ಕನ್ನಡ ವ್ಯಾಕರಣ FREE Set-18 ನುಡಿಗಟ್ಟುಗಳು FDA-SDA Competitive Exams | Topexams.in

Kannada Grammer Free Set -18 ನುಡಿಗಟ್ಟುಗಳು

ಡೌನಲೋಡ್‌ ಬಟನ್‌ ಪುಟಗಳ ಕೆಳಗೆ ನೀಡಲಾಗಿದೆ. ನೋಟ್ಸ್‌ ಓದಿಕೊಂಡು ಇಷ್ಟವಾದರೆ ಡೌನಲೋಡ್ ಮಾಡಿಕೊಳ್ಳಿ.

Article Contains:

Dear Aspirants here in set-18 Completely we will discuss ಕನ್ನಡ ವ್ಯಾಕರಣ (ನುಡಿಗಟ್ಟುಗಳು) section, we provide daily 1 or 2 Free concept notes for free to all our Karnataka students. So make use of it and make others to utilize it. Kindly share the information’s with your friends and your dears for the best competitive exam’s preparation. Soon we are starting our new plan to give competitive exams preparation quizzes to recall all the studied concepts to revise once again.18

Kannada Vyakarana Notes for All Competitive Exams.

ಸಾಮಾನ್ಯವಾಗಿ ಪ್ರಶ್ನೆಪತ್ರಿಕೆಯಲ್ಲಿ ನುಡಿಗಟ್ಟುಗಳ ಮೇಲೆ 5 ರಿಂದ 9 ಅಂಕಗಳಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಆದ್ದರಿಂದ ಅತಿ ಹೆಚ್ಚು ಅಂಕಗಳನ್ನು ಗಳಿಸಲು ನುಡಿಗಟ್ಟುಗಳನ್ನು ಕಲಿಯುವುದು ಅತ್ಯಂತ ಅವಶ್ಯಕವಾಗಿದೆ. ನುಡಿಗಟ್ಟುಗಳೆಂದರೆ ಮಾತಿನಲ್ಲಿ ಬಳಸುವ ಒಂದು ಪದ ಅಥವಾ ವಾಕ್ಯ. ಪದ ಅಥವಾ ವಾಕ್ಯ, ಸಾಮಾನ್ಯ ಅರ್ಥ ಮತ್ತು ಒಳಾರ್ಥವನ್ನು ಹೊಂದಿರುತ್ತದೆ. ಇಲ್ಲಿ ಒಳಾರ್ಥವು ಅತಿ ಮುಖ್ಯ, ಮಹತ್ವ ಹೊಂದಿರುತ್ತದೆ. ಹೊರನೋಟಕ್ಕೆ
ವಾಚ್ಯಾರ್ಥವೆಂದೂ, ಒಳನೋಟಕ್ಕೆ ಅಂತರಾರ್ಥವನ್ನು ಸೂಚ್ಯಾರ್ಥವೆಂದು ಕರೆಯುತ್ತಾರೆ.

ಇವು ಭಾಷೆಯ ಸೌಂದರ್ಯವನ್ನು ರಹಸ್ಯಮಯವಾಗಿ ಸೊಗಸುಗೊಳಿಸತ್ತವೆ. ಈಗ ನಾವು ಪರೀಕ್ಷೆಯಲ್ಲಿ ನುಡಿಗಟ್ಟುಗಳ ಮೇಲೆ ಕೇಳಬಹುದಾದ ಪ್ರಶ್ನೆಗಳ ಮಾದರಿಯನ್ನು ನೋಡೋಣ.

ಪ್ರಶ್ನೆಗಳನ್ನು ಕೇಳುವ ವಿಧಾನ ಹಿಗಿರುತ್ತದೆ.
ಈ ಕೆಳಗೆ ನೀಡಲಾದ ನುಡಿಗಟ್ಟಿಗೆ ಕೊಟ್ಟಿರುವ ನಾಲ್ಕು ಪದಗಳಲ್ಲಿ/ವಾಕ್ಯಗಳಲ್ಲಿ ಸರಿಯಾದ ಅರ್ಥವನ್ನು ಗುರುತಿಸಿ.
1. ತಲೆ ಮೇಲೆ ಮೊಸರು ಅರೆ.
1) ತಲೆಯ ಮೇಲೆ ಮೊಸರು ಹಾಕು
2) ಕಾಡಿಸು
3) ಆಧಾರವಿಲ್ಲದೆ ಸಾಲ ನೀಡು
4) ನಿಶ್ಚಯವಾಗಿರುವ (ಸರಿಯಾದ ಉತ್ತರ : ಕಾಡಿಸು)

ಕನ್ನಡದ ಕೆಲವು ನುಡಿಗಟ್ಟುಗಳ ಉದಾಹರಣೆಗಳನ್ನು ಇಲ್ಲಿ ನೀಡಲಾಗಿದೆ. PDF ನಲ್ಲಿ ಎಲ್ಲ ನುಡಿಗಟ್ಟುಗಳ ಸಂಗ್ರಹವನ್ನು ನೀಡಲಾಗಿದೆ.

ಅಳಲೆಕಾಯಿ ಪಂಡಿತ – ನಕಲಿ ವೈದ್ಯ
ಅವತಾರಮುಗಿ – ಸಾಯು
ಅಳಿಲು ಸೇವೆ – ಅಲ್ಪ ಸೇವೆ
ಅಳೆದು ಸುರಿದು/ ಅಳೆದು ತೂಗಿ – ಹಿಂದೆ ಮುಂದೆ ಯೋಚಿಸಿ
ಅರೆದು ಕುಡಿಸು – ಚೆನ್ನಾಗಿ ತಿಳಿಯುವಂತೆ ಹೇಳಿಕೊಡು
ಅನ್ನದದಾರಿ – ಬದುಕುವ ಮಾರ್ಗ
ಅಡ್ಡದಾರಿ ಹಿಡಿ – ಕೆಟ್ಟ ಕೆಲಸದಲ್ಲಿ ತೊಡಗು
ಅರಣ್ಯರೋಧನ – ಯಾರ ಕಿವಿಗೂ ಬೀಳದಿರುವ ಮೊರೆ/ ಆರ್ತನಾದ
ಅಟ್ಟಕ್ಕೇರಿಸು – ಉಬ್ಬಿಸು, ಹೊಗಳು
ಅಜ್ಜಿ ಕಥೆ – ಅಟ್ಟು ಕಥೆ
ಅಗ್ರ ತಾಂಬೂಲ – ಮೊದಲ ಗೌರವ
ಅನ್ನ ಕಿತ್ತುಕೋ – ಜೀವನೊಪಾಯ ಕೆಡಿಸು
ಆಹುತಿಯಾಗು – ಬಲಿಯಾಗು
ಆಕಾಶಕ್ಕೆ ಹಾರು – ಬಹಳ ಸಂತೋಷದಿಂದಿರು
ಆರಡಿದೇಹ ಮೂರಡಿಮಾಡು – ಕುಗ್ಗಿಸು
ಇಂದ್ರ -ಚಂದ್ರ ಅನ್ನು – ಪ್ರೀತಿಯಿಂದ ಹೊಗಳು
ಇತಿಶ್ರೀ / ಇತಿಶ್ರೀ ಹಾಡು – ಮುಕ್ತಾಯ/ಮುಕ್ತಾಯ ಮಾಡು
ಇಹಲೋಕ ಯಾತೆ ಮುಗಿಸು – ಸಾಯು
ಇಂಗಿಹೋಗು – ಬತ್ತಿಹೋಗು/ ಬರಿದಾಗು
ಇದಿರು ಹಾಕಿಕೊಳ್ಳು – ವಿರೋಧವಾಗು
ಈ ಕಿವಿಯಲ್ಲಿ ಕೇಳು ಆ ಕಿವಿಯಲ್ಲಿ ಬೀಡು – ನಿರ್ಲಕ್ಷಿಸು
ಉಕ್ಕಿನ ಕಡಲೆ – ಕಠಿಣವಾದ ವಿಷಯ
ಉತ್ಸವಮೂರ್ತಿ – ಸೋಮಾರಿ
ಉಪ್ಪಿಲ್ಲ ಹುಳಿ ಇಲ್ಲ – ಸ್ವಾರಸ್ಯವಿಲ್ಲದ್ದು/ಸಾರವಿಲ್ಲದ್ದು/ ನೀರಸವಾದುದು
ಉಭಯಸಂಕಟ – ಸಂದಿಗ್ಧಸ್ಥಿತಿ
ಉರಿದುಬೀಳು – ರೇಗು ಉಂಡಮನೆಗೆ
ಎರಡುಬಗೆ – ಕೃತಘ್ನನಾಗು
ಉರಿಯುವಗಾಯಕ್ಕೆ ಉಪ್ಪುಸುರಿ – ಇನ್ನಷ್ಟು ರೇಗಿಸು/ ಇನ್ನಷ್ಟು ತೊಂದರೆ ಮಾಡು
ಉಪ್ಪು ಖಾರ ಹಚ್ಚು – ಇಲ್ಲದ್ದನ್ನು ಸೇರಿಸಿ ಹೇಳು
ಎಂಜಲಿಗೆ ಕೈಯೊಡ್ಡು – ಹಂಗಿಗೆ ಒಳಗಾಗು 

ಎಂಜಲು ಕೈಯಲ್ಲಿ ಕಾಗೆ ಓಡಿಸದವ – ಜಿಪುಣ
ಎಕ್ಕುಟ್ಟು ಹೋಗು – ಹಾಳಾಗಿ ಹೋಗು
ಎಡವಿದ ಕಡ್ಡಿ ಎತ್ತದಿರು – ಸೋಮಾರಿಯಾಗು
ಎತ್ತಂಗಡಿಯಾಗು – ವರ್ಗವಾಗು
ಎತ್ತಿದ ಕೈ – ಪ್ರಾವಿಣ್ಯವುಳ್ಳ

These notes helpful for KAS, PSI, SDA, FDA, PC, PDO, and so on. These Source notes are free for all the aspirants. Every day Free Notes and Other Materials will update on Current Affairs, Current Affairs One-liner, Current Affairs Test Series, GK Tests, Free Notes, Govt Job information, Previous Question Papers, Model Question Papers Sets. Downloading links will be provided at the bottom of the article. Scroll the article and click on the given button to download related PDF notes

You can also get more updates every day on our application. The download link is given below.

More Kannada Notes for Download