ಸಮನಾರ್ಥಕ ಪದಗಳು ಭಾಗ-1 ರತ್ನಕೋಶ+ Govt Text book ಪದಗಳ PDF

ಸಮನಾರ್ಥಕ ಪದಗಳು ಭಾಗ-1

  • ಅಬ್ಜೋದರ – ವಿಷ್ಣು, ಕೌಸ್ತುಭಧರ FDA- 2017
  • ಅಬ್ಧಿಪ: ಅಬ್ಧಿ – ಸಮುದ್ರ, ಕೊಳ ಪ – ಒಡೆಯ, ಅಬ್ಧಿಪ – ಸಮುದ್ರದ ಒಡೆಯ – ವರುಣ
  • ಅಬ್ಧಿಪ – ವರುಣ
  • ಪೌರಂದರ – ಇಂದ್ರ
  • ಭಾರ್ಗವ – ಪರಶುರಾಮ
  • ಭೂಮಿಜಾತೆ – ಸೀತೆ, ಧರಣಿಸುತೆ
  • ರವಿಸುತ – ಕರ್ಣ
  • ಮುರಾರಿ – ಕೃಷ್ಣ, ಶೌರಿ
  • ನೀರದ – ಮೋಡ / ಅಬ್ದ
  • ಆದಿತ್ಯ – ಸರ‍್ಯ, ಸೂರ್ಯ, ಇನ, ನೇಸರ್, ರವಿ, ಮಿಹಿರ, ರಾಜೀವಸಖ, ದಿನಕರ, ದಿನಪ, ದಿವಸ್ಪತಿ, ವಿವಾಕರ, ಪುಸ, ದ್ಯುಮಣಿ, ರಾಜು, ಅಗ್ನಿ, ಭಾಸ್ಕರ, ಬೆಳಕು, ಸ್ವಾಹಿ, ಪ್ರಕಾರ, ಒಡೆಯ,
  • ಭೂಮಿ – ಮೇದಿನಿ, ಉರ್ವಿ, ಇಳೆ, ಅವನಿ, ತಿರೆ, ಧರಣಿ, ಧರಿತ್ರೆ, ಧರೆ, ಧಾತ್ರಿ, ಧಾರಿ
  • ಚಂದ್ರ _ ಪೆರೆ, ಶಶಿ, ಸುಧಾಕರ, ರಜನೀಶ, ರಜನೀಕರ, ತಂಗದಿರ, ಮೃಗಾಂಕ, ಶೀತಾಂಶು, ಇಂದು, ಉಡುಪ, ತಿಂಗಳು, ಹಿಮಾಂಶ, ಸೋಮ, ತಾರಾಪತಿ
  • ತಿಂಗಳೂರು – ಚಂದ್ರಲೋಕ
  • ಅವನೀತಳ – ಭೂಮಂಡಲ
  • ಎಲರ್ – ಗಾಳಿ
  • ಕುದುರೆ – ತುರಂಗ, ತುರಗ, ವಾಜಿ, ಹಯ, ಅಶ್ವ, ಹರಿ, ಸೈಂಧವ, ತುಷಾರ, ವಾರುವ
  • ಹಾವು – ಪನ್ನಗ, ಸರ್ಪ, ವಿಷಧರ, ಅಹಿ, ವ್ಯಾಲ, ನಾಗ, ಉರಗ, ಭುಜಂಗ, ಸರಿಸೃಪ
  • ದುಂಬಿ – ಮಧುಕರ, ಸಾರಂಗ, ಧನು, ಗುಂಗೀಹುಳ, ಭ್ರಮರ FDA- 2017
  • ಸುರಭಿ – ಕಾಮಧೇನು
  • ಕಾಡು ಹಳು, ಅಡವಿ, ಅರಣ್ಯ, ಕಾನನ, ಕಾಂತಾರ, ಬನ, ವಿಪಿನ FDA- 2019

ಸಮನಾರ್ಥಕ ಪದಗಳು

  • ಅಂಜಿ – ಹೆದರಿ
  • ಅಂಜು – ಹೆದರು, ಭಯಪಡು.
  • ಅಂತಕಾತ್ಮಜ – ಅಂತಕ+ಆತ್ಮಜ – ಯಮನ ಮಗ (ಯುಧಿಷ್ಠಿರ)
  • ಅಗಡು – ಶೌರ್ಯ
  • ಅಗಸಿ – ಹೆಬ್ಬಾಗಿಲು
  • ಅಡಸು – ಉಂಟಾಗು
  • ಅಡಿ – ಪಾದ
  • ಅಣಿ – ಸಿದ್ಧತೆ
  • ಅತಿಕುಟಿಲಮನ – ಅತಿಯಾದ ಮೋಸದ ಮನಸ್ಸು
  • ಅನಾಕುಳಂ – ನಿರಾಯಾಸವಾಗಿ
  • ಅನೃತ – ಅಸತ್ಯ
  • ಅನ್ವಯ – ವಂಶ
  • ಅಪರಗಿರಿ – ಅಸ್ತಮಾನದ ಬೆಟ್ಟ, ಪಶ್ಚಿಮದ ಬೆಟ್ಟ
  • ಅಪ್ರತಿಮ – ಹೋಲಿಕೆ ಇಲ್ಲದ, ಅಮೂರ್ತ
  • ಅಬ್ಜೋದರ – ವಿಷ್ಣು
  • ಅಬ್ಧಿಪ: ಅಬ್ಧಿ – ಸಮುದ್ರ, ಕೊಳ ಪ – ಒಡೆಯ, ಅಬ್ಧಿಪ – ಸಮುದ್ರದ ಒಡೆಯ – ವರುಣ
  • ಅಬ್ಬೆ – ತಾಯಿ
  • ಅಯ್ಯ – ತಂದೆ
  • ಅರಿ – ತಿಳಿ
  • ಅರುಹು – ಹೇಳು
  • ಅರ್ಘ್ಯ – ಪೂಜ್ಯರಿಗೆ ಕೈ ತೊಳೆಯಲು ನೀಡುವ ನೀರು
  • ಅರ್ತಿ – ಪ್ರೀತಿ
  • ಅರ್ಥಿ – ಬೇಡುವವನು
  • ಅವನಿ – ಭೂಮಿ
  • ಅವನೀತಳ – ಭೂಮಂಡಲ
  • ಅವಸರ – ಅಗತ್ಯದ
  • ಅಷ್ಟವಿಧ – ಎಂಟುಬಗೆಯ
  • ಅಸು – ಪ್ರಾಣ;
  • ಅಸುರ – ರಾಕ್ಷಸ
  • ಅಸ್ತಿಭಾರ – ಬುನಾದಿ
  • ಅಹಿತ – ಶತ್ರು
  • ಅಳಲು/ಅಳಲ್ – ದುಃಖ
  • ಅಳವು – ಪರಾಕ್ರಮ
  • ಅಳಿ – (ಕ್ರಿ) ನಾಶ (ನಾ) ದುಂಬಿ
  • ಆಂಬರಂ – ನನ್ನವರೆಗೂ
  • ಆಚ್ಛಾದಿತ – ಆವರಿಸಿದ
  • ಆದರ – ಪ್ರೀತಿ
  • ಆನನ – ಮುಖ
  • ಆನು – ತಾಳು
  • ಆರ್ತನಾದ – ಕಷ್ಟಕ್ಕೆ ಸಿಕ್ಕಿದವರ ಕೂಗು
  • ಆರ್ಪರ್ – ಸಮರ್ಥರು
  • ಆವಾಹಿಸು – ಮೈಮೇಲೆ ಬರುವಂತೆ ಮಾಡಿಕೊ
  • ಆಶ್ವೀಜ – ಚೈತ್ರದಿಂದ ಏಳನೆಯ ಮಾಸ (ಆಶ್ವಯುಜ)
  • ಇಂಬು – ಅವಕಾಶ
  • ಇಂಬುಕೆಯ್ವೆ – ಒಪ್ಪಿಕೊಳ್ಳಲು, ಸಮ್ಮತಿ ಸೂಚಿಸಲು
  • ಇದಿರ್ಚಿ – ಹೋರಾಡಿ
  • ಇರ್ಬರು – ಇಬ್ಬರು
  • ಉಪವನ – ಉದ್ಯಾನವನ
  • ಉಯ್ – ಒಯ್ಯು
  • ಉಯ್ದು – ಒಯ್ದು
  • ಉರವಣಿಸು – ಹೆಚ್ಚಾಗು
  • ಉರಿಯಟ್ಟಲ್ – ಬೆಂಕಿ ಉರಿಯಲು
  • ಉಲ್ಕೆ – ಆಕಾಶದಿಂದ ಭೂಮಿಗೆ ಬೀಳುವ ತೇಜಃಪುಂಜವಾದ ಆಕಾಶಕಾಯ
  • ಉಸಿರ್ – ಹೇಳು
  • ಊಣೆಯ – ಕೊರತೆ
  • ಋಣ – ಹಂಗು
  • ಎಂಥರೋ – ಎಂತಹವರೋ
  • ಎಡೆ – ಸ್ಥಳ
  • ಎನಿಸಲೊಲ್ಲದ – ಇಷ್ಟಪಡದ
  • ಎರೆ – ಬೇಡು, ಪ್ರಾರ್ಥಿಸು.
  • ಎರೆದಂ – ಬೇಡುವವನು
  • ಎವೆ ಕಣ್ಣರೆಪ್ಪೆ
  • ಏಳಿಸಿದ – ತಿರಸ್ಕರಿಸಿದ
  • ಐದಿ – ಹೋಗಿ
  • ಒಕ್ಕಿ – ತೆನೆಯಿಂದ ಕಸಕಡ್ಡಿ ಬೇರ್ಪಡಿಸಿ
  • ಒಡಂಬಡಿಸಿ – ಒಪ್ಪಿಸಿ
  • ಒಡಂಬಡು – ಒಪ್ಪು
  • ಒಡವೆ – ಐಶ್ವರ್ಯ, ಆಸ್ತಿ
  • ಒತ್ತಂಬದಿಂದ – ಒತ್ತಾಯದಿಂದ
  • ಕಂದಿದ – ಮಸುಕಾದ
  • ಕಂಪು – ಸುವಾಸನೆ
  • ಕಜ್ಜಂ – ಕಾರ್ಯ, ಕೆಲಸ
  • ಕಟೆ – ಕೆತ್ತು
  • ಕಟ್ಟೇಕಾಂತ – ಯಾರೂ ಇಲ್ಲದಂತಹ
  • ಕಡು – ಅತಿ
  • ಕಡುಸಿಗ್ಗು – ತೀವ್ರ ನಾಚಿಕೆ
  • ಕದಳಿ-ಬಾಳೆ
  • ಕನಕಪಾತ್ರ – ಚಿನ್ನದ ಪಾತ್ರೆ
  • ಕಬ್ಬಿಗ – ಕವಿ
  • ಕರ – ಕೈ
  • ಕರಂ ಸಾದು – ಬಹು ಸಾಧುವಾದವನು
  • ಕರಮ್ – ತುಂಬಾ
  • ಕರುಕ – ಉರಿದ ಬತ್ತಿಯ ಕಪ್ಪು ಭಾಗ
  • ಕಲುಷಿತ – ಮಲಿನ
  • ಕಸರತ್ತು – ಚಮತ್ಕಾರ
  • ಕಸವರ – ಚಿನ್ನ
  • ಕಳವನಿಡು – ಕಳ್ಳತನ ಆರೋಪಿಸು
  • ಕಳೆದುಕೊಂಡುದರ್ಕೆ – ಕದ್ದುದಕ್ಕೆ
  • ಕಳ್ತಲೆ – ಕತ್ತಲೆ
  • ಕಾದು – ಹೋರಾಡು
  • ಕಾಪು – ರಕ್ಷಣೆ
  • ಕಾಯಕಾಂತಿ – ವಿಷ್ಟುವಿನ ದೇಹದ ಕಾಂತಿ
  • ಕಾರಕೂನ – ಗುಮಾಸ್ತ
  • ಕಿಂಕರ – ಸೇವಕ
  • ಕಿಡಿಸು – ಕೆಡಿಸು
  • ಕಿಡು – ನಾಶವಾಗು
  • ಕಿವಿಗಡಚಿಕ್ಕು – ಕಿವಿಗೆ ಕರ್ಕಶವಾಗು
  • ಕಿಱಿದು/ಕಿರೆದು – ಸ್ವಲ್ಪ
  • ಕುಪ್ಪೆ – ಕಸದತಿಪ್ಪೆ, ರಾಶಿ, ದಿಣ್ಣೆ
  • ಕುಮಕಿ – ಸಹಾಯ, ಒತ್ತಾಸೆ
  • ಕುಳಿ – ಹೊಂಡ, ತಗ್ಗು, ಗುಣಿ
  • ಕೂಟ – ರಸ್ತೆಗಳು ಸೇರುವ ಜಾಗ, ಸೇರಿಕೆ, ರಾಶಿ
  • ಕೂರ್ಮೆ – ಸ್ನೇಹ, ಪ್ರೀತಿ
  • ಕೂಳ್‌ – ಅನ್ನ
  • ಕೃತ್ರಿಮ – ಮೋಸ, ಕಪಟ ಸಹಜ ವಲ್ಲದ
  • ಕೆನ್ನ _ ಕಪೋಲ
  • ಕೆನ್ನ – ಕೆಂಪು
  • ಕೆರ – ಎಕ್ಕಡ, ಚಪ್ಪಲಿ
  • ಕೆಲವಾನುಂ – ಕೆಲವು
  • ಕೈಕೊಳ್ಳು – ಸಮ್ಮತಿಸು
  • ಕೈಯಾನು -ಕೈಚಾಚು
  • ಕೈವಾರ -ಹೊಗಳಿಕೆ
  • ಕೊನೆ – ಗೊನೆ
  • ಕೊಳ್ಳಿ – ಬೆಂಕಿ
  • ಕೋಕಿಲಾ (ತ್ಸ) – ಕೋಗಿಲೆ(ದ್ಭ)
  • ಕೋಟರಕುಟೀರ – ಮರದ ಪೊಟರೆ
  • ಕ್ರಮಕ್ರಮದೆ – ಮೆಲ್ಲಮೆಲ್ಲನೆ
  • ಕ್ರೌರ್ಯ – ನಿರ್ದಯತೆ, ಕರುಣೆಯಿಲ್ಲದ.
  • ಕ್ಷೋಭೆ – ತಳಮಳ
  • ಖಂಡಮಾಗೆ – ತುಂಡಾಗುವಂತೆ
  • ಖಳ – ದುಷ್ಟ
  • ಗಂಧ – ವಾಸನೆ
  • ಗಡಣ – ಸಮೂಹ
  • ಗದ್ದುಗೆ – ಪೀಠ
  • ಗಾವುದ – ದೂರವನ್ನು ಅಳೆಯುವ ಒಂದು ಪ್ರಮಾಣ
  • ಗಿರಣಿ – ಧಾನ್ಯ ಬೀಸುವ ಯಂತ್ರ, ನೂಲು ಮಾಡುವ,
  • ಗುಡಿಮನೆ – ಚಿಕ್ಕ ದೇವಸ್ಥಾನ
  • ಗೊಮ್ಮಟ ವ್ಯಕ್ತಿತ್ವ – ಉನ್ನತ ವ್ಯಕ್ತಿತ್ವ
  • ಘಾತಕ – ದ್ರೋಹಿ
  • ಘೋರ – ಆಪತ್ತು,
  • ಘ್ರಾಣೇಂದ್ರಿಯ – ಮೂಗು
  • ಚಟ್ಟರಿಂ – ಶಿಷ್ಯರಿಂದ
  • ಚಣ್ಣ – ಚಡ್ಡಿ
  • ಚರಿಗೆ – ತಂಬಿಗೆ
  • ಚರಿಸು – ಸಂಚರಿಸು
  • ಚಿತ್ತ – ಮನಸ್ಸು
  • ಚಿರ – ಶಾಶ್ವತ
  • ಚೀರ (ತ್ಸ) – ಸೀರೆ (ದ್ಭ) – ನಾರುಬಟ್ಟೆ
  • ಚೋದ್ಯ – ಅದ್ಭುತ
  • ಚೋದ್ಯಂಬಟ್ಟು – ಆಶ್ಚರ್ಯಪಟ್ಟು
  • ಜಟಾಕಲಾಪ – ಜಡೆಯ ಸಮೂಹ
  • ಜಡ – ಮಂದ, ಚಟುವಟಿಕೆಯಿಲ್ಲದ
  • ಜತ್ತ – ಜೊತೆ
  • ಜಲಕ್ಕನೆ – ವಿಶದವಾಗಿ
  • ಜಲದ – ತೀವ್ರ
  • ಟಾರಾ – ನಾಶ
  • ತಗುಳ್ಚಿದರ್ – ಸೇರಿಸಿದರು
  • ತಡವಪ್ಪುದು – ತೊದಲುವುದು
  • ತಣಿವು – ತೃಪ್ತಿ
  • ತತ್ಪ್ರಪಂಚಂ – ಈವರೆಗೆ ನಡೆದ ಘಟನೆ
  • ತತ್ಸನ್ನಿಧಾನಸ್ಥಿತ – ಆಲ್ಲಿರುವ
  • ತನೂಜ – ಮಗ
  • ತಮಾಲ – ಕತ್ತಲೆ
  • ತವಸಿ (ದ್ಭ) – ತಪಸ್ವಿ(ತ್ಸ)
  • ತಸ್ಕರ – ಕಳ್ಳ FDA- 2019
  • ತಳವೆಳಗಾಗೆ – ಗಾಬರಿಯಾಗುವಂತೆ
  • ತಿಂಗಳ – ಚಂದ್ರ ಹೊನ್ನ-ಹಳದಿ
  • ತಿಂಗಳೂರು – ಚಂದ್ರಲೋಕ
  • ತಿರೆ – ಭೂಮಿ
  • ತುರಂಗ-ಕುದುರೆ
  • ತುಸ – ಸ್ವಲ್ಪವೂ
  • ತೃಷೆ – ಬಾಯಾರಿಕೆ
  • ತೇಜ – ಕಾಂತಿ
  • ತೊರಲ್ದು – ಅಲೆದಾಡಿ
  • ದಂಡು – ಸೈನ್ಯ
  • ದನುಜ – ರಾಕ್ಷಸ
  • ದಿಗ್ಬ್ರಮೆಗೊಂಡ – ದಿಕ್ಕು ತೋಚದ
  • ದಿಙ್ಮುಮಖ – ದಿಕ್ಕುಗಳು
  • ದಿಟ್ಟಿ (ದ್ಭ) – ದೃಷ್ಟಿ (ತ್ಸ) ಧೃತಿ – ಧೈರ್ಯ
  • ದಿವ್ಯಶರಾಳಿ – ಶ್ರೇಷ್ಠ ಬಾಣಗಳ ಸಮೂಹ
  • ದುಷ್ಪುತ್ರ – ದುಷ್ಟಪುತ್ರ
  • ದೂಷಣೆ – ನಿಂದನೆ
  • ದೃಗುಜಲ – ಕಣ್ಣನೀರು
  • ದೊರೆಯಲ್ಲವು – ಸಮಾನವಲ್ಲ
  • ದ್ವಿಜವಂಶಜಂ – ಬ್ರಾಹ್ಮಣ
  • ನಡೆವಂತೆ – ನಡೆದುಕೊಳ್ಳುವ ಹಾಗೆ
  • ನರೆ – ಬಿಳಿಬಣ್ಣ
  • ನಲ್ಮೆ – ಪ್ರೀತಿ
  • ನವಧಾತ್ರಿ – ಹೊಸದಾಗಿ ಕಾಣುವ ಭೂಮಿ
  • ನಾಣಿಲಿ – ನಾಚಿಕೆಯಿಲ್ಲದವನು, ಲಜ್ಜೆಗೇಡಿ
  • ನಿರ್ವಾಹ – ತಂತ್ರ
  • ನೀರದ – ಮೋಡ / ಅಬ್ದ
  • ನೂಂಕು – ನೂಕು
  • ನೃಪ – ದೊರೆ
  • ನೆಗೆಳಲ್ವೇರ್ಕುಂ – ನಡೆದುಕೊಳ್ಳಬೇಕು
  • ನೆಚ್ಚು – ನಂಬು
  • ನೆತ್ತಿ – ಹಣೆ
  • ನೆರವಿ – ಜನಸಮೂಹ
  • ನೆರವು – ಸಹಾಯ
  • ನೇಸರ್ – ಸೂರ‍್ಯ/ಸೂರ್ಯ
  • ನೈಮಿತ್ತಿಕಂ – ಜೋಯಿಸನು
  • ನೊಳವಿಂಗೆ – ನೊಣಕ್ಕೆ
  • ಪಂಚೇಂದ್ರಿಯ – ಕಣ್ಣು, ಕಿವಿ, ಮೂಗು,
  • ಪಂಜ – ಹುಲಿಯ ಅಂಗಾಲು FDA- 2019
  • ಪಚ್ಚು – ಹಂಚು
  • ಪಚ್ಚುಗೊಟ್ಟೊಡೆ – ವಿಭಾಗಿಸಿ ಕೊಟ್ಟರೆ
  • ಪಡಿಯರ – ದ್ವಾರಪಾಲಕ, ಸೇವಕ {ಪ್ರತೀಹಾರಿ (ತ್ಸ) > ಪಡಿಯರ (ದ್ಭ)}
  • ಪಥ – ದಾರಿ
  • ಪದ – ಪಾದ
  • ಪನ್ನಗ – ಹಾವು
  • ಪರದು – ವ್ಯಾಪಾರ
  • ಪರಮ ಗಹನ – ನಿಗೂಢ
  • ಪರಿಗ್ರಹ – ಮನೆಯವರು
  • ಪರಿಯಣದ – ಊಟದ ತಟ್ಟೆಯ
  • ಪರ್ವಿದ – ಹಬ್ಬಿದ
  • ಪಸಿಯದುಂಡು – ಆಹಾರಕ್ಕೆ ಕೊರತೆಯಿಲ್ಲದೆ
  • ಪಸುರು – ಹಸುರು
  • ಪಳು – ಕೆಟ್ಟ
  • ಪಾಟಿ – ಹಲಗೆ
  • ಪಾರುತ್ತಿರೆ – ಎದುರು ನೋಡುತ್ತಿರಲು
  • ಪಾಳ್ನೆಲ – ಪಾಳು, ಬಿದ್ದಿರುವ ನೆಲ
  • ಪಿರಿದಪ್ಪ – ಬಹಳಷ್ಟು
  • ಪುಗಿಸು – ಹೊಗಿಸು
  • ಪುಚ್ಚ – ಗರಿ
  • ಪುಯ್ಲಿಟ್ಟು – ಬೊಬ್ಬೆ ಹಾಕಿ
  • ಪುಳ್ಳಿ – ಕಟ್ಟಿಗೆ
  • ಪೂರ್ವಕ್ರಮದೊಳ್ – ಹಿಂದಿನಂತೆಯೇ, ಮೊದಲಿನಂತೆಯೇ
  • ಪೂಳ್‌ – ಹೂಳು
  • ಪೆರರ್‌ – ಬೇರೆಯವರು
  • ಪೆರೆ – ಚಂದ್ರ
  • ಪೇಳಿ – ಹೇಳಿ
  • ಪೊಗಳು – ಹೊಗಳು
  • ಪೊಡೆಮಟ್ಟು – ನಮಸ್ಕರಿಸಿ
  • ಪೊನ್ನು – ಸಂಪತ್ತು, ಹಣ
  • ಪೊಯ್ದುಕೊಂಡು – ಬಡಿದುಕೊಳ್ಳುತ್ತ
  • ಪೊಳಲ್‌ – ಪಟ್ಟಣ, ನಗರ
  • ಪೊಳ್ತುಪೋಗು – ಕತ್ತಲಾಗು
  • ಪೋಗಲ್ಪಡೆ – ಹೋಗಲು ಅನುವಾಗು
  • ಪೌರಂದರ – ಇಂದ್ರ
  • ಪ್ರಕರಾಂಜನ ಪುಂಜ – ಕಾಡಿಗೆಯರಾಶಿ (ಕಾಡಿಗೆಯಷ್ಟು ಕಪ್ಪಾದ)
  • ಪ್ರತ್ಯರ್ಥಿ – ಪ್ರತಿವಾದಿ
  • ಫೂಟು – ಅಡಿ
  • ಬಂಚಿಸು – ವಂಚಿಸು
  • ಬಂಜೆ (ದ್ಭ) – ವಂಧ್ಯಾ (ತ್ಸ) ಸಂತಾನವಿಲ್ಲದವಳು
  • ಬಂಬಲ – ಗುಂಪು
  • ಬಟ್ಟೆಯೊಳೆಲ್ಲಂ – ದಾರಿಯಲ್ಲೆಲ್ಲ
  • ಬಡಿ – ಹೊಡೆ, ಚಚ್ಚು
  • ಬನ್ನ – ಕಷ್ಟ, ತೊಂದರೆ
  • ಬಯಕೆ – ಇಚ್ಛೆ
  • ಬರಡು – ಪೊಳ್ಳು, ಹಾಳುಬಿದ್ದಿರುವ
  • ಬರವಂ – ಬರುವಿಕೆಯನ್ನು
  • ಬಲವಂದು – ಪ್ರದಕ್ಷಿಣೆ ಬಂದು
  • ಬವರ – ಜಗಳ, ಯುದ್ಧ FDA- 2018
  • ಬಸಿರ್ – ಹೊಟ್ಟೆ
  • ಬಳಾರಿ – ಮಾರಿ
  • ಬಳಿ – ದಾರಿ
  • ಬಳಿ-ಅನಂತರ
  • ಬಾಯಾರ್ದು – ಕೂಗಾಡಿ
  • ಬಾಯ್ – ಬಾಯಿ
  • ಬಾಯ್ದಂಬುಲಕೆ – ಎಂಜಲಿಗೆ
  • ಬಾಳ್ವಂತರ್ಥಂ – ಬಾಳುವಷ್ಟು ಸಂಪತ್ತು
  • ಬೀಡಂಬಿಡು – ತಂಗು
  • ಬೀಯ (ದ್ಭ) – ವ್ಯಯ(ತ್ಸ), ಖರ್ಚು
  • ಬೆರಗಿಂಗೆ – ಉತ್ಸಾಹಕ್ಕೆ
  • ಬೆರಗು – ಆಶ್ಚರ್ಯ
  • ಬೆಳ್ಳಿ – ಶುಕ್ರ
  • ಬೇಗೆ – ದು:ಖವೆಂಬ ಬೆಂಕಿ
  • ಬೇಹಾರಿ (ದ್ಭ) – ವ್ಯಾಪಾರಿ(ತ್ಸ)
  • ಬ್ರಹ್ಮಾಂಡ – ಜಗತ್ತು
  • ಭಂಟ – ವೀರ
  • ಭರಪೂರ – ಪ್ರವಾಹ
  • ಭಾರ್ಗವ – ಪರಶುರಾಮ
  • ಭಾರ‍್ಯೆ – ಸತಿ, ಹೆಂಡತಿ
  • ಭೂಮಿಜಾತೆ – ಸೀತೆ
  • ಭೃಂಗೋದರ – ಹೊಗೆತುಂಬಿ
  • ಭೇದ – ವ್ಯತ್ಯಾಸ
  • ಮಕಮಲ್ಲು – ನಯವಾದ ಬಟ್ಟೆ (ಹುಲ್ಲಿನ ಮಕಮಲ್ಲು – ಹುಲ್ಲುಹಾಸು)
  • ಮದಿರಾ – ಸುರಾಪಾನ
  • ಮಧುಕರ – ದುಂಬಿ
  • ಮಧುಪರ್ಕ – ಅತಿಥಿಗಳಿಗೆ ನೀಡುವ ಮೊಸರು, ತುಪ್ಪ, ಹಾಲು, ಜೇನುತುಪ್ಪ,ಸಕ್ಕರೆ ಮಿಶ್ರಿತ ಪಾನೀಯ.
  • ಮನದನ್ನ – ಸ್ನೇಹಿತ
  • ಮನ್ವಂತರ – ಪರಿವರ್ತನೆಯ ಕಾಲ
  • ಮರುಕಂ – ವಕ್ರಚೇಷ್ಟೆಯು
  • ಮರುಳು – ಮೋಡಿ
  • ಮರ್ತ್ಯತ್ವವೇ – ಮನುಷ್ಯ ಸ್ವಭಾವವೇ
  • ಮಸಲತ್ತು – ಪಿತೂರಿ, ಒಳಸಂಚು
  • ಮಹಾವಟವಿಟಪಿ – ದೊಡ್ಡದಾದ ಅಶ್ವತ್ಥ ಮರ
  • ಮಹೀಪತಿ – ರಾಜ
  • ಮಾರ್ಕೊಳಲಾರದೆ – ಮೀರಲಾರದೆ
  • ಮಾಳ್ಪೆಂ – ಮಾಡುವೆನು
  • ಮಾೞ್ಕೆಯೊಳ್ – ರೀತಿಯಲ್ಲಿ
  • ಮುಕ್ತಕಂಠ – ತೆರೆದ ಮನಸ್ಸು
  • ಮುರಾರಿ – ಕೃಷ್ಣ (ಮುರ+ಅರಿ)
  • ಮುಳಿ – ಕೋಪ
  • ಮೃತ್ಪಾತ್ರ – ಮಣ್ಣಿನ ಪಾತ್ರೆ
  • ಮೇಗಿಲ್ಲದೆ – ಉತ್ತಮತನವಿಲ್ಲದೆ
  • ಮೇದಿನಿ – ಭೂಮಿ FDA- 2018
  • ಮೊರೆಯಂ – ಬಾಂಧವ್ಯವನ್ನು
  • ಮೋರೆ – ಮುಖ
  • ರಣ – ಯುದ್ಧ
  • ರವಿಸುತ – ಕರ್ಣ
  • ರವಿ – ಸೂರ್ಯ
  • ರಾಜೀವಸಖ – ಸೂರ್ಯ.
  • ರಿಪು – ಶತ್ರು
  • ರೇವು – ಬಂದರು
  • ರೋದನ – ಅಳುವಿಕೆ
  • ಲಲನೆ-ತರುಣಿ
  • ಲಾಂಛನ – ಗುರುತು, ಚಿಹ್ನೆ
  • ಲಿಖಿತ – ಬರೆಹ
  • ಲುಬ್ಧತೆ – ದುರಾಸೆ
  • ಲೂಟಿ – ಸುಲಿಗೆ
  • ಲೇಸು – ಉತ್ತಮ
  • ವಂದು – ಬಂದು
  • ವಣಿಕ್ಪುತ್ರರ್ – ವ್ಯಾಪಾರಿಗಳ ಮಕ್ಕಳು
  • ವನಧಿ – ಸಮುದ್ರ (ಹಸುರಿನ ಸಮುದ್ರ)
  • ವರಂ – ಶ್ರೇಷ್ಠ
  • ವರ್ಪುದು – ಬರುವುದು
  • ವಸಂತ – ಸಮೃದ್ಧಿ
  • ವಸಾಹತು – ಅನ್ಯ ದೇಶಿಯರ ಅಧಿಕಾರಕ್ಕೊಳಪಟ್ಟ ಪ್ರದೇಶ
  • ವಾಸಿ-ಪ್ರತಿಜ್ಞೆ
  • ವಿಭೂತಿಯಂ – ಐಶ್ವರ್ಯವನ್ನು
  • ವಿಲಾತಿ – ವಿಲಾಯಿತಿ
  • ವಿಲಾಯತಿ – ವಿದೇಶ
  • ವೇದಿ – ಹೋಮ ನಡೆಯುವ ಸ್ಥಳ
  • ವೈಜ್ಞಾನಿಕ – ವಿಜ್ಞಾನಕ್ಕೆ ಸಂಬಂಧಿಸಿದ
  • ವ್ಯವಹಿತ – ಮುಚ್ಚಿದ
  • ಶಾಲಿವನ – ಬತ್ತದ ಗದ್ದೆ
  • ಶೌರಿ – ಕೃಷ್ಣ
  • ಶೌರಿಯ – ಶೌರ್ಯ
  • ಶ್ಯಾಮಲ – ಕಪ್ಪು, ನೀಲ
  • ಶ್ರಮಣಿ – ತಪಸ್ವಿನಿ
  • ಶ್ರುತಪಾರಗ – ಶಾಸ್ತ್ರ ಪಾರಂಗತ
  • ಸಂತತಿ – ವಂಶ
  • ಸಂದೆಯ (ದ್ಭ) < ಸಂದೇಹ (ತ್ಸ)
  • ಸಂಧಿ – ಒಪ್ಪಂದ
  • ಸನಿಯ (ಹ) – ಸಮೀಪ
  • ಸಮಂತು – ಚೆನ್ನಾಗಿ
  • ಸಮಕೊಳಿಸು – ಒಪ್ಪಂದವನ್ನು ಏರ್ಪಡಿಸು
  • ಸಮನಿಸು – ಸಂಭವಿಸು
  • ಸಮರ – ಯುದ್ಧ
  • ಸಮರದೊಳ್ – ಯುದ್ಧ ಭೂಮಿಯಲ್ಲಿ
  • ಸಮುಚ್ಚಯ – ಸಮೂಹ
  • ಸರುಸಪಂ – ಸಾಸಿವೆಗಳು
  • ಸವಿ – ಸಿಹಿ
  • ಸಹಾಯ ಮಾಡುವವಳು ಹತಾಶೆ – ನಿರಾಶೆ, ಆಶಾಭಂಗ.
  • ಸಾಂತ್ವನ – ಸಮಾಧಾನಪಡಿಸು
  • ಸಾರ್ತರೆ – ಒದಗಿ ಬರಲು
  • ಸಾರ್ವುದು – ಬರುವುದು
  • ಸಿಂಪಿ – ದರ್ಜಿಯವನು
  • ಸಿದ್ಧ – ತಪಸ್ವಿ
  • ಸಿದ್ಧಾರ್ಥಂಗಳಂ – ಬಿಳಿ ಸಾಸಿವೆಗಳನ್ನು
  • ಸುತ – ಮಗ
  • ಸುಪರ್ದಿ – ವಶ
  • ಸುರಭಿ – ಕಾಮಧೇನು
  • ಸುಸಂಗತ – ಯೋಗ್ಯವಾದ
  • ಸೂನುಗಳು – ಮಕ್ಕಳು
  • ಸೂಲಗಿತ್ತಿ – ಹೆರಿಗೆಯ ಸಮಯದಲ್ಲಿ ಸಹಾಯ ಮಾಡುವವಳು
  • ಸೇಸೆಯನಿಕ್ಕಲ್ – ಮಂತ್ರಾಕ್ಷತೆ ಹಾಕಲು
  • ಸ್ಥೈರ್ಯ – ದೃಢತೆ
  • ಹಂಬಲ – ತೀವ್ರ ಆಸೆ, ಬಯಕೆ
  • ಹಗೆ – ಶತ್ರು
  • ಹಡಗು – ನಾವೆ
  • ಹಣತೆ – ದೀಪ
  • ಹತಾರ – ಆಯುಧ
  • ಹಯ – ಕುದುರೆ
  • ಹರಣ – ಕದಿಯು
  • ಹರಿಕಾರ – ಮುಂದಾಳು
  • ಹವಣು – ಸಿದ್ಧತೆ
  • ಹಸಾದ (ದ್ಭ)-ಪ್ರಸಾದ(ತ್ಸ)
  • ಹಳು – ಕಾಡು
  • ಹುಕುಂ – ಆದೇಶ
  • ಹುಸಿ – ಸುಳ್ಳು
  • ಹೊಸಪಚ್ಚೆ – ಹೊಸ ಹಸುರು, ಎಳೆಯ ಚಿಗುರು