Start the Best Preparation
🥇Gold Medal 22-25 | 🥈Silver Medal 18-21| 🥉Bronze Medal 14-17
CDP Test – 3 ಬೆಳವಣಿಗೆ ಮತ್ತು ವಿಕಾಸ 2
1 / 30
1. ಅವಮಾನ ಮತ್ತು ಹೆಮ್ಮೆಯ ಭಾವನೆಯು…….. ಹಂತದಲ್ಲಿ ಬೆಳೆಯುತ್ತದೆ
ವಿಕಾಸವು ಮಾನವನಲ್ಲಿ ಕ್ರಮವಾಗಿ ಬೆಳವಣಿಗೆ ಆಗುತ್ತದೆ ಅಂದರೆ ಒಂದೊಂದು ಹಂತದಲ್ಲಿ ಮಕ್ಕಳ ಮನಸ್ಸಿನಲ್ಲಿ ಬೇರೆ ಬೇರೆ ಭಾವನೆಗಳು ಪ್ರಾರಂಭವಾಗುತ್ತವೆ ಮಕ್ಕಳಿಗೆ ಯಾರಾದರೂ ಬೈದಾಗ ಅವಮಾನ ಮತ್ತು ಯಾರಾದರೂ ಹೊಗಳಿದಾಗ ಹೆಮ್ಮೆಯು ಬಾಲ್ಯ ದಿನದಲ್ಲಿ ಪ್ರಾರಂಭವಾಗುತ್ತದೆ ಹಾಗಾಗಿ ಮಕ್ಕಳನ್ನು ಯಾವಾಗಲೂ ಉತ್ತೇಜಿಸುತ್ತಾ ಅವರಿಗೆ ಹೆಮ್ಮೆಯ ಭಾವನೆ ಬರುವಂತೆ ನೋಡಿಕೊಳ್ಳಬೇಕು. ಹಾಗೆಯೇ ಹರಿಹರಿಯದ ವಯಸ್ಸಿನಲ್ಲಿ opposite Sex ಆಕರ್ಷಣೆ ಹೆಚ್ಚಾಗುತ್ತದೆ.
2 / 30
2. ವಿಕಾಸದ ನಿರೀಕ್ಷಿತ ಫಲಿತಾಂಶ ಏನು?
Hints : ಯಾವ ವ್ಯಕ್ತಿಯೂ ತುಂಬಾ ಅನುಭವದಿಂದ ಮಾತನಾಡುತ್ತಾನೋ ಅವನಿಗೆ ವಿಕಾಸವಾಗಿರುತ್ತದೆ. ಮೆಚುರಿಟಿ ಲೆವೆಲ್ ಜಾಸ್ತಿಯಾದಂತೆ ಮಾನವನಲ್ಲಿ ವಿಕಾಸವಾಗುತ್ತದೆ
3 / 30
3. ಮಕ್ಕಳ ಸಾಮಾಜಿಕ ಬೆಳವಣಿಗೆಗೆ ಯಾವುದು ಮುಖ್ಯವಾಗಿದೆ?
Hints: ಹೆಚ್ಚು ಆಟವಾಡಿದಂತೆ ಮಕ್ಕಳು ಸಾಮಾಜಿಕವಾಗಿ ವಿಕಾಸ ಹೊಂದುತ್ತಾರೆ ಮತ್ತು ಮಕ್ಕಳಲ್ಲಿ ಸಮಾಜದ ಅರಿವು ಮೂಡುತ್ತದೆ. ಸಮಾಜದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಕರೆಯುತ್ತಾರೆ
4 / 30
4. ಬೆಳವಣಿಗೆ ಅರ್ಥ
ಬೆಳವಣಿಗೆಯು ವಿಕಾಸದ ಒಂದು ಭಾಗವಾಗಿದೆ . ನಮ್ಮ ದೇಹದಲ್ಲಿ ಆಗುವ ಬದಲಾವಣೆ ಅಂದರೆ ಉದಾಹರಣೆಗೆ ತೂಕ ಮತ್ತು ಗಾತ್ರ ಹೆಚ್ಚಾಗುವುದು . ಯಾವುದನ್ನು ಅಳತೆ ಮಾಡಲು ಸಾಧ್ಯವೋ ಅದನ್ನು ಬೆಳವಣಿಗೆ ಎಂದು ಕರೆಯುತ್ತಾರೆ
5 / 30
5. ರೀ ತಾಳು ತನ್ನ ತಂದೆಯಂತೆ ಮೂಗನ್ನು ಹೊಂದಿದ್ದಾಳೆ ಇದಕ್ಕೆ ಕಾರಣ?
Solution hints: ತಂದೆ ತಾಯಿಯಂತೆ ಮಕ್ಕಳು ಕಾಣುತ್ತಿದ್ದರೆ ಅದಕ್ಕೆ ಅನುವಂಶೀಯತೆ ಕಾರಣವಾಗಿದೆ Important points : ಅನುವಂಶತೆ ಬಗ್ಗೆ ಪರಿಚಯಿಸಿದವರು: Gregor Mendel
6 / 30
6. ಮಾನವ ವಿಕಾಸದ ಮೂರು ಪ್ರಮುಖ ಕ್ಷೇತ್ರ ಯಾವವು?
7 / 30
7. ಯಾವ ಹಂತವನ್ನು ಗೋಲ್ಡನ್ ಏಜೆಂದು ಕರೆಯುತ್ತಾರೆ?
Hints: ಬಾಲ್ಯತನವನ್ನು ಗೋಲ್ಡನ್ ಏಜ್ ಎಂದು ಕರೆಯುತ್ತಾರೆ. ಏಕೆಂದರೆ ಯಾವುದೇ ಒತ್ತಡ ಇರುವುದಿಲ್ಲ. ಇಲ್ಲಿ ಮಕ್ಕಳು ತಮ್ಮ ಜೀವನವನ್ನು ಆನಂದ ದಿಂದ ಕಳೆಯುತ್ತಾರೆ
8 / 30
8. ಈ ಕೆಳಗಿನವುಗಳಲ್ಲಿ ಯಾವ ವಿಕಾಸ ಪರಿಸರಕ್ಕೆ ಸಂಬಂಧಿಸಿದ ಅಂಶವಾಗಿಲ್ಲ
Hints : ಮಕ್ಕಳ ಬೆಳೆಯುವ ಪರಿಸರವು ಮಕ್ಕಳ ವಿಕಾಸದ ಮೇಲೆ ಪರಿಣಾಮ ಬೀಳುತ್ತದೆ
9 / 30
9. ಯಾವ ಹಂತದಲ್ಲಿ ತಂದೆ ತಾಯಿಯನ್ನು ಬಿಟ್ಟು ಸ್ನೇಹಿತರ ಜೊತೆ ಇರಲು ಇಷ್ಟಪಡುತ್ತಾರೆ?
ಉತ್ತರ ಬಾಲ್ಯತನವನ್ನು gangue age ಎಂದು ಕರೆಯುವರು. ಈ ಹಂತದಲ್ಲಿ ಮಕ್ಕಳು ಸ್ನೇಹಿತರೊಂದಿಗೆ ಸಮಯ ಕಳೆಯಲು ಬಯಸುತ್ತಾರೆ.
10 / 30
10. ಪ್ರಸವಪೂರ್ವ ನಂತರದ ಮೊದಲ ಹಂತ ಯಾವುದು?
Solution hints ಶೇಷಾವಸ್ಥೆ 0-2 year Childhood( ಬಾಲ್ಯತನ ) ಪೂರ್ವ ಬಾಲ್ಯ ತನ ( 2 to 6) ಉತ್ತರ ಬಾಲ್ಯತನ ( 6 to 12)
11 / 30
11. ಯಾವ ವಯಸ್ಸಿನಲ್ಲಿ ಅಸೂಯ ಪಡುತ್ತದೆ
Solution hints: ಎರಡು ವರ್ಷದ ನಂತರ ಮಗುವಿಗೆ ಅಸೂಯ ಭಾವನ ಬರುತ್ತದೆ
12 / 30
12. ವಿಕಾಸವು ಎಂದಿಗೂ ಮುಗಿಯದ ಪ್ರಕ್ರಿಯೆ ಈ ವಾಕ್ಯಗೆ ಸಂಬಂಧಿಸಿದ ಹೇಳಿಕೆ :
Solution hints: ಏಕೀಕರಣ ಸಿದ್ಧಾಂತ :ಮಗು ಬೆಳವಣಿಗೆಯ ಹಾದಿಯೊಂದಿಗೆ ವಿವಿಧ ಭಾಗಗಳನ್ನು ಸಂಯೋಜಿಸಲು ಪ್ರಾರಂಭಿಸುತ್ತದೆ.
13 / 30
13. ಮಾನವನಲ್ಲಿ ವಿಕಾಸ ಯಾವಾಗ ಕಾಣಿಕೊಳ್ಳುತ್ತದೆ?
ಬೆಳವಣಿಗೆಯು ನಿರ್ದಿಷ್ಟ ವಯಸ್ಸಿನ ನಂತರ ನಿಲ್ಲುತ್ತದೆ ಆದರೆ ವಿಕಾಸವು ಜೀವನದ ಉದ್ದಕ್ಕೂ ಇರುತ್ತದೆ. ಜೀವನದಲ್ಲಿ ಅನುಭವ ಹೆಚ್ಚಾದಂತೆ ಸಮಗ್ರವಾಗಿ ವಿಕಾಸವು ವಿಕಾಸವು ಹೆಚ್ಚಾಗುತ್ತಾ ಹೋಗುತ್ತದೆ
14 / 30
14. ಮಕ್ಕಳ ಮನೋವಿಜ್ಞಾನದ ಕೇಂದ್ರ ಬಿಂದು ಯಾವುದು?
ಕಲಿಕೆಯಲ್ಲಿ ಮಕ್ಕಳೇ ಕೇಂದ್ರಬಿಂದುವಾಗಿರುತ್ತಾರೆ. ಅಂದರೆ ಮಕ್ಕಳ ಅಭಿರುಚಿಗೆ ತಕ್ಕಂತೆ ಮನೋವಿಜ್ಞಾನವು ಸಿದ್ಧವಾಗಿರುತ್ತದೆ. Important points: ಶಿಶು ಕೇಂದ್ರಿತ ಶಿಕ್ಷಣ ಉತ್ತಮ : ಶಿಶು ಕೇಂದ್ರಿತ ಶಿಕ್ಷಣದಲ್ಲಿ ಮಕ್ಕಳ ಅಭಿಪ್ರಾಯಕ್ಕೆ ಮತ್ತು ಆಸಕ್ತಿಗೆ ಹೆಚ್ಚಿನ ಮಹತ್ವ. ಎಲ್ಲಾ ಮಕ್ಕಳನ್ನು ಚಟವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.
15 / 30
15. ದೈಹಿಕ ಬದಲಾವಣೆಗಳು
Solution hints : ನಿರ್ದಿಷ್ಟ ವಯಸ್ಸಿನಲ್ಲಿ ಬೆಳವಣಿಗೆ ನಿಲ್ಲುತ್ತದೆ.ಆದರೆ ಅಭಿವೃದ್ಧಿ ನಿರಂತರ ಪ್ರಕ್ರಿಯೆ
16 / 30
16. ಕೆಳಗಿನವುಗಳಲ್ಲಿ ಯಾವುದು ಒಂದು ವಿಕಾಸಕ್ಕೆ ಬಾಹ್ಯ ವಾಗಿ ಪರಿಣಾಮ ಬೀಳುವ ಅಂಶ
Solution hints: ಒಬ್ಬ ವ್ಯಕ್ತಿಯ ವಿಕಾಸಕ್ಕೆ ಆಂತರಿಕ ಅಂಶಗಳು ಮತ್ತು ಬಾಹ್ಯ ಅಂಶಗಳು ಕಾರಣ ಆಂತರಿಕ ಅಂಶ : ಅನುವಂ ಶೀಯತೆ
17 / 30
17. ಆರರಿಂದ ಹತ್ತನೇ ವಯಸ್ಸಿನಲ್ಲಿ ಮಕ್ಕಳಿಗೆ ಯಾವುದರ ಮೇಲೆ ಆಸಕ್ತಿ ತೋರಿಸುತ್ತಾರೆ?
Solution hints: ಇದು ಉತ್ತರ ಬಾಲ್ಯತನದಲ್ಲಿ ಮಕ್ಕಳು ಶಾಲೆಗೆ ಹೋಗಲು ಬಯಸುತ್ತಾರೆ. ಮತ್ತು ಶಾಲೆಯ ಸ್ನೇಹಿತರ ಜೊತೆಗೆ ಸಮಯವನ್ನು ಕಳೆಯಲು ಬಯಸುತ್ತಾರೆ
18 / 30
18. ವಿಕಾಸ ಯಾವಾಗಿನಿಂದ ಆರಂಭವಾಗುತ್ತದೆ?
ಒಂದು ಮಗುವಿನ ವಿಕಾಸವು ತಾಯಿಯ ಗರ್ಭ ತಾಯಿಯ ಗರ್ಭದಿಂದ ಪ್ರಾರಂಭವಾಗುತ್ತದೆ ಪ್ರಾರಂಭವಾಗುತ್ತದೆ ಮತ್ತು ವಿಕಾಸವು ಜೀವನ ಪರ್ಯಂತ ಇರುತ್ತದೆ. ವಿಕಾಸವು ಹುಟ್ಟಿನಿಂದ ಸ ಸಾವಿನವರೆಗೆ ಆಗುವ ಎಲ್ಲಾ ಬದಲಾವಣೆಗಳನ್ನು ಒಳಗೊಂಡಿದೆ
19 / 30
19. ಅರಿವಿನ ವಿಕಾಸ ಎಂದರೆ
Solution hints ವಿಕಾಸದ ವಿಧಗಳು 1) ಭಾವನಾತ್ಮಕ ವಿಕಾಸ ( ಭಾವನೆಗಳನ್ನು ನಿಯಂತ್ರಿಸುವುದು ) 2) ಸಮಾಜಿಕ ವಿಕಾಸ ಸಮಾಜ ಜೊತೆಗೆ ಹೊಂದಾಣಿಕೆಯನ್ನು ಇರುವುದು 3) ಬೌದ್ಧಿಕ ವಿಕಾಸ ( ಬುದ್ಧಿ ಬೆಳವಣಿಗೆ intelligence) 4) ದೈಹಿಕ ವಿಕಾಸ ( ದೇಹದ ಭಾಗಗಳ ಬೆಳವಣಿಗೆ ) Important points : ಭಾವನಾತ್ಮಕ ವಿಕಾಸವನ್ನು ಪರಿಚಯಿಸಿದವರು : Peter Salavoy and John Mayer . ಬೌದ್ಧಿಕ ವಿಕಾಸದ ಪ್ರತಿಪಾದಕರು ಪಿಯಾಜೆ
20 / 30
20. ವಿಕಾಸದ ದಿಕ್ಕು ಯಾವುದು
Solution hints: proxmidistal ( inner to outer ) ಶಿರೋಪಾದಾಮಿ ಮುಖ ತಲೆಯಿಂದ ಪಾದದವರೆಗೆ
21 / 30
21. ಯಾವ ಹಂತದಲ್ಲಿ ದೈಹಿಕ ಬೆಳವಣಿಗೆ ತ್ವರಿತ (raid growth ) ಆಗಿರುತ್ತದೆ
Hints: ಹಸುಳೆತನದಲ್ಲಿ ಅಥವಾ ಶೇಷಾವಸ್ಥೆಯಲ್ಲಿ ಮಗುವಿನ ಬೆಳವಣಿಗೆ ದರವು ಜಾಸ್ತಿ ಆಗಿರುತ್ತದೆ Important points: infancy stages called as babyhood
22 / 30
22. ಹೊಸ ವಿಷಯಗಳನ್ನು ಅನ್ವೇಷಿಸುವ ಪ್ರವೃತ್ತಿ ಯಾವ ಹಂತದಲ್ಲಿ ಇರುತ್ತದೆ?
Solution hints: ಹಂತದಲ್ಲಿ ಮಕ್ಕಳು ಹೊಸದನ್ನು ಕಲಿಯಲು ಪ್ರಾರಂಭಿಸುತ್ತಾರೆ. ಹೊಸ ವಸ್ತುಗಳೊಂದಿಗೆ ಸಂಯೋಜನೆ ಮಾಡಲು ಪ್ರಾರಂಭಿಸುತ್ತಾರೆ. ತಮ್ಮ ಆಟಿಕೆ ವಸ್ತುಗಳು ಮುರಿದು ಅದರ ಭಾಗಗಳ ಬಗ್ಗೆ ಅನ್ವೇಷಣೆ ಮಾಡುತ್ತಾರೆ.
23 / 30
23. ಯಾವ ಹಂತದಲ್ಲಿ ಮಕ್ಕಳಲ್ಲಿ ದಂಗೆಯ ಗೆಯ ಭಾವನೆ ಬರುತ್ತದೆ?
Solution hints: adloesence stage called as stress and strom by ST hall ಈ ಹಂತದಲ್ಲಿ ಮಕ್ಕಳು ತುಂಬಾ ಗೊಂದಲದಲ್ಲಿ ಇರುತ್ತಾರೆ. ಈ ಹಂತದಲ್ಲಿ ಗಳು ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ದಂಗೆಯ ಭಾವನೆ ಮೂಡುತ್ತದೆ. ಅಂದರೆ ಎಲ್ಲದಕ್ಕೂ ಪ್ರಶ್ನಿಸಲು ಪ್ರಾರಂಭಿಸುತ್ತಾರೆ.
24 / 30
24. ಬಾಲ್ಯ ಮತ್ತು ಪ್ರೌಢಾವಸ್ಥೆಯ ನಡುವಿನ ಪರಿವರ್ತನೆಯ ಅವಧಿ ಯಾವುದು?
Hints: ಈ ಅವಧಿಯಲ್ಲಿ ಮಕ್ಕಳು ಬಾಲ್ಯದಿಂದ ಪ್ರೌಢಾವಸ್ಥೆಗೆ ಪರಿವರ್ತನೆಯಾಗುತ್ತಾರೆ ಈ ವಯಸ್ಸಿನಲ್ಲಿ ಲೈಂಗಿಕತೆಯ ಪಕ್ವತೆಯಾಗುತ್ತದೆ
25 / 30
25. ಸಂವೇದನೆಯು ಜ್ಞಾನದ ಹೆಬ್ಬಾಗಿಲು ಈ ಹೇಳಿಕೆಯು ಸಂಬಂಧಿಸಿದೆ
Solution hints ನಿಜವಾದ ಜ್ಞಾನವು ಇಂದ್ರಿಯಗಳಿಂದ ಗ್ರಹಿಸಲ್ಪಟ್ಟಿದೆ.ಮೂಲತಃ ಐದು ಇಂದ್ರಿಯಗಳಿವೆ, ದೃಷ್ಟಿ, ವಾಸನೆ, ಸ್ಪರ್ಶ, ಶ್ರವಣ ಮತ್ತು ರುಚಿ.
26 / 30
26. ವಿಕಾಸದ ಅರ್ಥ
ವಿಕಾಸ ಎಂದರೆ ಸರ್ವಾಂಗಿನ ಬೆಳವಣಿಗೆಯಾಗಿದೆ ಬೆಳವಣಿಗೆ ಎಂಬುದು ವಿಕಾಸನ ಒಂದು ಭಾಗವಾಗಿದೆ ಮತ್ತು ಬೆಳವಣಿಗೆ ವಿಕಾಸ ಒಂದಕ್ಕೊಂದು ಪೂರಕವಾಗಿದೆ ಹಾಗಾಗಿ ಪಕ್ವತೆ ಮತ್ತು ಅನುಭವಗಳನ್ನು ಕೂಡಿದಾಗ ವಿಕಾಸವಾಗುತ್ತದೆ ವಿಕಾಸವು ಹುಟ್ಟಿನಿಂದ ಸಾವಿನವರೆಗೆ ಆಗುವ ಎಲ್ಲಾ ಬದಲಾವಣೆಗಳನ್ನು ಒಳಗೊಂಡಿದೆ ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ ಆದರೆ ಬದಲಾವಣೆ ಶಾಶ್ವತವಾಗಿದೆ ಬದಲಾವಣೆ ಒಂದೇ .ಪ್ರಬುದ್ಧತೆಯು ಆನುವಂಶಿಕತೆಯ ಅನಾವರಣವಾಗಿದೆ
27 / 30
27. ಈ ಕೆಳಗಿನವುಗಳಲ್ಲಿ ಯಾವುದು ಸರಿ
Hints: ಬೆಳವಣಿಗೆಯು ವಿಕಾಸದ ಒಂದು ಭಾಗವಾಗಿದೆ ಬೆಳವಣಿಗೆಯು ಪರಿಣಾಮಕ ಬದಲಾವಣೆ ವಿಕಾಸವು ಪರಿಮಾಣಾತ್ಮಕ ಮತ್ತು ಗುಣಾತ್ಮಕ ಬದಲಾವಣೆ.
28 / 30
28. ತಾಯಿ ತನ್ನ ಅವಳಿ ಮಕ್ಕಳಲ್ಲಿ ಒಬ್ಬನನ್ನು ಗಮನಿಸುತ್ತಾಳೆ. ಒಬ್ಬನಿಗಿಂತ ಸ್ಪೀಡ್ ಆಗಿ ನಡೆಯುತ್ತಾನೆ ಇತರ. ಈ ವ್ಯತ್ಯಾಸಕ್ಕೆ ಸಂಬಂಧಿಸಿದ ವಿಕಾಸದ ತತ್ವ
ವಿಕಾಸವು ಅನುವಂಶತೆ ಮತ್ತು ಪರಿಸರ ಎರಡನ್ನು ಅವಲಂಬಿಸಿದೆ. Important points: ಶಿರೋಪಾದಮಿಕ ಬೆಳವಣಿಗೆ ಎಂದರೆ ತಲೆಯಿಂದ ಪಾದದ ಕಡೆಗೆ ಬೆಳವಣಿಗೆ
29 / 30
29. ಯಾವ ಪದವು ಮಗುವಿನ ದೇಹದ ಬೆಳವಣಿಗೆ ಬಗ್ಗೆ ಸೂಚಿಸುತ್ತದೆ?
ಯಾವುದನ್ನು ಅಳಿಯಲು ಸಾಧ್ಯವೂ ಅದನ್ನು ಬೆಳವಣಿಗೆ ಎಂದು ಕರೆಯುತ್ತಾರೆ ಬೆಳವಣಿಗೆಯನ್ನು ಅಳತೆ ಮಾಡಬಹುದು. ಉದಾಹರಣೆಗೆ ಗಾತ್ರ ಮತ್ತು ತೂಕ
30 / 30
30. ಸೀತಾ ಸೀತಾ ಕೈಯಿಂದ ಊಟ ಮಾಡುವುದನ್ನು ಇನ್ನೊಂದು ಹುಡುಗಿಯನ್ನು ನೋಡಿ ಕಲಿಯುತ್ತಾಳೆ ಇದು ವಿಕಾಸದ ಯಾವ ತತ್ವಕ್ಕೆ ಸಂಬಂಧಿಸಿದ?
ಮನುಷ್ಯನಲ್ಲಿ ಎಲ್ಲಾ ತರದ ವಿಕಾಸವಾಗುತ್ತದೆ. ಕಲಿಕೆಯಿಂದ ಮತ್ತು ಅನುಭವಗಳಿಂದ ವಿಕಾಸ ಹೆಚ್ಚಾಗುತ್ತಾ ಹೋಗುತ್ತದೆ. ಮಕ್ಕಳು ಊಟ ಮಾಡುವುದನ್ನು ಇನ್ನೊಬ್ಬರು ಮಾಡುವುದನ್ನು ನೋಡಿ ಕಲಿಯುತ್ತಾರೆ Important points: ವಿಕಾಸದ ತತ್ವ ಗಳು 1) ವಿಕಾಸವು ನಿರಂತರವಾಗಿದೆ 2). ವಿಕಾಸ ಅನುಕ್ರಮವಾಗಿದೆ. 3) ವಿಕಾಸ ದರವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ 4)ವಿಕಾಸ ಸಾಮಾನ್ಯದಿಂದ ನಿರ್ದಿಷ್ಟವಾಗಿ 5) ಹೆಚ್ಚಿನ ಗುಣಲಕ್ಷಣಗಳು ಅಭಿವೃದ್ಧಿ ಮತ್ತು ಇತರವುಗಳಲ್ಲಿ ಪರಸ್ಪರ ಸಂಬಂಧ ಹೊಂದಿವೆ.
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 55%