Kfd Recruitment

ಕರ್ನಾಟಕ ಅರಣ್ಯ ಇಲಾಖೆಯ ವಿವಿಧ ಜಿಲ್ಲೆಗಳಲ್ಲಿ ಹೊಸ ನೇಮಖಾತಿ 2023 | KFD Recruitment 2023

Best of Luck ❤️ Read Carefully

KFD Recruitment 2023: ಅರಣ್ಯ ಇಲಾಖೆಯ ಕೊಡಗು ವೃತ್ತ ವ್ಯಾಪ್ತಿಯಲ್ಲಿ ಖಾಲಿ ಇರುವ ಆನೆ ಕಾವಾಡಿಗ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಗಳಿಗೆ ಅನುಸಾರವಾಗಿ ಉದ್ಯೋಗ ಸ್ಥಳ, ವಿದ್ಯಾರ್ಹತೆ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗೆ ವಿವರಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಸಾರ ಮಾಸಿಕ ವೇತನ ನೀಡಲಾಗುವುದು. ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ನೀಡಿ ಅಥವಾ Telegram Groupನ್ನು Join ಆಗಿ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Job Index

KFD Recruitment 2023

Basic Information
Organization Name
: Karnataka Forest Department
No of vacancies
Job Type
: State Government
Worker Salary
: ₹.18,600 – 32,600
Application Mode
: Offline
Selection Process
: ಮೌಖಿಕ ಪರೀಕ್ಷೆ, ಅರ್ಹತಾ ಪರೀಕ್ಷೆ
Job Location
: ಚಾಮರಾಜ ನಗರ, ಶಿವಮೊಗ್ಗ, ಕೊಡಗು ಮತ್ತು ಮೈಸೂರು
Official Website
: www.aranya.gov.in
Post Name / ಹುದ್ದೆಯ ಹೆಸರು
ಹುದ್ದೆಯ ಹೆಸರು ಹುದ್ದೆಗಳು
ಆನೆ ಕಾವಾಡಿಗ 4
Education / ವಿದ್ಯಾರ್ಹತೆ

ಕರ್ನಾಟಕ ರಾಜ್ಯದ ವ್ಯಾಪ್ತಿಯ ಅಧಿಸೂಚಿತ ಅರಣ್ಯದೊಳಗೆ ವಾಸಿಸುವರಾಗಿರತಕ್ಕದ್ದು.
ವಿದ್ಯಾರ್ಹತೆ: ಕನ್ನಡ ಭಾಷೆ ಮಾತನಾಡಲು ಮತ್ತು ಅರ್ಥೈಸಿಕೊಳ್ಳಲು ಶಕ್ತನಾಗಿರಬೇಕು.
ಅನುಭವ: ಆನೆ ನಿರ್ವಹಣೆಯಲ್ಲಿ ಅನುಭವ ಹೊಂದಿರುವುದು ಕಡ್ಡಾಯವಾಗಿರುತ್ತದೆ.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 35 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 38 ವರ್ಷಗಳು
SC/ST ಗರಿಷ್ಠ
: 40 ವರ್ಷಗಳು
ಪ್ರವರ್ಗ-1 / C1 ಗರಿಷ್ಠ
: 40 ವರ್ಷಗಳು
🚨 ಸೂಚನೆ: ಯೋಜನಾ ನಿರಾಶ್ರಿತರಿಗೆ ಮೀಸಲಾತಿ ಇದೆ.
Application Fees / ಅರ್ಜಿ ಶುಲ್ಕ
ಸಾಮಾನ್ಯ ವರ್ಗ
ಹಿಂದುಳಿದ ವರ್ಗ (OBC )
SC/ST ಅರ್ಜಿ ಶುಲ್ಕ
ಪ್ರವರ್ಗ-1 (C1) ಶುಲ್ಕ
ಮಹಿಳೆಯರಿಗೆ (Women)
ಮಾಜಿ ಸೈನಿಕರಿಗೆ
ಅಂಗವಿಕಲರಿಗೆ
🚨 ಸೂಚನೆ: As per the rule’s of Government/Organisation
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 30-03-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 29-04-2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ
ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು “ಆನೆ ಕಾವಾಡಿಗ ಹುದ್ದೆಗೆ ಅರ್ಜಿ” ಎಂದು ಕವರಿನ ಮೇಲೆ ಬರೆದು ಜಿಲ್ಲೆಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದಿನಾಂಕ 30-03-2023 ರಿಂದ 29-04-2023ರ ಸಂಜೆ 5.30ಗಂಟೆಯವರೆಗಿನ ಅವಧಿಯೊಳಗೆ ತಲುಪಿಸಬೇಕಾಗಿರುತ್ತದೆ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಆಯ್ಜೆ ಮಾಡುವ ವಿಧಾನ:

1. ಸಂದರ್ಶನಕ್ಕೆ ನಿಗದಿಪಡಿಸಿದ ದಿನಾಂಕದಂದು ನಿಗದಿತ ಸಮಯ ಹಾಗೂ ಸ್ಥಳಕ್ಕೆ ಅಭ್ಯರ್ಥಿಗಳು ಅಗತ್ಯ ಎಲ್ಲಾ ಮೂಲ ಹಾಗೂ ದೃಢೀಕೃತ ದಾಖಲಾತಿಗಳೊಂದಿಗೆ ಆಯ್ಕೆ ಸಮಿತಿಯ ಮುಂದೆ ಹಾಜರಾಗಬೇಕು.

2. ದಾಖಲಾತಿಗಳ ಪರಿಶೀಲನೆಗಾಗಿ ಈ ಕೆಳಕಂಡ ಮೂಲ ದಾಖಲಾತಿ ಹಾಗೂ ದೃಢೀಕೃತ ದಾಖಲಾತಿಗಳನ್ನು ಆಯ್ಕೆ ಸಮಿತಿಯ ಮುಂದೆ ಹಾಜರುಪಡಿಸತಕ್ಕದ್ದು.

3. ಆನೆ ನಿರ್ವಹಣೆಯಲ್ಲಿ ಅನುಭವ ಹೊಂದಿರುವ ಬಗ್ಗೆ ವಲಯ ಅರಣ್ಯಾಧಿಕಾರಿ ಅಥವಾ ಅವರಿಗಿಂತ ಮೇಲ್ಪಟ್ಟ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ ಹೊಂದಿರಬೇಕು.

4. ಕರ್ನಾಟಕ ರಾಜ್ಯ ವ್ಯಾಪ್ತಿಯ ಅಧಿಸೂಚಿತ ಅರಣ್ಯದೊಳಗೆ ಪ್ರಸ್ತುತ ವಾಸ ಮಾಡುತ್ತಿದ್ದಾರೆ ಎಂಬ ಬಗ್ಗೆ ಸಂಬಂಧಿಸಿದ ತಹಶೀಲ್ದಾರರಿಂದ ಪಡೆದ ಪ್ರಮಾಣ ಪತ್ರ ಹೊಂದಿರಬೇಕು.

5. ಜನ್ಮ ದಿನಾಂಕದ ದೃಢೀಕರಣ ಪತ್ರ (ಜನನ ಪ್ರಮಾಣ ಪತ್ರ / ಶಾಲಾ ದಾಖಲಾತಿ ಪತ್ರ / ಆಧಾರ ಕಾರ್ಡ್)

6. ನಿಗದಿತ ನಮೂನೆಯಲ್ಲಿ ಜಾತಿ ಪ್ರಮಾಣ ಪತ್ರ ಹೊಂದಿರಬೇಕು. (ಮಿಸಲಾತಿ ಕೋರಿದಲ್ಲಿ ಮಾತ್ರ)

7. ಈ ದಾಖಲಾತಿಗಳನ್ನು ಸಲ್ಲಿಸಲು ಯಾವುದೇ ಕಾಲ ವಿಸ್ತರಣೆ ನೀಡಲಾಗುವುದಿಲ್ಲ.

ವಿವಿಧ ಪ್ರವರ್ಗಗಳ ಅಡಿಯಲ್ಲಿ ಮೀಸಲಾತಿ ಕೋರಿದ ಅಭ್ಯರ್ಥಿಗಳು, ಮೂಲ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಹಾಜರುಪಡಿಸಬೇಕಾದ ಪ್ರಮಾಣ ಪತ್ರಗಳನ್ನು ಹಾಜರುಪಡಿಸದೇ ಇದ್ದ ಪಕ್ಷದಲ್ಲಿ ಅವರು ಕೋರಿರುವ ಮೀಸಲಾತಿಯನ್ನು ರದ್ದುಪಡಿಸಿ, ಸಾಮಾನ್ಯ ಅರ್ಹತೆಯ ಅಭ್ಯರ್ಥಿಯೆಂದು ಅವರನ್ನು ಪರಿಗಣಿಸಲಾಗುವುದು.

8. ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆ ನಂತರ ಸಂದರ್ಶನ ಪ್ರಕ್ರಿಯೆಗೆ ಆಯ್ಕೆ ಸಮಿತಿ ಮುಂದೆ ಹಾಜರಾಗಬೇಕಾಗುತ್ತದೆ.

9. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳನ್ನು ಕನ್ನಡ ಭಾಷೆಯನ್ನು ಮಾತನಾಡುವ ಮತ್ತು ಅರ್ಥೈಸಿಕೊಳ್ಳುವ ಸಾಮಾರ್ಥ್ಯದ ಬಗ್ಗೆ ಹಾಗೂ ಆನೆ ನಿಭಾಯಿಸುವ ಸಾಮಾರ್ಥ್ಯದ ಬಗ್ಗೆ ಗರಿಷ್ಟ (100) ಅಂಕಗಳಿಗಾಗಿ ಪರೀಕ್ಷೆಗೆ, ಒಳಪಡಿಸಲಾಗುವುದು.

10. ನಂತರ, ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಹಾಗೂ ಮೀಸಲಾತಿ ನಿಯಮಗಳ ಅನುಸಾರ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ, ಆಯ್ಕೆ ಪಟ್ಟಿಯನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿ, ಸದರಿ ಆಯ್ಕೆ ಪಟ್ಟಿಯನ್ನು ನೇಮಕಾತಿ ಪ್ರಾಧಿಕಾರಿಗೆ ಕಳುಹಿಸಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ
ಈ ಅಧಿಸೂಚನೆಯೊಂದಿಗೆ ಪ್ರಕಟಿಸಿರುವ ಅರ್ಜಿ ನಮೂನೆಯಲ್ಲಿ ಮಾತ್ರ ಅಭ್ಯರ್ಥಿಗಳು ಅರ್ಜಿಯನ್ನು ಬೆರಳಚ್ಚು / ಕಂಪ್ಯೂಟರ್ ಪ್ರಿಂಟ್ ಮಾಡಿಸಿ, ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸತಕ್ಕದ್ದು.

ಕೊಡಗು ವಿಭಾಗ
ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ
ಕೊಡಗು ವೃತ್ತ, ಅರಣ್ಯ ಭವನ
ಮೈಸೂರು ರಸ್ತೆ, ಮಡಿಕೇರಿ 571201
ಕೊಡುಗು ಜಿಲ್ಲೆ

ಚಾಮರಾಜ ವಿಭಾಗ
ಮುಖ್ಯ ಸಂರಕ್ಷಣಾಧಿಕಾರಿಗಳ ಕಛೇರಿ (ಪ್ರಾದೇಶಿಕ)
ಚಾಮರಾಜನಗರ ವೃತ್ತ, ಸುಲ್ತಾನ ಷರೀಫ್‌ ವೃತ್ತ
ಸತ್ಯಮಂಗಲ ರಸ್ತೆ ಚಾಮರಾಜ ನಗರ 571313

ಮೈಸೂರು ವಿಭಾಗ
ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ
ಮೈಸುರು ವೃತ್ತ, ಅರಣ್ಯ ಭವನ ಅಶೋಕಪುರಂ
ಮೈಸೂರು 570008

ಶಿವಮೊಗ್ಗ ವಿಭಾಗ
ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ
ಶಿವಮೊಗ್ಗ ವೃತ್ತ, ಶಿವಮೊಗ್ಗ
ಹೊಳೆಹೊನ್ನೂರು ರಸ್ತೆ, ಸರ್ಕಾರಿ ಶ್ರೀಗಂಧ ಆವರಣ, ವಿದ್ಯಾನಗರ
ಶಿವಮೊಗ್ಗ 577203