Blog
PSI ಆಗಬೇಕಾದವರು ಓದಲೇಬೇಕಾದ ಉತ್ತಮ ಪುಸ್ತಕಗಳು (ಪೊಲೀಸ್ ಸಬ್‌ಇನ್ಸ್‌ಪೆಕ್ಟರ್)
PSI ಪರೀಕ್ಷೆಗೆ ಓದಲೇಬೇಕಾದ ಪುಸ್ತಕಗಳು.
PSI ಆಗಬೇಕೆಂಬುದು ಆಸೆ ಹೊತ್ತು ಊರು ಬಿಟ್ಟು ಓದುವ ತಪಸ್ಸಿನಲ್ಲಿ ಲಕ್ಷಾಂತರ ಅಭ್ಯರ್ಥಿಗಳು ಮುಳುಗಿದ್ದಾರೆ. ಅದರಲ್ಲಿ ಮೇಲೆ ಬರುವವರು ಬೆರಳೆಣಿಕೆಯಷ್ಟು, ಹಿಗಿರುವಾಗ ನೀವು ನಿಮ್ಮ ಸಿಂಹ ಲಾಂಛನಕ್ಕಾಗಿ ಶ್ರಮಿಸಲೇಬೇಕು. PSI ಆಗಲೇಬೇಕೆಂದು ದೃಢ ನಿರ್ಧಾರ ಹೊಂದಿರುವವರು ಓದಲೇಬೇಕಾದ ಪ್ರಮುಖ ಪುಸ್ತಕಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ.
PSI ಆಗಿ ಸೇವೆ ಸಲ್ಲಿಸಬೇಕೆಂಬ ಹಂಬಲದಿಂದ ಪರೀಕ್ಷೆಗೆ ತಯಾರಿ ನಡೆಸುವ ಪ್ರತಿಯೊಬ್ಬ ಅಭ್ಯರ್ಥಿಯು ಓದಲೇ ಬೇಕಾದ ಕೆಲವು ಪ್ರಮುಖ ಪುಸ್ತಕಗಳನ್ನು ಈ ಕೆಳಗೆ ನೀಡಲಾಗಿದೆ. PSI ಪರೀಕ್ಷೆಯೆಂದರೆ ಎರಡು ಪತ್ರಿಕೆಗಳಿರುತ್ತವೆ.
ಪೇಪರ್-1 : ಪ್ರಬಂಧ ಮತ್ತು ಭಾಷಾಂತರ (50 ಅಂಕಗಳು)
ಪೇಪರ್-2: ಸಾಮಾನ್ಯ ಜ್ಞಾನ (150 ಅಂಕಗಳು)
ಪರೀಕ್ಷೆಗೆ ತಯಾರಿ ನಡೆಸುವಾಗ ಈ ಅಂಶಗಳು ಪ್ರಮುಖವಾಗಿವೆ.
ಮೊದಲನೆಯದು-1: ಪರೀಕ್ಷೆಗೆ ಸಂಬಂಧಿಸಿದ ಹಿಂದಿನ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣೆ:
ಪರೀಕ್ಷೆಗೆ ತಯಾರಿಯನ್ನು ನಡೆಸುವ ಪರೀಕ್ಷೆಯ ಸ್ವರೂಪವನ್ನು ತಿಳಿಯಲು ಹಿಂದೆ ನಡೆದ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸುವುದರ ಜೊತೆಗೆ ಪತ್ರಿಕೆಯನ್ನು ವಿಶ್ಲೇಷಿಸಬೇಕು.
ಓದಬೇಕಾದ ಅತ್ಯುತ್ತಮ ಪುಸ್ತಕ: PSI ಶಬರಿ ಪರೀಕ್ಷಾ ಮಾರ್ಗದರ್ಶಿ
S.no | Paper-1: Book Name |
---|---|
1. | PSI ಪ್ರಬಂಧಗಳು-ಬಾಬುರೆಡ್ಡಿ, PSI ಪ್ರಚಲಿತ ಪ್ರಬಂಧಗಳು ಪತ್ರಿಕೆ-1 ಸ್ಪರ್ಧಾ ಉನ್ನತಿ |
2 | ಭಾಷಾಂತರ ಮತ್ತು ಸಾರಾಂಶ ಬರವಣಿಗೆ-ಬಾಬು ರೆಡ್ಡಿ |
ಎರಡನೆಯದು-2: ಈಗ ಪೇಪರ್ 1 & ಪೇಪರ್ 2 ಕ್ಕೆ ಓದಲೇಬೇಕಾದ ಪ್ರಮುಖ ಪುಸ್ತಕಗಳನ್ನು ಸಂಗ್ರಹಿಸಬೇಕು, ಅದಕ್ಕಾಗಿ ಈ ಕೆಳಗೆ ಕೆಲವು ಪ್ರಮುಖ ಪುಸ್ತಕಗಳ list ನೀಡಲಾಗಿದೆ. ಅವುಗಳಲ್ಲಿ
S.no | Paper-2: Book Name |
---|---|
1. | PSI ಶಬರಿ ಪರೀಕ್ಷಾ ಮಾರ್ಗದರ್ಶಿ (ಹಿಂದಿನ ಪ್ರಶ್ನೆಪತ್ರಿಕೆಗಳ ಅಭ್ಯಾಸಕ್ಕಾಗಿ) |
2. | ನೂತನ GK-2021 ಬಿ.ಡಿ ಪಾಟೀಲ New Edition |
3 | ಸಾಮಾನ್ಯ ಅಧ್ಯಯನ -ಕೆ.ಎಂ ಸುರೇಶ |
4 | ಚಿಗುರು / Chiguru PSI, PC by Babu Reddy |
5 | Mission 90 - ಜ್ಞಾನ ಸಾಧನಾ |
6 | ಚಾಣಾಕ್ಯ ಕಣಜ-ಎನ್ ಎಮ್ ಬಿರಾದರ |
(ಈ ಮೇಲೆ ನೀಡಿದ ಯಾವುದಾದರು ಒಂದು ಪುಸ್ತಕವನ್ನು ಆಯ್ಕೆಮಾಡಿಕೊಳ್ಳಿ.) | |
7 | ಸಂವಿಧಾನ: ಭಾರತದ ಸಂವಿಧಾನ ಪಿ.ಎಸ್ ಗಂಗಾಧರ, ಹುಸೇನಪ್ಪ ನಾಯಕ |
8 | ಅರ್ಥಶಾಸ್ತ್ರ : ಭಾರತದ ಅರ್ಥಶಾಸ್ತ್ರ - ಗರಣಿಕೃಷ್ಣಮೂರ್ತಿ |
9 | ಇತಿಹಾಸ: ಭಾರತದ ಇತಿಹಾಸ - ಮಂಜುನಾಥ ಆರ್ |
10 | ಭೂಗೋಳ ಶಾಸ್ತ್ರ: ಕೆ.ಎಂ ಸುರೇಶ |
11 | ಮಾನಸಿಕ ಸಾಮರ್ಥ್ಯ: Mental Ability- ನಿಂಗಪ್ಪ A H |
12 | Science: 4G Science PSI & PC Book by Ravi H.N |
13 | ಪ್ರಚಲಿತ ಘಟನೆಗಳು: ಸ್ಪರ್ಧಾವಿಜೇತ ಮ್ಯಾಗಜೀನ್ |
14 | Computer: ಸ್ಪರ್ಧಾ ಉನ್ನತಿ ಕಂಪ್ಯೂಟರ್ ನಾಲೆಡ್ಜ್ |
15 | Gk Tricks-Ashok Mirji (ಕೆಲವು ವಿಷಯಗಳನ್ನು ಟ್ರಿಕ್ ಮೂಲಕ ಸುಲಭವಾಗಿ ನೆನಪಿಟ್ಟುಕೊಳ್ಳಲು ಉಪಯುಕ್ತ) |
16 | ಅನರ್ಘ್ಯ ಪ್ರಶ್ನೊತ್ತರ ಕೈಪಿಡಿ (ಪಶ್ನೆ ಪತ್ರಿಕೆಯ ಕೊನೆಯ ಅಂತದ ತಯಾರಿಗಾಗಿ) |
ಕೆಲವು ವಿಷಯಗಳನ್ನು Trick ಮುಖಾಂತರ ಯಾವ ರೀತಿ ಸುಲಭವಾಗಿ ನೆನಪಿಟ್ಟುಕೊಳ್ಳಬಹುದೆಂದು ಈ ಪುಸ್ತಕದಲ್ಲಿ ಕೆಲವು ಉದಾಹಣೆಗಳನ್ನು ನಿಡಿದ್ದಾರೆ, ಈ trickಗಳನ್ನು ನೀವು ತಿಳಿದುಕೊಂಡು ನಿಮ್ಮದೇ ಆದ Trick ಗಳಿಂದ ಸುಲಭವಾಗಿ ಕೆಲವು ಕ್ಲಿಷ್ಟಕರವಾದ ವಿಷಯಗಳನ್ನು ನೆನಪಿಟ್ಟುಕೊಳ್ಳಬಹುದು. ಆದ್ದರಿಂದ GK Tricks ಪುಸ್ತಕವನ್ನು ಪ್ರತಿಯೊಬ್ಬ ಸ್ಪರ್ಧಾರ್ಥಿಯು ಓದಲೇಬೇಕು.
ಕೊನೆಯ ಹಂತದಲ್ಲಿ: ಓದಿದ ವಿಷಯಗಳಲ್ಲಿ ನಿಮ್ಮ ಪ್ರಾವಿಣ್ಯತೆಯನ್ನು ಪರೀಕ್ಷಿಸಿಕೊಳ್ಳಲು ಒಂದು ದಾರಿ ಬೇಕಲ್ಲವೇ ಅದಕ್ಕಾಗಿ ಇಲ್ಲಿದೆ ಪರಿಹಾರ. ಅನರ್ಘ್ಯ ಪ್ರಶ್ನೊತ್ತರ ಕೈಪಿಡಿ
ಈ ಎಲ್ಲ ಪುಸ್ತಕಗಳನ್ನು ತೆಗೆದು ಕೊಳ್ಳುವುದರ ಜೊತೆಗೆ ಚೆನ್ನಾಗಿ ಓದಿಕೊಂಡು 3 ರಿಂದ 4 ಬಾರಿ ಪುನರಾವರ್ತನೆ ಮಾಡಬೇಕು ಹಾಗೂ ಸಾಧ್ಯವಾದಷ್ಟು Test Series ಗಳನ್ನು / ಉತ್ತಮ ಸ್ಪರ್ಧಾತ್ಮಕ ಸಂಸ್ಥೆಗಳು ನಡೆಸುವ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಬಿಡಿಬೇಕು ಸಾಧ್ಯವಾದರೆ ನೇರವಾಗಿ ಹೋಗಿ ಸಂಸ್ಥೆಯಲ್ಲಿಯೇ ಪರೀಕ್ಷೆಯನ್ನು ಬರೆಯಿರಿ.
ಮೇಲೆ ತಿಳಿಸಿದ ಎಲ್ಲ ಪುಸ್ತಕಗಳನ್ನು Topexams Books Store ನಲ್ಲಿ ಲಭ್ಯ ಕೇಳಿ ಪಡೆಯಿರಿ.
ಪಿ.ಎಸ್ ಐ ಪರೀಕ್ಷೆ ಬರೆಯುತ್ತಿರುವ ಎಲ್ಲರಿಗೂ ಒಳ್ಳಯದಾಗಲಿ.
ಇಂತಿ ನಿಮ್ಮ
ಸಂಜು ಸರ್