[PDF]18 ಸೆಪ್ಟೆಂಬರ್ 2020ರ ಪ್ರಚಲಿತ ವಿದ್ಯಮಾನಗಳು Current Affairs

ಪ್ರಚಲಿತ ಘಟನೆಗಳು 2020

Daily Current Affair for All competitive exams State, National and International information’s on Sports, Polity, Economics, General Events, Science & Technology and so on.

A) ಕನ್ನಡದಲ್ಲಿ ವಿವರಣಾತ್ಮಕ ಪ್ರಚಲಿತ ಘಟನೆಗಳು

1) ರಾಜ್ಯಗಳ ಪ್ರಾದೇಶಿಕ ಭಾಷೆಗಳಿಗಿಲ್ಲ ‘ಅಧಿಕೃತ ಭಾಷೆ’ಯ ಸ್ಥಾನಮಾನ ಗೌರವ: ಕೇಂದ್ರ ಸರ್ಕಾರ
ಹಿಂದಿ ಮತ್ತು ಇಂಗ್ಲಿಷ್‌ ಸರ್ಕಾರದ ಅಧಿಕೃತ ಭಾಷೆಗಳಾಗಿವೆ, ಆ ಪಟ್ಟಿಗೆ ಪ್ರಾದೇಶಿಕ ಭಾಷೆಗಳನ್ನು ಸೇರಿಸುವ ಆಲೋಚನೆ ಇಲ್ಲ.
ಹೆಚ್ಚಿನ ಮಾಹಿತಿಗಾಗಿ ಮುಖ್ಯಾಂಶಗಳನ್ನು ಓದಿಕೊಂಡು pdf ಡೌನಲೋಡ್‌ ಮಾಡಿಕೊಳ್ಳಿ.

2) ಜಾಗತಿಕ ಸ್ಮಾರ್ಟ್‌ ಸಿಟಿ ಸೂಚ್ಯಂಕ (Global Smart City Index): ಕುಸಿತ ಕಂಡ ಭಾರತದ ನಗರಗಳು
‘ಜಾಗತಿಕ ಸ್ಮಾರ್ಟ್‌ ಸಿಟಿ ಸೂಚ್ಯಂಕ 2020’ರಲ್ಲಿ (SCI ‘Smart City Index) ಭಾರತದ ನಗರಗಳಾದ ನವದೆಹಲಿ, ಮುಂಬೈ, ಹೈದರಾಬಾದ್‌ ಮತ್ತು ಬೆಂಗಳೂರು ತೀವ್ರ ಕುಸಿತ ಕಂಡಿವೆ. ಸಿಂಗಪುರ ಮೊದಲ ಸ್ಥಾನ ಪಡೆದಿದೆ.

3) ಗಿಲ್ಗಿಟ್ – ಬಾಲ್ಟಿಸ್ತಾನ್ ಪ್ರದೇಶವನ್ನು ಸಂವಿಧಾನಾತ್ಮಕವಾಗಿ ‘ಪರಿಪೂರ್ಣ ಪ್ರಾಂತ್ಯ‘ದ ಸ್ಥಾನಮಾನ ನೀಡಲು ಪಾಕಿಸ್ತಾನ ತೀರ್ಮಾನ.
ಇತ್ತೀಚೆಗೆ ‘ಗಿಲ್ಗಿಟ್–ಬಾಲ್ಟಿಸ್ತಾನ್‌ ಪ್ರದೇಶಗಳನ್ನು ಪಾಕಿಸ್ತಾನ ಅಕ್ರಮವಾಗಿ ಅತಿಕ್ರಮಿಸಿಕೊಂಡಿದೆ. ಹೀಗಾಗಿ ಆ ಪ್ರದೇಶಗಳ ಮೇಲೆ ಪಾಕಿಸ್ತಾನಕ್ಕಾಗಲೀ ಆ ದೇಶದ ನ್ಯಾಯಾಂಗಕ್ಕಾಗಿ ಯಾವುದೇ ಹಕ್ಕಿಲ್ಲ ಎಂದು ಭಾರತ ಪುನರುಚ್ಚರಿಸಿದೆ.

4) ಮಾನವ ಬಂಡವಾಳ ಸೂಚ್ಯಂಕ: ದೇಶಕ್ಕೆ 116ನೇ ಸ್ಥಾನ ಭಾರತಕ್ಕೆ ( ಈ ಹಿಂದೆ ಭಾರತಕ್ಕೆ 115ನೇ ಸ್ಥಾನ ಲಭಿಸಿತ್ತು)
ವಿಶ್ವಬ್ಯಾಂಕ್ ಸಿದ್ಧಪಡಿಸಿದ ‘ಮಾನವ ಬಂಡವಾಳ ಸೂಚ್ಯಂಕ’ದಲ್ಲಿ ಭಾರತ 116ನೇ ಸ್ಥಾನದಲ್ಲಿದೆ. ಆದರೆ 2018ನೇ ಸಾಲಿನಲ್ಲಿ 0.44 ಅಂಕ ಪಡೆದಿದ್ದ ಭಾರತವು 2020ರ ಸೂಚ್ಯಂಕದಲ್ಲಿ 0.49 ಅಂಕಗಳನ್ನು ಪಡೆದಿದೆ.

5) ರಕ್ಷಣಾ ಕ್ಷೇತ್ರದ ಸ್ವಯಂಚಾಲಿತ ಮಾರ್ಗದಲ್ಲಿ ಶೇಕಡಾ 74 ರಷ್ಟು ವಿದೇಶಿ ನೇರ ಹೂಡಿಕೆಗೆ ಕೇಂದ್ರ ಅನುಮತಿ.
ರಕ್ಷಣಾ ಉದ್ಯಮದಲ್ಲಿ 100% ವಿದೇಶಿ ಹೂಡಿಕೆಗೆ ಅನುಮತಿ ನೀಡಲಾಗಿದೆ, ಅಲ್ಲಿ 49% ಸ್ವಯಂಚಾಲಿತ ಮಾರ್ಗದಲ್ಲಿದೆ ಮತ್ತು ಅದನ್ನು ಮೀರಿ ಸರ್ಕಾರದ ಅನುಮೋದನೆ ಅಗತ್ಯವಾಗಿತ್ತು. ಆದರೆ ಈಗ ಶೇಕಡಾ 74 ರಷ್ಟು ವಿದೇಶಿ ನೇರ ಹೂಡಿಕೆಗೆ ಕೇಂದ್ರ ಅನುಮತಿ ನೀಡಿದೆ.

B) TOPEXAMS ONLINER -ಪ್ರಚಲಿತ ಘಟನೆಗಳು 

1. ಹೈದರಾಬಾದ್ ವಿಮೋಚನಾ ದಿನ ಎಂದು ಆಚರಿಸಲಾಗುತ್ತದೆ?
ಉತ್ತರ: ಸೆಪ್ಟೆಂಬರ್‌ 17 (ಸೆ.17,1948ರಂದು ಹೈದರಾಬಾದ್ ನಿಜಾಮರ ಆಳ್ವಿಕೆಯಿಂದ ಸ್ವತಂತ್ರ ಹೊಂದಿ, ಭಾರತದ ಒಕ್ಕೂಟದಲ್ಲಿ ವಿಲೀನವಾಯಿತು.)

2. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ಶೇಕಡಾ ಎಷ್ಟು ಇಳಿಕೆ ಕಂಡಿದೆ?
ಉತ್ತರ: 23.9 ರಷ್ಟು ಇಳಿಕೆ ಕಂಡಿದೆ

3. ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟ ಯಾವ ಮಸೂದೆ, ವಾಯುಯಾನ ಏಜೆನ್ಸಿಗಳಾದ DGCA, BCAS and AAIBಯನ್ನು ಶಾಸನಬದ್ಧ ಸಂಸ್ಥೆಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತದೆ?
ಉತ್ತರ: Aircraft (Amendment)bill 2020

4. ಭಾರತವು ಯಾವ ದೇಶದೊಂದಿಗೆ ರಕ್ಷಣಾ ತಂತ್ರಜ್ಞಾನ ಮತ್ತು ವ್ಯಾಪಾರ ಉಪಕ್ರಮ / Defence Technology and Trade Initiative (DTTI) ಸಭೆ ನಡೆಸಿತು?
ಉತ್ತರ: ಯುನೈಟೆಡ್ ಸ್ಟೇಟ್ಸ್

5. ಅಂತರಾಷ್ಟ್ರೀಯ ಓಜೋನ್‌ ಪದರ ಸಂರಕ್ಷಣಾ ದಿನ 2020 ದೈಯವಾಕ್ಯವೇನು?
ಉತ್ತರ: Ozone for life

Click on Buttons to Direct PDF Download
ಸೂಚನೆ: ಡೌನ್‌ಲೋಡ್‌ ಬಟನ್‌ ಕ್ಲಿಕ್‌ ಮಾಡಿದ ನಂತರ PDF ಪೈಲ್‌ಗಳು ಡೌನಲೋಡ್‌ ಆಗುವುದು ಕಾಣದಿದ್ದರೆ, File Manager ಅಥವಾ Google Drive ನಲ್ಲಿ ಇರುತ್ತವೆ, ಚೆಕ್‌ ಮಾಡಿ. ಧನ್ಯವಾದಗಳು