೊಳ್ಳಲು ಕಂಬಳಿಯಿಂದ ಮಾಡಿದ ಮುಸುಕು
  • ಕಡೆ – ನಿವಾರಿಸು
  • ಕಣ – ಅತ್ಯಂತ ಸೂಕ್ಷ್ಮವಾದ ಅಂಶ
  • ಕಣ್ಣು ಕಪ್ಪಡಿ – ಬಾವಲಿ
  • ಕದ – ಬಾಗಿಲು
  • ಕನಲು – ಕೋಪಗೊಳ್ಳು, ಸಿಟ್ಟಾಗು
  • ಕನವರಿಕೆ – ನಿದ್ದೆಯಲ್ಲಿ ಮಾತಾಡಿಕೊಳ್ಳುವಿಕೆ, ಒಂದೇ
  • ಕಮರು – ಕಂದು
  • ಕರ – ಕೈ
  • ಕರಿ – ಆನೆ
  • ಕರಿದು – ಕಪ್ಪಾದ ಬಣ್ಣ
  • ಕರುಣೆ – ಕನಿಕರ, ದಯೆ
  • ಕರುನಾಳು – ಕನಿಕರವುಳ್ಳವನು
  • ಕರ್ತವ್ಯ – ಕೆಲಸ, ಜವಾಬ್ದಾರಿ
  • ಕಲಿ – ವೀರ, ಶೂರ
  • ಕಾದಲ – ಇನಿಯ, ಪ್ರೀತಿಸುವಾತ
  • ಕಾರಿರುಳು – ದಟ್ಟವಾದ ಕತ್ತಲೆ
  • ಕಾರ್ಯಪ್ರವರ್ತ – ಕೆಲಸ ಮಾಡಲು ಮೊದಲಾಗು
  • ಕಾಲ್ತೆಗೆ – ಓಡಿಹೋಗು
  • ಕಾಳಗ – ಯುದ್ಧ, ಹೋರಾಟ
  • ಕಿಚ್ಚು – ಬೆಂಕಿ
  • ಕಿಸೆ – ಜೇಬು
  • ಕುಣಿ – ಕುಳಿ, ಹೊಂಡ, ನರ್ತಿಸು
  • ಕುತರ್ಕ – ನ್ಯಾಯವಿಲ್ಲದ ಮಾತು
  • ಕುತೂಹಲ – ಅಚ್ಚರಿ, ವಿಸ್ಮಯ
  • ಕುನ್ನಿ – ನಾಯಿಮರಿ
  • ಕುಪ್ಪಳಿಸು – ಹಾರು, ಜಿಗಿಯು
  • ಕುಮಂತ್ರ – ಮೋಸದ ಆಲೋಚನೆ
  • ಕುಸುಮಮಾಲೆ – ಹೂವಿನಮಾಲೆ
  • ಕೂಸು – ಮಗು
  • ಕೃತಾಂತ – ಯಮ
  • ಕೃಪೆ – ದಯೆ, ಕರುಣೆ
  • ಕೆಂಗಿಡಿ – ಉರಿಬೆಂಕಿ, ಕೆಂಪಾದ ಬೆಂಕಿ
  • ಕೆಚ್ಚೆದೆ – ಗಟ್ಟಿಯಾದಎದೆ, ಎದೆಗಾರಿಕೆ
  • ಕೊಂಚ – ಸ್ವಲ್ಪ
  • ಕೊಂಡ್ಹೋಗು – ತೆಗೆದುಕೊಂಡುಹೋಗು
  • ಕೊಡನ ಮಗ – ದ್ರೋಣ
  • ಕೊಬ್ಬು – ರಸಭರಿತ
  • ಕೊಳ – ಸರೋವರ
  • ಕೊಳೆ – ಕಲ್ಮಷ, ಹೊಲಸು
  • ಕೊಳೆಗೊಂಡು – ಮಾಲಿನ್ಯಗೊಂಡು, ತೃಪ್ತಿಗೊಂಡು
  • ಕೊಳೆ – ಹೊಲಸು
  • ಕೋಮೋಜೋಮು – ವರ್ಣತಂತು
  • ಕೋರು – ಕೇಳಿಕೊಳ್ಳು, ಬೇಡು
  • ಕೋಶ – ಭಂಡಾರ
  • ಕ್ರೀಡಾಗಾರ – ಕ್ರೀಡಾಂಗಣ
  • ಕ್ಷಾಮ – ಬರಗಾಲ
  • ಕ್ಷೀರ – ಹಾಲು
  • ಖಂಡಿಗೆಳೆ – ನಾಶಪಡಿಸು
  • ಖಜಾನೆ – ಬೊಕ್ಕಸ
  • ಖನಿ – ಗಣಿ, ಆಕರ
  • ಗಜ – ಆನೆ
  • ಗತಿ – ಸ್ಥಿತಿ, ದಾರಿ
  • ಗದ್ಗದ ಕಂಠ – ನಿಂತು ನಿಂತು ಬರುವ ಅಸ್ಪಷ್ಟವಾದ ಮಾತು, ಬಿಗಿದ ಕಂಠ
  • ಗಿಣಿ – ಗಿಳಿ
  • ಗುಟುರು – ಹೂಂಕರಿಸು, ಜೋರಾಗಿ ಧ್ವನಿ ಮಾಡು
  • ಗುಡಿ – ಬಾವುಟ, ಕೇತನ
  • ಗುನುಗು – ಸತತವಾಗಿ ಧ್ವನಿಮಾಡು
  • ಗೂಢಚಾರ – ಗುಪ್ತಚರ
  • ಗೊರಬು – ಕಂಬಳಿ
  • ಗೋಣು – ಕುತ್ತಿಗೆ
  • ಘನ – ದೊಡ್ಡ
  • ಚಂದ – ಚೆನ್ನಾಗಿ, ಚೆನ್ನ
  • ಚರಿತ್ರೆ – ಇತಿಹಾಸ
  • ಚಾತುರಂಗ – ಸೈನ್ಯದ ನಾಲ್ಕು ಅಂಗಗಳು (ಆನೆ, ಕುದುರೆ, ರಥ, ಕಾಲಾಳಿನ ಬಲ)
  • ಚಾವಡಿ – ಜಗಲಿ
  • ಚಾಳಿ – ನಡವಳಿಕೆ, ವರ್ತನೆ
  • ಚಿಗರೆ – ಜಿಂಕೆ
  • ಕರಣ – ಒಡಲು, ಶರೀರ
  • ಕಳೆ – ಕಾಂತಿ, ತೇಜಸ್ಸು, ಪ್ರಕಾಶ, ಚಿಮುಕಿ
  • ಎರೆ – ಹೊಯ್ಯು
  • ಚಿಮ್ಮು – ಹಾರು, ಜಿಗಿ, ನೆಗೆ
  • ಚುಂಬನ – ಮುತ್ತು
  • ಚೆಲ್ಲಾಪಿಲ್ಲಿ – ಅಸ್ತವ್ಯಸ್ತ, ಚೆದುರು
  • ಚೊಕ್ಕ – ಚೆನ್ನಾಗಿ, ಅಚ್ಚುಕಟ್ಟಾಗಿ
  • ಚೊಕ್ಕಬಂಗಾರ – ಅಪ್ಪಟ ಬಂಗಾರ, ಅಪರಂಜಿ
  • ಜನಜನಿತ – ಪ್ರಸಿದ್ಧವಾದ
  • ಜನಪ – ರಾಜ (ಇಲ್ಲಿ ಧರ್ಮರಾಯ)
  • ಜನಿತ – ಹುಟ್ಟು, ಜನ್ಮತಾಳು
  • ಜರೆ – ನಿಂದಿಸು, ಬಯ್ಯು
  • ಜೀಯ – ಸ್ವಾಮಿ, ಒಡೆಯ
  • ಜೈಲು – ಸೆರೆಮನೆ, ಬಂಧೀಖಾನೆ
  • ಜೋಪಾನ – ರಕ್ಷಣೆ, ಜತನ
  • ಟಾರ – ಡಾಂಬರು
  • ತಡ – ನಿಧಾನ, ವಿಳಂಬ
  • ತಡವೆ – ಬಾರಿ, ಸಲ
  • ತಣಿಸು – ತಂಪಾಗಿಸು, ತೃಪ್ತಿಗೊಳಿಸು
  • ತನುಜ – ಮಗ
  • ತಮಾಷೆ – ಹಾಸ್ಯ
  • ತರಾವರಿ – ವಿಧವಿಧವಾದ
  • ತವರು – ತಾಯಿಯ ಮನೆ
  • ತಳಹದಿ – ಬುನಾದಿ
  • ತಾಣ – ಜಾಗ, ಸ್ಥಳ
  • ತಾಪ – ಬಿಸಿ, ಶಾಖ
  • ತಾರಮ್ಮಯ್ಯ – ಅಂಗೈ ಆಡಿಸು
  • ತಿರಿ – ಭಿಕ್ಷೆಬೇಡು, ತಿರುಗಾಡು
  • ತಿರುಕ – ಭಿಕ್ಷುಕ
  • ತೀಡು – ಬೀಸು, ಹೊರಹೊಮ್ಮು
  • ತೀರಿಕೊಳ್ಳು – ಗತಿಸು, ಮರಣ ಹೊಂದು
  • ತೀವ್ರ – ಹೆಚ್ಚು
  • ತುಕಡಿ – ಸೈನ್ಯ
  • ತುಣುಕು – ಚೂರು, ತುಂಡು
  • ತೂರು – ಎಸೆ
  • ತೆಗಳು – ಹೀಯಾಳಿಸು, ನಿಂದಿಸು
  • ತೆನೆ – ಕಾಳು ತುಂಬಿದ ಪೈರಿನ ತುದಿ.
  • ತೆರವು – ಖಾಲಿ
  • ತೊಡರಿಸು – ಧರಿಸು, ಹಾಕು
  • ತೊಯ್ – ನೆನೆ, ಒದ್ದೆಯಾಗು
  • ತೊರೆ – ನದಿ, ಹೊಳೆ
  • ತೊಲಗು – ಬಿಟ್ಟುಹೋಗು, ಹೊರಟುಹೋಗು
  • ತೊಳೆ – ನೀರಿನಿಂದ ಸ್ವಚ್ಛಗೊಳಿಸು
  • ತೋರು – ಕಾಣುವಂತೆ ಮಾಡು
  • ದಂಡು – ಸೈನ್ಯ
  • ದಕ್ಕು – ದೊರಕು
  • ದಾಕ್ಷಿಣ್ಯ – ಸಂಕೋಚ, ಹಿಂಜರಿಕೆ
  • ದಾತ – ಒಡೆಯ, ಸ್ವಾಮಿ
  • ದಿಟ್ಟತನ – ಧೈರ್ಯ
  • ದಿಟ್ಟಹೆಜ್ಜೆ – ಧೈರ್ಯದ ಹೆಜ್ಜೆ, ಸಾಹಸದ ನಡೆ
  • ದುಗುಡ – ಚಿಂತೆ, ಆತಂಕ
  • ದುರ್ಮತಿ – ಕೆಟ್ಟ ಬುದ್ಧಿ, ದುಷ್ಟ ವ್ಯಕ್ತಿ
  • ದುಸ್ತರ – ಕಠಿಣ, ಕಷ್ಟಸಾಧ್ಯ
  • ದೌರ್ಬಲ್ಯ – ಬಲಹೀನತೆ, ಚಾಪಲ್ಯ
  • ಧಕ್ಕೆ – ತೊಂದರೆ
  • ಧನ – ಹಣ, ಸಂಪತ್ತು
  • ಧನ್ಯತೆ – ಸಂತೃಪ್ತಿ
  • ಧರೆ – ನೆಲ, ಭೂಮಿ
  • ಧರ್ಮಶಾಲೆ – ಅನ್ನಛತ್ರ.
  • ಧ್ಯೇಯೋದ್ದೇಶ – ಗುರಿ
  • ಧ್ರುವತಾರೆ – ಧ್ರುವನಕ್ಷತ್ರ (ಸ್ಥಿರವಾದ ಲಕ್ಷ್ಯ)
  • ನಂಜು – ವಿಷ
  • ನಟ್ಟ ನಡುವೆ – ಮಧ್ಯೆ
  • ನಭ – ಆಕಾಶ, ಗಗನ, ಅಂಬರ
  • ನಲ್ಲ – ಪ್ರಿಯತಮ
  • ನಾಟಿ – ಪೈರಿನ ಸಸಿಗಳನ್ನು ನೆಡುವುದು
  • ನಾಡು – ಜನವಸತಿಯುಳ್ಳ ಪ್ರದೇಶ, ರಾಜ್ಯ
  • ನಿಂದಕರು – ನಿಂದಿಸುವವ, ಬಯ್ಯುವವ
  • ನಿಘಂಟು – ಶಬ್ದಕೋಶ, ಶಬ್ದಾರ್ಥ ಸಂಗ್ರಹ
  • ನಿಜಾಂಶ – ಸತ್ಯ, ದಿಟ
  • ನಿಟ್ಟುಸಿರು – ದೀರ್ಘವಾಗಿ ಬಿಡುವ ಉಸಿರು, ನಿಡಿದಾದ ಶ್ವಾಸ
  • ನಿಮ್ಮಡಿ ಆಲಿ – ನಿಮ್ಮ ಕಣ್ಣುಗಳಿಗೆ
  • ನಿರಾಳ – ಶಾಂತಿ, ನೆಮ್ಮದಿ
  • ನಿರ್ಭೀತ – ಭಯವಿಲ್ಲದ
  • ನಿರ್ಮುಕ್ತ – ಸರ್ವಸ್ವತಂತ್ರ
  • ನಿರ್ವಹಿಸು – ನಭಾಯಿಸು, ಪೂರೈಸು
  • ನೀಟಾಗಿ – ಅಂದವಾಗಿ, ಸೊಗಸಾಗಿ
  • ನೀರಾವು – ನೀರಿನಲ್ಲಿ ಬದುಕುವ ಹಾವು
  • ನೃಪ – ರಾಜ, ದೊರೆ
  • ನೆಡು – ನಾಟು
  • ನೆರವು – ಸಹಾಯ
  • ನೆಲೆಕಲ್ಪಿಸು – ವೇದಿಕೆ ಒದಗಿಸು, ಅವಕಾಶ ಮಾಡಿಕೊಡು
  • ನೇಮ – ಅಪ್ಪಣೆ
  • ನೇಯುವುದು – ತಯಾರಿಸು, ಹೆಣೆಯುವುದು
  • ಪಂಜರ – ಪಕ್ಷಿಗಳ ಬೋನು
  • ಪಕ್ಕಾಗು – ಒಳಗಾಗು
  • ಪಕ್ಕೆಲುಬು – ಇಬ್ಬದಿಯ ಎಲುಬುಗಳು
  • ಪಕ್ವತನ – ಮಾಗಿದ
  • ಪಗಡಿ – ಕಾಣಿಕೆ, ಗೌರವ
  • ಪಗಡೆ – ಒಂದು ರೀತಿಯ ಆಟ
  • ಪಟ್ಟ – ಸಿಂಹಾಸನ
  • ಪಟ್ಟಿ – ಯಾದಿ, ವಿವರಣೆಯ ಬರಹ
  • ಪಠಿಸು – ಓಡಿಹೋಗು
  • ಪಡಪೋಶಿ – ಕೆಲಸಕ್ಕೆ ಬಾರದ
  • ಪಣ – ಒತ್ತೆಇಡು
  • ಪತ್ತೆ – ಗುರುತು, ಸುಳಿವು, ವಿಳಾಸ
  • ಪಥ – ಮಾರ್ಗ, ದಾರಿ
  • ಪಥ್ಯ – ಆಹಾರದ ಕಟ್ಟುಪಾಡು, ಯೋಗ್ಯವಾದುದು
  • ಪರಕೀಯ – ಬೇರೆಯ
  • ಪರಕೀಯ – ವಿದೇಶಿಯ, ಅನ್ಯ
  • ಪರಾಂಬರಿಸು – ಗಮನಿಸು, ಪರಿಶೀಲಿಸು
  • ಪರಿಸಮಾಪ್ತಿ – ಮುಕ್ತಾಯ, ಕೊನೆ
  • ಪರ್ಣ – ಎಲೆ
  • ಪಾಂಡಿತ್ಯ – ವಿದ್ವತ್ತು
  • ಪಾಶ – ಹಗ್ಗ
  • ಪಾಶ್ಚಾತ್ಯ – ಪಶ್ಚಿಮದೇಶ
  • ಪಿತೃ – ತಂದೆ
  • ಪಿಳ್ಳಂಗೋವಿ ಕೊಳಲು
  • ಪಿಳ್ಳೆ ಮಗು
  • ಪೀಡೆ – ತೊಂದರೆ
  • ಪೀತಾಂಬರ – ರೇಷ್ಮೆಬಟ್ಟೆ
  • ಪುರ – ಪಟ್ಟಣ, ನಗರ
  • ಪೊಡವಿ ರಾಜ್ಯ
  • ಪೋರ ಹುಡುಗ
  • ಪೋಷಕ – ಸಲಹುವಾತ, ಪಾಲಕ
  • ಪ್ರಗತಿ – ಮುನ್ನಡೆ, ಅಭಿವೃದ್ಧಿ
  • ಪ್ರಭೆ – ಕಾಂತಿ, ಪ್ರಕಾಶ
  • ಪ್ರಮಥರು – ಶಿವನ ಭಕ್ತರು
  • ಪ್ರವೇಶದ್ವಾರ – ಒಳಹೋಗುವ ಮುಖ್ಯ ಬಾಗಿಲು
  • ಪ್ರಸ್ತುತಪಡಿಸು – ಪ್ರಕಟಿಸು, ಸಾದರಪಡಿಸು
  • ಪ್ರಾಣಿಗಿಂಡಿ – ಕಾಡಿನಲ್ಲಿರುವ ಪ್ರಾಣಿಗಳು ನೀರನ್ನು ಕುಡಿಯುವುದಕ್ಕಾಗಿ ಹೋಗಲು ಮಾಡಿಕೊಂಡ ಕಿಂಡಿ
  • ಪ್ರೇರಣೆ – ಪ್ರಚೋದನೆ, ಮುಂದಕ್ಕೆ ಹೋಗುವಂತೆ ಉತ್ತೇಜಿಸುವಿಕೆ
  • ಫಟಿಂಗ – ತುಂಟ, ಭಂಡ
  • ಬಟ್ಟೆ – ಮಾರ್ಗ, ದಾರಿ
  • ಬಡಪಾಯಿ – ಅಶಕ್ತ, ದುರ್ಬಲ, (ದರಿದ್ರ)
  • ಬಡಿ – ಬಾರಿಸು, ಪೆಟ್ಟು ಹಾಕು
  • ಬಡಿಗೆ – ದೊಣ್ಣೆ, ಕೋಲು
  • ಬಯಲು – ಅಂಗಳ, ಮೈದಾನ
  • ಬರಡು – ಸತ್ವಹೀನ
  • ಬರ – ಬರಗಾಲ, ಕ್ಷಾಮ
  • ಕೆಚ್ಚು – ಕೂಡುವಿಕೆ, ಬೆಸುಗೆ, ಸೇರಿಸು
  • ಅಚ್ಚಳಿಯದೆ -ಅಂದಗೆಡದಂತೆ, ರೂಪುಗೆಡದಂತೆ
  • ಬಲಿದಾನ – ಪ್ರಾಣತ್ಯಾಗ
  • ಬಾದಿ – ಕೈನೂಲಿನಿಂದ ನೆಯ್ದ ಬಟ್ಟೆ
  • ಬಾನಾಡಿ – ಪಕ್ಷಿ
  • ಬಾಳೆ – ಬಾಳೆಯಗಿಡ
  • ಬಿಡೆ ಬಿಡುವುದಿಲ್ಲ
  • ಬಿರು – ರಭಸ, ಬಿರುಸು
  • ಬಿಸಿಲು ಮಚ್ಚು – ಬಿಸಿಲು ಮಾಳಿಗೆ
  • ಬೀಗು – ಉಬ್ಬು, ಹೆಮ್ಮೆತಾಳು
  • ಬೀರು – ಹರಡು
  • ಬೆದರು – ಹೆದರು, ಭಯಪಡು
  • ಬೆಮರು – ಬೆವರು
  • ಬೆರಗು – ಆಶ್ಚರ್ಯ, ವಿಸ್ಮಯ, ಸೋಜಿಗ
  • ಬೆಸಸು – ಅಪ್ಪಣೆಮಾಡು
  • ಬೆಸುಗೆ – ಹೊಂದಿಕೆ, ಜೋಡಣೆ
  • ಬೆಸೆ – ಕೂಡಿಸು, ಸೇರಿಸು
  • ಬೊಗಳೆ – ಕೆಲಸಕ್ಕೆ ಬಾರದ ಮಾತು, ಪೊಳ್ಳು ಹರಟೆ
  • ಬೊಡ್ಡೆ ಮರದ ಕಾಂಡದ ಭಾಗ
  • ಬೊಪ್ಪ – ತಂದೆ, (ಇಲ್ಲಿ ದೊಡ್ಡಪ್ಪ)
  • ಬೊಬ್ಬಿಡು – ಕೂಗು, ಅರಚು, ಗಟ್ಟಿಯಾಗಿ ಹೇಳು
  • ಭಂಗ – ಸೋಲು, ವೈಫಲ್ಯ
  • ಭಂಗಿ – ಹಾವಭಾವ, ವಿನ್ಯಾಸ
  • ಭಂಡಾರ – ಬೊಕ್ಕಸ, ಖಜಾನೆ
  • ಭಟ್ಟಿನಿಗಳು – ಹೆಂಡತಿಯರು