ಹೆಚ್ಚಿನ ಅಭ್ಯಾಸಕ್ಕಾಗಿ ಬಟನ್ ಮೇಲೆ ಕ್ಲಿಕ್ ಮಾಡಿ.
For More Practice
ಸಮನಾರ್ಥಕ ಪದಗಳು ಭಾಗ-6
- ಅಂಗಳ – ಅಂಗಣ, ಮನೆಯ ಮುಂದಿನ ಅಥವಾ ಹಿಂದಿನ ಬಯಲು ಭಾಗ
- ಅಂಘ್ರಿ – ಪಾದ
- ಅಂಚು – ಕೊನೆ, ತುದಿ
- ಅಂಜು – ಹೆದರು
- ಅಂತಃಪುರ – ರಾಣಿವಾಸ
- ಅಂದದಿ – ರೀತಿಯಲ್ಲಿ
- ಅಂಧಕಾರ – ಕತ್ತಲೆ, ತಿಮಿರ
- ಅಖಂಡ – ಅವಿಚ್ಛಿನ್ನ, ಪೂರ್ಣ
- ಅಖಿಲ – ಸಕಲ, ಎಲ್ಲಾ
- ಅಗ್ರಗಣ್ಯ – ಮೊಟ್ಟಮೊದಲಿನ, ಸರ್ವಶ್ರೇಷ್ಠ
- ಅಚ್ಚಳಿ – ಅಂದಕೆಡು
- ಅಡಗು – ಕಾಣದಂತಾಗು
- ಅಣಿಯಾಗು – ಸಿದ್ಧವಾಗು
- ಅದಟು – ಪರಾಕ್ರಮ,ಶೌರ್ಯ
- ಅದ್ದಿ – ಮುಳುಗಿಸು, ತೋಯಿಸು
- ಅನಿತರೊಳಗೆ – ಅಷ್ಟರಲ್ಲಿ
- ಅನಿವಾರ್ಯ – ಅತ್ಯಗತ್ಯ
- ಅನಿಸಿಕೆ – ಅಭಿಪ್ರಾಯ, ಅಭಿಮತ
- ಅನುಗುಣ – ಅನುಸಾರ, ಹೊಂದಿಕೊಂಡು
- ಅನುದಿನ – ದಿನನಿತ್ಯ
- ಅಪರಂಜಿ – ಬಂಗಾರ
- ಅಪರಾಧಿ – ತಪ್ಪುಮಾಡಿದವನು
- ಅಮ್ಮೆ – ಸಾಧ್ಯವಿಲ್ಲ.
- ಅರಳೆ – ಹತ್ತಿ
- ಅರಿ – ತಿಳಿ, ಕತ್ತರಿಸು
- ಅರಿಬಲ – ವೈರಿ ಸೈನ್ಯ
- ಅರೆದು – ತೇದು, ಉಜ್ಜಿ
- ಅಲಂಕಾರ – ಸಿಂಗಾರ, ಸೊಗಸು
- ಅವಿತು – ಬಚ್ಚಿಟ್ಟುಕೊಳ್ಳುವುದು
- ಅಷ್ಟಮೀ – ಎಂಟನೆಯ
- ಅಸದ – ಅಸಾಧ್ಯ, ಅತಿಶಯ
- ಅಸಮಬಲ – ಸಮಾನವಲ್ಲದ ಶಕ್ತಿ ಉಳ್ಳವರು
- ಅಸಹನೀಯ – ಸಹಿಸಲು ಸಾಧ್ಯವಿಲ್ಲದ, ತಡೆಯಲಾಗದ
- ಅಸ್ತಿತ್ವ – ಇರುವಿಕೆ
- ಅಹಿತರು – ಹಿತವಲ್ಲದವರು, ವೈರಿಗಳು
- ಅಳಿ – ಸಾಯು, ನಾಶಹೊಂದು
- ಅಳಿಮನ – ದೃಢವಲ್ಲದ ಮನಸ್ಸು, ಅಸ್ಥಿರವಾದ ಮನಸ್ಸು
- ಆಂದೋಲನ – ಚಳುವಳಿ, ಕ್ರಾಂತಿ
- ಆಕರ – ಮೂಲ ಆಧಾರ
- ಆಕಾಶವಾಣಿ – ಆಕಾಶದಲ್ಲಿ ಕೇಳುವ ಧ್ವನಿ
- ಆಗಸ – ಆಕಾಶ, ಗಗನ
- ಆಚ್ಛಾದನ – ಬಟ್ಟೆ, ವಸ್ತ್ರ
- ಆಜುಬಾಜು – ಅಕ್ಕಪಕ್ಕ, ನೆರೆಹೊರೆ
- ಆಣ್ಮ – ಒಡೆಯ, ರಾಜ.
- ಆದೇಶ – ಆಜ್ಞೆ, ಅಪ್ಪಣೆ
- ಆದ್ರ್ರತೆ – ನೀರಿನ ಅಂಶ, ತೇವಾಂಶ
- ಆಪೆ – ಸಮರ್ಥನಾಗುವೆ
- ಆಭರಣ – ಒಡವೆ
- ಆಯೋಜಿಸು – ಏರ್ಪಾಡುಮಾಡು, ವ್ಯವಸ್ಥೆಗೊಳಿಸು
- ಆಲಿಸು – ಕೇಳು
- ಆಲೆ – ಕಬ್ಬಿನ ರಸ ತೆಗೆಯುವ ಯಂತ್ರ, ಗಾಣ
- ಆಶ್ಚರ್ಯ – ವಿಸ್ಮಯ, ಬೆರಗು
- ಆಶ್ರಯ – ಆಸರೆ, ಸಹಾಯ, ರಕ್ಷಣೆ
- ಆಹವ – ಯುದ್ಧ, ಅನುವರ, ಕಾಳಗ, ಸಮರ
- ಇಂಗಿತ – ಆಶಯ
- ಇಂದುಧರ – ಚಂದ್ರನನ್ನು ಧರಿಸಿರುವವ, ಶಿವ
- ಇಕ್ಕು – ಇಡು, ಬಡಿಸು
- ಇಷ್ಟ – ಇಚ್ಛೆ, ಮೆಚ್ಚುಗೆ
- ಇಳೆ – ಭೂಮಿ, ಧರೆ
- ಉಚ್ಛಿಷ್ಠ – ಎಂಜಲು
- ಉದಯ – ಹುಟ್ಟುಮೂಡು
- ಉದ್ಗರಿಸು – ಹೇಳು, ಹೊರಗೆಡಹು
- ಉಪಕರಿಸು – ಉಪಕಾರ ಮಾಡು, ನೆರವು ನೀಡು
- ಉಭಯ – ಎರಡು, ಜೋಡಿ
- ಉರಗ – ಹಾವು
- ಉಳಿಸು – ರಕ್ಷಿಸು, ಕಾಪಾಡು
- ಊಡು – ಉಣಿಸು, ತಿನ್ನಿಸು
- ಎಕ್ಕಡ – ಪಾದುಕೆ, ಪಾದರಕ್ಷೆ
- ಎಡವಟ್ಟು – ರೂಢಿಗೆ
- ಎನಿತು – ಎಷ್ಟು
- ಎಸುಗೆ – ಬಾಣ ಪ್ರಯೋಗ
- ಏಡಿಸಲು – ಛೇಡಿಸು, ಚೇಷ್ಟೆಮಾಡು
- ಒಕ್ಕೊರಲು – ಒಗ್ಗಟ್ಟು, ಒಂದೇ ಧ್ವನಿಯಾಗು
- ಒಡನೆ – ತಕ್ಷಣ
- ಒಡಲು – ಶರೀರ, ಹೊಟ್ಟೆ
- ಒಡೆಯ-ರಾಜ, ದೊರೆ
- ಒಡ್ಡೋಲಗ – ರಾಜಸಭೆ, ದರ್ಬಾರು
- ಒರಸಿ – ನಾಶಮಾಡಿ
- ಒಸರು – ಜಿನುಗು
- ಓಟಕೀಳು – ಓಡಿಹೋಗು
- ಓಲಗ – ರಾಜಸಭೆ
- ಓಲೈಸು – ಮೆಚ್ಚಿಸು
- ಔತಣ – ವಿಶೇಷ ಭೋಜನ
- ಕಂಗಾಲಾಗು – ಕಂಗೆಡು, ತಬ್ಬಿಬ್ಬಾಗು
- ಕಂಚು – ಒಂದು ಲೋಹ
- ಕಂಪು – ಸುಗಂಧ, ಪರಿಮಳ
- ಕಂಬಳಿಗೊಪ್ಪೆ – ಮಳೆಯಿಂದ ರಕ್ಷಿಸಿಕೊಳ್ಳಲು ಕಂಬಳಿಯಿಂದ ಮಾಡಿದ ಮುಸುಕು
- ಕಡೆ – ನಿವಾರಿಸು
- ಕಣ – ಅತ್ಯಂತ ಸೂಕ್ಷ್ಮವಾದ ಅಂಶ
- ಕಣ್ಣು ಕಪ್ಪಡಿ – ಬಾವಲಿ
- ಕದ – ಬಾಗಿಲು
- ಕನಲು – ಕೋಪಗೊಳ್ಳು, ಸಿಟ್ಟಾಗು
- ಕನವರಿಕೆ – ನಿದ್ದೆಯಲ್ಲಿ ಮಾತಾಡಿಕೊಳ್ಳುವಿಕೆ, ಒಂದೇ
- ಕಮರು – ಕಂದು
- ಕರ – ಕೈ
- ಕರಿ – ಆನೆ
- ಕರಿದು – ಕಪ್ಪಾದ ಬಣ್ಣ
- ಕರುಣೆ – ಕನಿಕರ, ದಯೆ
- ಕರುನಾಳು – ಕನಿಕರವುಳ್ಳವನು
- ಕರ್ತವ್ಯ – ಕೆಲಸ, ಜವಾಬ್ದಾರಿ
- ಕಲಿ – ವೀರ, ಶೂರ
- ಕಾದಲ – ಇನಿಯ, ಪ್ರೀತಿಸುವಾತ
- ಕಾರಿರುಳು – ದಟ್ಟವಾದ ಕತ್ತಲೆ
- ಕಾರ್ಯಪ್ರವರ್ತ – ಕೆಲಸ ಮಾಡಲು ಮೊದಲಾಗು
- ಕಾಲ್ತೆಗೆ – ಓಡಿಹೋಗು
- ಕಾಳಗ – ಯುದ್ಧ, ಹೋರಾಟ
- ಕಿಚ್ಚು – ಬೆಂಕಿ
- ಕಿಸೆ – ಜೇಬು
- ಕುಣಿ – ಕುಳಿ, ಹೊಂಡ, ನರ್ತಿಸು
- ಕುತರ್ಕ – ನ್ಯಾಯವಿಲ್ಲದ ಮಾತು
- ಕುತೂಹಲ – ಅಚ್ಚರಿ, ವಿಸ್ಮಯ
- ಕುನ್ನಿ – ನಾಯಿಮರಿ
- ಕುಪ್ಪಳಿಸು – ಹಾರು, ಜಿಗಿಯು
- ಕುಮಂತ್ರ – ಮೋಸದ ಆಲೋಚನೆ
- ಕುಸುಮಮಾಲೆ – ಹೂವಿನಮಾಲೆ
- ಕೂಸು – ಮಗು
- ಕೃತಾಂತ – ಯಮ
- ಕೃಪೆ – ದಯೆ, ಕರುಣೆ
- ಕೆಂಗಿಡಿ – ಉರಿಬೆಂಕಿ, ಕೆಂಪಾದ ಬೆಂಕಿ
- ಕೆಚ್ಚೆದೆ – ಗಟ್ಟಿಯಾದಎದೆ, ಎದೆಗಾರಿಕೆ
- ಕೊಂಚ – ಸ್ವಲ್ಪ
- ಕೊಂಡ್ಹೋಗು – ತೆಗೆದುಕೊಂಡುಹೋಗು
- ಕೊಡನ ಮಗ – ದ್ರೋಣ
- ಕೊಬ್ಬು – ರಸಭರಿತ
- ಕೊಳ – ಸರೋವರ
- ಕೊಳೆ – ಕಲ್ಮಷ, ಹೊಲಸು
- ಕೊಳೆಗೊಂಡು – ಮಾಲಿನ್ಯಗೊಂಡು, ತೃಪ್ತಿಗೊಂಡು
- ಕೊಳೆ – ಹೊಲಸು
- ಕೋಮೋಜೋಮು – ವರ್ಣತಂತು
- ಕೋರು – ಕೇಳಿಕೊಳ್ಳು, ಬೇಡು
- ಕೋಶ – ಭಂಡಾರ
- ಕ್ರೀಡಾಗಾರ – ಕ್ರೀಡಾಂಗಣ
- ಕ್ಷಾಮ – ಬರಗಾಲ
- ಕ್ಷೀರ – ಹಾಲು
- ಖಂಡಿಗೆಳೆ – ನಾಶಪಡಿಸು
- ಖಜಾನೆ – ಬೊಕ್ಕಸ
- ಖನಿ – ಗಣಿ, ಆಕರ
- ಗಜ – ಆನೆ
- ಗತಿ – ಸ್ಥಿತಿ, ದಾರಿ
- ಗದ್ಗದ ಕಂಠ – ನಿಂತು ನಿಂತು ಬರುವ ಅಸ್ಪಷ್ಟವಾದ ಮಾತು, ಬಿಗಿದ ಕಂಠ
- ಗಿಣಿ – ಗಿಳಿ
- ಗುಟುರು – ಹೂಂಕರಿಸು, ಜೋರಾಗಿ ಧ್ವನಿ ಮಾಡು
- ಗುಡಿ – ಬಾವುಟ, ಕೇತನ
- ಗುನುಗು – ಸತತವಾಗಿ ಧ್ವನಿಮಾಡು
- ಗೂಢಚಾರ – ಗುಪ್ತಚರ
- ಗೊರಬು – ಕಂಬಳಿ
- ಗೋಣು – ಕುತ್ತಿಗೆ
- ಘನ – ದೊಡ್ಡ
- ಚಂದ – ಚೆನ್ನಾಗಿ, ಚೆನ್ನ
- ಚರಿತ್ರೆ – ಇತಿಹಾಸ
- ಚಾತುರಂಗ – ಸೈನ್ಯದ ನಾಲ್ಕು ಅಂಗಗಳು (ಆನೆ, ಕುದುರೆ, ರಥ, ಕಾಲಾಳಿನ ಬಲ)
- ಚಾವಡಿ – ಜಗಲಿ
- ಚಾಳಿ – ನಡವಳಿಕೆ, ವರ್ತನೆ
- ಚಿಗರೆ – ಜಿಂಕೆ
- ಕರಣ – ಒಡಲು, ಶರೀರ
- ಕಳೆ – ಕಾಂತಿ, ತೇಜಸ್ಸು, ಪ್ರಕಾಶ, ಚಿಮುಕಿ
- ಎರೆ – ಹೊಯ್ಯು
- ಚಿಮ್ಮು – ಹಾರು, ಜಿಗಿ, ನೆಗೆ
- ಚುಂಬನ – ಮುತ್ತು
- ಚೆಲ್ಲಾಪಿಲ್ಲಿ – ಅಸ್ತವ್ಯಸ್ತ, ಚೆದುರು
- ಚೊಕ್ಕ – ಚೆನ್ನಾಗಿ, ಅಚ್ಚುಕಟ್ಟಾಗಿ
- ಚೊಕ್ಕಬಂಗಾರ – ಅಪ್ಪಟ ಬಂಗಾರ, ಅಪರಂಜಿ
- ಜನಜನಿತ – ಪ್ರಸಿದ್ಧವಾದ
- ಜನಪ – ರಾಜ (ಇಲ್ಲಿ ಧರ್ಮರಾಯ)
- ಜನಿತ – ಹುಟ್ಟು, ಜನ್ಮತಾಳು
- ಜರೆ – ನಿಂದಿಸು, ಬಯ್ಯು
- ಜೀಯ – ಸ್ವಾಮಿ, ಒಡೆಯ
- ಜೈಲು – ಸೆರೆಮನೆ, ಬಂಧೀಖಾನೆ
- ಜೋಪಾನ – ರಕ್ಷಣೆ, ಜತನ
- ಟಾರ – ಡಾಂಬರು
- ತಡ – ನಿಧಾನ, ವಿಳಂಬ
- ತಡವೆ – ಬಾರಿ, ಸಲ
- ತಣಿಸು – ತಂಪಾಗಿಸು, ತೃಪ್ತಿಗೊಳಿಸು
- ತನುಜ – ಮಗ
- ತಮಾಷೆ – ಹಾಸ್ಯ
- ತರಾವರಿ – ವಿಧವಿಧವಾದ
- ತವರು – ತಾಯಿಯ ಮನೆ
- ತಳಹದಿ – ಬುನಾದಿ
- ತಾಣ – ಜಾಗ, ಸ್ಥಳ
- ತಾಪ – ಬಿಸಿ, ಶಾಖ
- ತಾರಮ್ಮಯ್ಯ – ಅಂಗೈ ಆಡಿಸು
- ತಿರಿ – ಭಿಕ್ಷೆಬೇಡು, ತಿರುಗಾಡು
- ತಿರುಕ – ಭಿಕ್ಷುಕ
- ತೀಡು – ಬೀಸು, ಹೊರಹೊಮ್ಮು
- ತೀರಿಕೊಳ್ಳು – ಗತಿಸು, ಮರಣ ಹೊಂದು
- ತೀವ್ರ – ಹೆಚ್ಚು
- ತುಕಡಿ – ಸೈನ್ಯ
- ತುಣುಕು – ಚೂರು, ತುಂಡು
- ತೂರು – ಎಸೆ
- ತೆಗಳು – ಹೀಯಾಳಿಸು, ನಿಂದಿಸು
- ತೆನೆ – ಕಾಳು ತುಂಬಿದ ಪೈರಿನ ತುದಿ.
- ತೆರವು – ಖಾಲಿ
- ತೊಡರಿಸು – ಧರಿಸು, ಹಾಕು
- ತೊಯ್ – ನೆನೆ, ಒದ್ದೆಯಾಗು
- ತೊರೆ – ನದಿ, ಹೊಳೆ
- ತೊಲಗು – ಬಿಟ್ಟುಹೋಗು, ಹೊರಟುಹೋಗು
- ತೊಳೆ – ನೀರಿನಿಂದ ಸ್ವಚ್ಛಗೊಳಿಸು
- ತೋರು – ಕಾಣುವಂತೆ ಮಾಡು
- ದಂಡು – ಸೈನ್ಯ
- ದಕ್ಕು – ದೊರಕು
- ದಾಕ್ಷಿಣ್ಯ – ಸಂಕೋಚ, ಹಿಂಜರಿಕೆ
- ದಾತ – ಒಡೆಯ, ಸ್ವಾಮಿ
- ದಿಟ್ಟತನ – ಧೈರ್ಯ
- ದಿಟ್ಟಹೆಜ್ಜೆ – ಧೈರ್ಯದ ಹೆಜ್ಜೆ, ಸಾಹಸದ ನಡೆ
- ದುಗುಡ – ಚಿಂತೆ, ಆತಂಕ
- ದುರ್ಮತಿ – ಕೆಟ್ಟ ಬುದ್ಧಿ, ದುಷ್ಟ ವ್ಯಕ್ತಿ
- ದುಸ್ತರ – ಕಠಿಣ, ಕಷ್ಟಸಾಧ್ಯ
- ದೌರ್ಬಲ್ಯ – ಬಲಹೀನತೆ, ಚಾಪಲ್ಯ
- ಧಕ್ಕೆ – ತೊಂದರೆ
- ಧನ – ಹಣ, ಸಂಪತ್ತು
- ಧನ್ಯತೆ – ಸಂತೃಪ್ತಿ
- ಧರೆ – ನೆಲ, ಭೂಮಿ
- ಧರ್ಮಶಾಲೆ – ಅನ್ನಛತ್ರ.
- ಧ್ಯೇಯೋದ್ದೇಶ – ಗುರಿ
- ಧ್ರುವತಾರೆ – ಧ್ರುವನಕ್ಷತ್ರ (ಸ್ಥಿರವಾದ ಲಕ್ಷ್ಯ)
- ನಂಜು – ವಿಷ
- ನಟ್ಟ ನಡುವೆ – ಮಧ್ಯೆ
- ನಭ – ಆಕಾಶ, ಗಗನ, ಅಂಬರ
- ನಲ್ಲ – ಪ್ರಿಯತಮ
- ನಾಟಿ – ಪೈರಿನ ಸಸಿಗಳನ್ನು ನೆಡುವುದು
- ನಾಡು – ಜನವಸತಿಯುಳ್ಳ ಪ್ರದೇಶ, ರಾಜ್ಯ
- ನಿಂದಕರು – ನಿಂದಿಸುವವ, ಬಯ್ಯುವವ
- ನಿಘಂಟು – ಶಬ್ದಕೋಶ, ಶಬ್ದಾರ್ಥ ಸಂಗ್ರಹ
- ನಿಜಾಂಶ – ಸತ್ಯ, ದಿಟ
- ನಿಟ್ಟುಸಿರು – ದೀರ್ಘವಾಗಿ ಬಿಡುವ ಉಸಿರು, ನಿಡಿದಾದ ಶ್ವಾಸ
- ನಿಮ್ಮಡಿ ಆಲಿ – ನಿಮ್ಮ ಕಣ್ಣುಗಳಿಗೆ
- ನಿರಾಳ – ಶಾಂತಿ, ನೆಮ್ಮದಿ
- ನಿರ್ಭೀತ – ಭಯವಿಲ್ಲದ
- ನಿರ್ಮುಕ್ತ – ಸರ್ವಸ್ವತಂತ್ರ
- ನಿರ್ವಹಿಸು – ನಭಾಯಿಸು, ಪೂರೈಸು
- ನೀಟಾಗಿ – ಅಂದವಾಗಿ, ಸೊಗಸಾಗಿ
- ನೀರಾವು – ನೀರಿನಲ್ಲಿ ಬದುಕುವ ಹಾವು
- ನೃಪ – ರಾಜ, ದೊರೆ
- ನೆಡು – ನಾಟು
- ನೆರವು – ಸಹಾಯ
- ನೆಲೆಕಲ್ಪಿಸು – ವೇದಿಕೆ ಒದಗಿಸು, ಅವಕಾಶ ಮಾಡಿಕೊಡು
- ನೇಮ – ಅಪ್ಪಣೆ
- ನೇಯುವುದು – ತಯಾರಿಸು, ಹೆಣೆಯುವುದು
- ಪಂಜರ – ಪಕ್ಷಿಗಳ ಬೋನು
- ಪಕ್ಕಾಗು – ಒಳಗಾಗು
- ಪಕ್ಕೆಲುಬು – ಇಬ್ಬದಿಯ ಎಲುಬುಗಳು
- ಪಕ್ವತನ – ಮಾಗಿದ
- ಪಗಡಿ – ಕಾಣಿಕೆ, ಗೌರವ
- ಪಗಡೆ – ಒಂದು ರೀತಿಯ ಆಟ
- ಪಟ್ಟ – ಸಿಂಹಾಸನ
- ಪಟ್ಟಿ – ಯಾದಿ, ವಿವರಣೆಯ ಬರಹ
- ಪಠಿಸು – ಓಡಿಹೋಗು
- ಪಡಪೋಶಿ – ಕೆಲಸಕ್ಕೆ ಬಾರದ
- ಪಣ – ಒತ್ತೆಇಡು
- ಪತ್ತೆ – ಗುರುತು, ಸುಳಿವು, ವಿಳಾಸ
- ಪಥ – ಮಾರ್ಗ, ದಾರಿ
- ಪಥ್ಯ – ಆಹಾರದ ಕಟ್ಟುಪಾಡು, ಯೋಗ್ಯವಾದುದು
- ಪರಕೀಯ – ಬೇರೆಯ
- ಪರಕೀಯ – ವಿದೇಶಿಯ, ಅನ್ಯ
- ಪರಾಂಬರಿಸು – ಗಮನಿಸು, ಪರಿಶೀಲಿಸು
- ಪರಿಸಮಾಪ್ತಿ – ಮುಕ್ತಾಯ, ಕೊನೆ
- ಪರ್ಣ – ಎಲೆ
- ಪಾಂಡಿತ್ಯ – ವಿದ್ವತ್ತು
- ಪಾಶ – ಹಗ್ಗ
- ಪಾಶ್ಚಾತ್ಯ – ಪಶ್ಚಿಮದೇಶ
- ಪಿತೃ – ತಂದೆ
- ಪಿಳ್ಳಂಗೋವಿ – ಕೊಳಲು
- ಪಿಳ್ಳೆ – ಮಗು
- ಪೀಡೆ – ತೊಂದರೆ
- ಪೀತಾಂಬರ – ರೇಷ್ಮೆಬಟ್ಟೆ
- ಪುರ – ಪಟ್ಟಣ, ನಗರ
- ಪೊಡವಿ – ರಾಜ್ಯ
- ಪೋರ – ಹುಡುಗ
- ಪೋಷಕ – ಸಲಹುವಾತ, ಪಾಲಕ
- ಪ್ರಗತಿ – ಮುನ್ನಡೆ, ಅಭಿವೃದ್ಧಿ
- ಪ್ರಭೆ – ಕಾಂತಿ, ಪ್ರಕಾಶ
- ಪ್ರಮಥರು – ಶಿವನ ಭಕ್ತರು
- ಪ್ರವೇಶದ್ವಾರ – ಒಳಹೋಗುವ ಮುಖ್ಯ ಬಾಗಿಲು
- ಪ್ರಸ್ತುತಪಡಿಸು – ಪ್ರಕಟಿಸು, ಸಾದರಪಡಿಸು
- ಪ್ರಾಣಿಗಿಂಡಿ – ಕಾಡಿನಲ್ಲಿರುವ ಪ್ರಾಣಿಗಳು ನೀರನ್ನು ಕುಡಿಯುವುದಕ್ಕಾಗಿ ಹೋಗಲು ಮಾಡಿಕೊಂಡ ಕಿಂಡಿ
- ಪ್ರೇರಣೆ – ಪ್ರಚೋದನೆ, ಮುಂದಕ್ಕೆ ಹೋಗುವಂತೆ ಉತ್ತೇಜಿಸುವಿಕೆ
- ಫಟಿಂಗ – ತುಂಟ, ಭಂಡ
- ಬಟ್ಟೆ – ಮಾರ್ಗ, ದಾರಿ
- ಬಡಪಾಯಿ – ಅಶಕ್ತ, ದುರ್ಬಲ, (ದರಿದ್ರ)
- ಬಡಿ – ಬಾರಿಸು, ಪೆಟ್ಟು ಹಾಕು
- ಬಡಿಗೆ – ದೊಣ್ಣೆ, ಕೋಲು
- ಬಯಲು – ಅಂಗಳ, ಮೈದಾನ
- ಬರಡು – ಸತ್ವಹೀನ
- ಬರ – ಬರಗಾಲ, ಕ್ಷಾಮ
- ಕೆಚ್ಚು – ಕೂಡುವಿಕೆ, ಬೆಸುಗೆ, ಸೇರಿಸು
- ಅಚ್ಚಳಿಯದೆ -ಅಂದಗೆಡದಂತೆ, ರೂಪುಗೆಡದಂತೆ
- ಬಲಿದಾನ – ಪ್ರಾಣತ್ಯಾಗ
- ಬಾದಿ – ಕೈನೂಲಿನಿಂದ ನೆಯ್ದ ಬಟ್ಟೆ
- ಬಾನಾಡಿ – ಪಕ್ಷಿ
- ಬಾಳೆ – ಬಾಳೆಯಗಿಡ
- ಬಿಡೆ – ಬಿಡುವುದಿಲ್ಲ
- ಬಿರು – ರಭಸ, ಬಿರುಸು
- ಬಿಸಿಲು ಮಚ್ಚು – ಬಿಸಿಲು ಮಾಳಿಗೆ
- ಬೀಗು – ಉಬ್ಬು, ಹೆಮ್ಮೆತಾಳು
- ಬೀರು – ಹರಡು
- ಬೆದರು – ಹೆದರು, ಭಯಪಡು
- ಬೆಮರು – ಬೆವರು
- ಬೆರಗು – ಆಶ್ಚರ್ಯ, ವಿಸ್ಮಯ, ಸೋಜಿಗ
- ಬೆಸಸು – ಅಪ್ಪಣೆಮಾಡು
- ಬೆಸುಗೆ – ಹೊಂದಿಕೆ, ಜೋಡಣೆ
- ಬೆಸೆ – ಕೂಡಿಸು, ಸೇರಿಸು
- ಬೊಗಳೆ – ಕೆಲಸಕ್ಕೆ ಬಾರದ ಮಾತು, ಪೊಳ್ಳು ಹರಟೆ
- ಬೊಡ್ಡೆ – ಮರದ ಕಾಂಡದ ಭಾಗ
- ಬೊಪ್ಪ – ತಂದೆ, (ಇಲ್ಲಿ ದೊಡ್ಡಪ್ಪ)
- ಬೊಬ್ಬಿಡು – ಕೂಗು, ಅರಚು, ಗಟ್ಟಿಯಾಗಿ ಹೇಳು
- ಭಂಗ – ಸೋಲು, ವೈಫಲ್ಯ
- ಭಂಗಿ – ಹಾವಭಾವ, ವಿನ್ಯಾಸ
- ಭಂಡಾರ – ಬೊಕ್ಕಸ, ಖಜಾನೆ
- ಭಟ್ಟಿನಿಗಳು – ಹೆಂಡತಿಯರು